Saturday, October 22, 2011

ಶಕ್ತಿ ಸ್ಥಳವಾದ ಹಾಸನಾಂಬ ದೇವಸ್ಥಾನ - ೨೨ನೆ ಅಕ್ಟೋಬರ್ ೨೦೧೧

ಶಕ್ತಿ ಸ್ಥಳವಾದ ಹಾಸನಾಂಬ ದೇವಸ್ಥಾನವನ್ನು ದರ್ಶಿಸುವ ಆಸೆ ಹಂಬಲ ಬಹಳ ವರ್ಷಗಳದ್ದಾಗಿತ್ತು...
ಈ ದೇವಸ್ಥಾನ ವರ್ಷದಲ್ಲಿ ಸುಮಾರು ೮ ರಿಂದ ಹತ್ತು ದಿನಗಳು ಮಾತ್ರ ತೆಗೆದಿರುವ ಕಾರಣ...ಪ್ರತಿ ಬಾರಿಯೂ ಆಗುತ್ತಲೇ ಇರಲಿಲ್ಲ..

ಈ ಸಲ ಮನದ ಹಂಬಲ ಛಲವಾಗಿ ನಿಂತು...ನನ್ನ ಹಾಸನಕ್ಕೆ ಕರೆದೊಯ್ಯಲು ಪ್ರೇರೇಪಿಸಿತು.. 
ಅದರ ಫಲವಾಗಿ ಇದೆ ೨೧ನೆ ಅಕ್ಟೋಬರ್ ೨೦೧೧ ರಂದು ಹಾಸನಕ್ಕೆ ಪ್ರಯಾಣ ಬೆಳೆಸಿದೆ..ನಡು ರಾತ್ರಿ ರಾತ್ರಿಯಲ್ಲಿ ಹಾಸನ ಸೇರಿದಮೇಲೆ ಬೆಳಗಿನ ಜಾವ ನಮ್ಮ ಅಮ್ಮನ ತಮ್ಮನ ಮನೆಯಿಂದ ದೇವಸ್ಥಾನಕ್ಕೆ ಪಾದ ಬೆಳೆಸಿದೆ...ಸುಮಾರಿ ೬.೫೦ಕ್ಕೆ ಜನ ಸಾಗರ ಸುಮಾರು ಒಂದು ಮೈಲಿಗಿಂತ ಉದ್ದಕ್ಕೆ ನಿಂತಿತ್ತು..

ಸುಮಾರು ಎರಡೂವರೆ ಘಂಟೆಗಳ ಕಾಲ ಸಾಲಿನಲ್ಲಿ ನಿಂತ ಮೇಲೆ...ದೇವಿಯ ದರ್ಶನವಾಯಿತು...ಹಾಗೆ ಸಣ್ಣ ರೋಮಾಂಚನ ಮೈಯಲ್ಲಿ...ಬಹುದಿನಗಳ..ಬಹುವರ್ಷಗಳ ಒಂದು ಸಣ್ಣ ಬಯಕೆ ಇಡೇರಿದ ಸಂಭ್ರಮ...


ಸಪ್ತಮಾತ್ರಿಕೆ ನೆಲೆಸಿದ ತಾಣವಾದ ಹಾಸನ, ಹಾಸನಾಂಬ ನಗರದ ದೇವತೆಯು ಹೌದು.  ಮೂರು ಸಪ್ತಮಾತ್ರಿಕೆ ನಗರದ ದೇವಿಗೆರೆ ಯಲ್ಲಿ ನೆಲೆಸಿದ್ದರೆಂಬ ಪ್ರತೀತಿ, ಉಳಿದ ಒಬ್ಬರು ಹಾಸನದ ಸಮೀಪ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದ್ದರೆಂಬ ಮಾತಿದೆ.  ಉಳಿದ ಮೂರು ದೇವಿಯ ಅಂಶವು ಹುತ್ತದ ರೂಪದಲ್ಲಿ ಹಾಸನದಲ್ಲಿ ನೆಲೆಸಿದ್ದಾರೆ ಎನ್ನುವ ಕಥೆ ಇದೆ.

ಈ ದೇವಸ್ಥಾನವು ಸುಮಾರು ೮೦೦ ವರ್ಷಕ್ಕೊ ಮುಂಚಿನದು ಎಂದು ಹಾಸನದ ಇತಿಹಾಸ ಹೇಳುತ್ತೆ...ಈ ದೇವಸ್ಥಾನವನ್ನು ಪ್ರತಿವರುಷ ಆಶ್ವಯುಜ ಮಾಸದ ಹುಣ್ಣಿಮೆ ನಂತರ ಮೊದಲ ಗುರುವಾರ ತೆಗೆಯಾಲಾಗುತ್ತೆ...ಹಾಗು ಬಲಿ ಪಾಡ್ಯಮಿ ದಿವಸ ಬಾಗಿಲನ್ನು ಹಾಕುತ್ತಾರೆ...

