Sunday, October 9, 2011

ಮೈಸೂರು ದಸರಾ ಎಸ್ಟೊಂದು ಸುಂದರ

ಮೈಸೂರು ದಸರಾ ಎಸ್ಟೊಂದು ಸುಂದರ ಅಂತ ಕರುಳಿನ ಕರೆಯಲ್ಲಿ ಪಿ.ಬಿ.ಎಸ್ ಧ್ವನಿಯಲ್ಲಿ ಅಣ್ಣಾವ್ರು ಹಾದಿ ಕುಣಿದಿದ್ದರು.
ಆ ಜಾಗವೇ ಹಂಗೆ..ಆ ಸಂಭ್ರಮವೇ ಹಂಗೆ...ನಾವು ಮೈಸೂರಿಗೆ ೧೨.೩೦ಕ್ಕೆ ಬಂದು ಇಳಿದಾಗ...ಅರಮನೆ ಮುಂದೆ...ದೊಡ್ಡ ದೊಡ್ಡ ಲಾರಿಗಳು ಅಲ್ಲಿನ ಕುರ್ಚಿ, ಮೇಜುಗಳನ್ನೂ ತುಂಬಿ ಕೊಳ್ಳುತ್ತಾ ಇದ್ದವು...ಅದು ಒಂದು ಭವ್ಯ ಸಮಾರಂಭ ಮುಗಿಸಿದ ಕ್ಷಣಕ್ಕೆ ಸಾಕ್ಷಿಯಾಗಿದ್ದವು...

ನಮ್ಮ ಛಾಯಾಚಿತ್ರ ಪೆಟ್ಟಿಗೆಯನ್ನು ಅರಮನೆ ಕಾವಲು ಸಿಬ್ಬಂದಿಗೆ ಒಪ್ಪಿಸಿ ಅರಮನೆ ಒಳಗೆ ನಾನು ಮತ್ತು ನನ್ನ ಸಹಪಾಟಿ ಸಂದೀಪ್ ಹೆಜ್ಜೆ ಹಾಕಿದೆವು.  ಮುಂದಿನ ಕೆಲವು ಘಂಟೆಗಳು ನಮ್ಮ ಕಣ್ಣಿನ ರೆಪ್ಪೆಗಳು ತಮ್ಮ ಕೆಲಸವನ್ನೇ ಮರೆತು ಬಿಟ್ಟವು...ಅಂಥಹ ಸೊಬಗು, ಸೌಂದರ್ಯ, ಕಲಾತ್ಮಕತೆ, ವೈಭವ ಇಂತಹವುದನೆಲ್ಲ ನೋಡ್ಬೇಕು ಅಂತ ಕಣ್ಣುಗಳು ತೆರೆದೇ ಇದ್ದವು...

ಚಿನ್ನದ ಅಂಬಾರಿ, ಚಿನ್ನದ ಸಿಂಹಾಸನ, ಕುಸುರಿ ಕಲೆಗಳು, ದೊಡ್ಡ ದೊಡ್ಡ ಪರದೆಯಲ್ಲಿ ಮೂಡಿಸಿರುವ ಚಿತ್ರಗಳು ಅರಮನೆ ಅರಸರ ಜೀವನ ಶೈಲಿ, ಆಡಳಿತ ಶೈಲಿಯನ್ನು ಎತ್ತಿ ಹಿಡಿದಿದ್ದವು...ಅಲ್ಲಿನ ಪ್ರತಿಯೊಂದು ವಸ್ತು, ಕ್ಷಣಗಳು, ತಮ್ಮ ಭವ್ಯ ಇತಿಹಾಸ ಸಾರಲು ತುದಿಗಳಲ್ಲಿ ನಿಂತಿದ್ದವು...

ದರ್ಭಾರ್ ಹಾಲು ನೋಡಿದಾಗ ಅಣ್ಣಾವ್ರ ಮಯೂರ ಚಿತ್ರ ನೆನಪಿಗೆ ಬಂತು...ಈ ಅರಮನೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಕೆಲವೇ ಚಿತ್ರಗಳಲ್ಲಿ ಇದು ಮೊದಲನೆಯದು...
ಅರಮನೆಯ ಹೊರಗೆ ನಾಕು ದಿಕ್ಕಿನಲ್ಲಿರುವ ಹುಲಿರಾಯ, ಸುತ್ತಲು ದೊಡ್ಡ ದೊಡ್ಡ ಗೋಡೆಗಳು, ಮನಸನ್ನು ಸೂರೆ ಮಾಡಿತು..ಇಂಥಹ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯ ಅಂತ ಮನಸಿನಲ್ಲಿಯೇ ನಮ್ಮ ಅಜ್ಜಿ ಭಾರತಾಂಬೆ ಹಾಗು ಅವ್ವ ಕರುನಾಡಿನ ಭುವನೇಶ್ವರಿಗೆ ನಮಿಸಿತ್ತು.


ರಾತ್ರಿ ಕತ್ತಲಿನಲ್ಲಿ ದೇವಲೋಕದ ಸ್ವರ್ಗವನ್ನೇ ಇಳಿಸಿದಾ ಹಾಗೆ ಹೊನಲು ಬೆಳಕಿನಲ್ಲಿ ಅರಮನೆ ಸುಂದರ ಯುವತಿಯಂತೆ ಮಾರ್ಪಾಡಗಿತ್ತು.  ಅತಿ ಸುಂದರ, ಅತಿ ಸುಂದರ...

ಮೈಸೂರಿನ  ಅದ್ದೂರಿತನ ಯಾವಾಗ ಬೇಕಾದರು ಕಾಣ ಸಿಗುತ್ತೆ...ಆದ್ರೆ ದಸರಾ ಸಂಧರ್ಭದಲ್ಲಿ ಅದರ ಮೋಹಕತೆ ಪದಗಳ ಎಣಿಕೆಗೆ ಸಿಗೋಲ್ಲ..ಫಲ ಪುಷ್ಪ ಪ್ರದರ್ಶನ, ದೊಡ್ಡ ಗಡಿಯಾರ, ದಸರಾ ವಸ್ತು ಪ್ರದರ್ಶನ, ಚಾಮುಂಡಿಬೆಟ್ಟ, ಬೃಂದಾವನ ಇವೆಲ್ಲ ಸದಾ ಪ್ರವಾಸಿಗರನ್ನ ಕೈ ಬೀಸಿ ಕರಿತ ಇರುತ್ತೆ...ಒಮ್ಮೆ ಹೋಗಿ ಬನ್ನಿ...

ಅಂದ ಹಾಗೆ ಸ್ನೇಹಿತನ ಮದುವೆ ಆಮಂತ್ರಣ ಒಂದು ಚಿಕ್ಕ ಮೈಸೂರ್ ಪ್ರವಾಸಕ್ಕೆ ಮನಸನ್ನು ಸಿದ್ದ ಪಡಿಸಿತ್ತು.. 

2 comments:

  1. Good one bro....nice wordings... i had been to mysore dasara during my school days....i guess now there will lot of changes... will try to visit again during dasara:-)

    ReplyDelete
  2. Thank you putty...ya there is no major changes except it has become more commercial..but feel remains the same..no change..we should visit our heritage sites often..it brings mild recharge with in us...

    ReplyDelete