ಅಂದಿನ ದಿನ ನೀರು, ಅಕ್ಕಿ ತುಂಬಿದ ಚೀಲ, ಬಲೆ, ಹತ್ತಿಸಿದ ದೀಪ ಎಲ್ಲವನ್ನು ಹಾಗೆ ಬಿಟ್ಟು, ಬಾಗಿಲು ಹಾಕುತ್ತಾರೆ.  ಆ ದೇವಸ್ಥಾನದ ಒಳಗೆ ಒಂದು ಕ್ರಿಮಿಯಾಗಲಿ, ಬೆಳಕಾಗಲಿ, ಗಾಳಿಯಾಗಲಿ ಹೋಗಲು ಸಾಧ್ಯವಿಲ್ಲ.  ಮುಂದಿನ ವರುಷ ಬಾಗಿಲು ತೆಗೆದಾಗ ಹಾಗೆಯೇ ಇರುತ್ತೆ ಅಂತ ಹೇಳುತ್ತಾರೆ.  ದೀಪವು ಕೂಡ ಉರಿಯುತ್ತ ಇರುತ್ತೆ ಅಂತ ನೋಡಿದವರು ಹೇಳುತ್ತಾರೆ.

ಈ ದೇವಸ್ಥಾನದ ಪಕ್ಕದಲ್ಲಿಯೇ, ಸಿದ್ದೇಶ್ವರನ ದೇವಸ್ಥಾನ ಇದೆ.  ಇಲ್ಲಿ ಶಿವನು ಕಿರಾತನ  ರೂಪದಲ್ಲಿ ಅರ್ಜುನನ ಸಹಿತ ಉದ್ಭವ ಆಗಿದೆ ಅಂತ ಪ್ರತೀತಿ ಇದೆ.  ಅರ್ಜುನನು ಪಾಶುಪತಾಸ್ತ್ರ ಬೇಕು ಅಂತ ತಪಸ್ಸನ್ನು ಆಚರಿಸುತಿದ್ದಾಗ ಶಿವನು ಕಿರಾತನ ರೂಪದಲ್ಲಿ ಬಂದು ಅರ್ಜುನನ ಜೊತೆ ಕಾದಾಡಿ ಸಂತುಷ್ಟನಾಗಿ ಅಸ್ತ್ರವನ್ನು ಕೊಟ್ಟ ಕಥೆ ಮಹಾಭಾರತದಲ್ಲಿ ಚಿರಪರಿಚಿತ.
ಶಿವನ ಮೂರ್ತಿಯ ಮೇಲೆ  ಹೊದೆಸಿರುವ ವಸ್ತ್ರವು ಸದಾ ಜಿನುಗುವ ನೀರಿನಿಂದ ವದ್ದೆ ಯಾಗಿರುತ್ತೆ ಅಂತ ಹೇಳುತ್ತಾರೆ.

ಇದೆ ದೇವಸ್ತಾನದ ಆವರಣದಲ್ಲಿ ರಾವಣನ ಪ್ರತಿಮೆ ಇದೆ.  ಆಶ್ಚರ್ಯಕಾರಿಯಾದ ಸಂಗತಿ ಎಂದರೆ ಹತ್ತು ತಲೆಯ ಬದಲು ಒಂಬತ್ತು ತಲೆಗಳು ಇವೆ.  ರಾವಣನ ರುದ್ರ ವೀಣಾ ನುಡಿಸುವ ಭಂಗಿ ಸೊಗಸಾಗಿ ಮೂಡಿಬಂದಿದೆ.

ಇದೆ ಆವರಣದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಕಲ್ಲಾದ ಕಳ್ಳರ ಗುಡಿ ಇದೆ, ದರ್ಭಾರ್ ಗಣಪತಿ, ೧೦೮ ಲಿಂಗಗಳ ಗುಡಿ ಇದೆ.  

ಈ ದೇವಸ್ತಾನ ಬೆಂಗಳೂರಿನಿಂದ ಸುಮಾರು ೧೭೪ ಕಿ.ಮಿ. ದೂರದಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಇದೆ.

9 comments:

  1. ಹಾಸನ ಅಂದ್ರೆ ನನ್ನ ಬಾಲ್ಯ ನೆನಪಾಗುತ್ತೆ.... ..ಹಳೆ ನೆನಪುಗಳನ್ನು ಹಸಿರು ಮಾಡಿದ್ದಕ್ಕೆ ಧನ್ಯವಾದ..

    ReplyDelete
  2. Prasad said

    Good to see this information. You are doing the good thing that keeping all experience tours & trucking and we can remember any time. thanking you

    ReplyDelete
  3. ಹಾಸನಾಂಬ ದೇವಿಯ ಬಗೆಗೆ ಕುತೂಹಲವಿತ್ತು..
    ವರ್ಷಕ್ಕೊಮ್ಮೆ ದರ್ಶನ ಇತ್ಯಾದಿ..

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು...

    ReplyDelete
  4. Thank you Sandeep..it was a dream come true for me..atlast i was able to visit this temple

    ReplyDelete
  5. Thank you Somu..yes indeed a great heritage site to visit.

    ReplyDelete
  6. Hi Prasad..thanks for visiting my page..yes putting our memories will be useful for our next generation..and also it will be a pleasure to read backwards in the leisure time....

    ReplyDelete
  7. ಪ್ರಕಾಶ ಅವ್ರೆ ತುಂಬಾ ಧನ್ಯವಾದಗಳು...ಹೌದು ಹಾಸನಾಂಬ ದೇವಿಯ ಪವಾಡದ ಬಗ್ಗೆ ಏನೇ ಮಾತಿರಲಿ ಅದರ ಐತಿಹ್ಯ ನಮ್ಮ ಮನಸನ್ನು ಸೆಳೆಯುತ್ತದೆ..

    ReplyDelete