Wednesday, June 27, 2012

ಸಾಗರ ಪುಸ್ತಕದ ಸಾಗರ...ಶ್ರೀಮಾನ್ ಅಂಕೆ ಗೌಡರ ಪುಸ್ತಕದ ಸಾಮ್ರಾಜ್ಯ ಒಂದು ಪಕ್ಷಿ ನೋಟ (23.06.12)


 ಭೂಮಿಯ ಸಂಪರ್ಕ ಕಡಿದುಕೊಂಡ ನಂತರ  ಅಲೆಗ್ಸಾಂಡರ್ ಸ್ವರ್ಗ ಲೋಕದಲ್ಲಿ ಓಡಾಡುತಿರುವಾಗ..ಒಂದು ಅಶರೀರವಾಣಿ ನುಡಿಯುತ್ತೆ.."ಮಗು ಅಲೆಗ್ಸಾಂಡರ್...ಸುಮ್ಮನೆ ಪ್ರಪಂಚವನ್ನೆಲ್ಲ ಜಯಿಸಲು ಹೋಗಿ ನಿನ್ನ ಶ್ರಮ ವ್ಯರ್ಥ ಮಾಡಿದೆ...ಜಗತನ್ನು ಜಯಿಸುವ ಬದಲು ಜಗತ್ತಿನ್ನಲಿರುವ ವಿಷಯಗಳನ್ನೆಲ್ಲ ತಿಳಿದುಕೋ  ..." 

"ಜಗತಿನಲ್ಲಿರುವ ವಿಷಯಗಳೆಲ್ಲ ಒಂದೇ ಕಡೆ ಎಲ್ಲಿ ಸಿಗುತ್ತದೆ..?"

ತಟ್ಟಂತೆ ಬಾಣದ ಹಾಗೆ ಬಂತು ಉತ್ತರ..."ಈ ಕೆಳಕಂಡ ವಿಳಾಸಕ್ಕೆ ಹೋಗು ಸಿಗುತ್ತದೆ..."
ಶ್ರೀಮಾನ್ ಅಂಕೆ ಗೌಡರು

ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206





"ಈ ವಿಳಾಸದಲ್ಲಿರುವ ಶ್ರೀ ಅಂಕೆ ಗೌಡರು ತಮ್ಮ ವಿಸ್ಮಯವಾದ ಹವ್ಯಾಸವನ್ನು ಸದಭಿರುಚಿಯ ಜನತೆಗೆ ತಮ್ಮ ತನು ಮನ ಧನ ಎಲ್ಲವನ್ನು ಮನಸಾರೆ ಅರ್ಪಿಸಿದ್ದಾರೆ..."

"ಶಿವ ಪಾರ್ವತಿಯನ್ನು ನೋಡಲು ಕೈಲಾಸ ನೋಡಬೇಕೆಂದರೆ ಹಿಮಾಲಯ ಶ್ರೇಣಿಗಳಲ್ಲಿರುವ  ಸಿಗುತ್ತದೆ ಮಾನಸ ಸರೋವರ ಸಿಗುತ್ತದೆ.."
"ಮಹಾಲಕ್ಷಿ-ಮಹಾವಿಷ್ಣುವನ್ನು ನೋಡಲು ವೈಕುಂ ನೋಡಬೇಕೆಂದರೆ  ಪ್ರತಿ ವರುಷ ವೈಕುಂಠ ಏಕಾದಶಿ ದಿವಸ ಪ್ರತಿ ವಿಷ್ಣು/ಶ್ರೀರಾಮ/ವೆಂಕಟೇಶ್ವರ/ಕೃಷ್ಣ ದೇವಾಲಯಗಳಲ್ಲಿ ಕಾಣ ಸಿಗುತ್ತದೆ.."
"ಬ್ರಹ್ಮನನ್ನು ನೋಡುವುದೇ ಬೇಡ ಯಾಕೆಂದರೆ ನಮ್ಮ ಭಾರತ ದೇಶದಲ್ಲಿ ಅವನ ಸೃಷ್ಟಿಯೇ ಅಪಾರ..."
"ಉಳಿಯುವುದು ಸರಸ್ವತಿ ಲೋಕ..ಬನ್ನಿ ಇಲ್ಲಿ ಸಿಗುತ್ತದೆ.."

"ನೋಡಿದಲ್ಲಿ ಸರಸ್ವತಿಯ ಸಾಕ್ಷತ್ಕಾರವಾಗುತ್ತದೆ..ಸರಸ್ವತಿ ಪುತ್ರರಾದ ಹಾಗು ಸರಸ್ವತಿ ಆರಾಧಕರಾದ ಶ್ರೀಮಾನ್ ಅಂಕೆ ಗೌಡರ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತೆ.."

ಅಲೆಗ್ಸಾಂಡರ್ ನೋಡುತ್ತಾ ಹೋದಾ ಹಾಗೆ ಪುಸ್ತಕ ಲೋಕ ತನ್ನ ಮನವನ್ನು ತೆರೆದುಕೊಳ್ಳುತ್ತಾ ಹೋಯಿತು..


ಮುಂದೆ ನೋಡಿ ಪುಸ್ತಕ ಲೋಕ ತನ್ನ ಪರಿಚಯವನ್ನು ತಾನೇ ಮಾಡಿಕೊಳ್ಳುತ್ತ ಹೋಗುತ್ತದೆ......

ಇದು ಪುಸ್ತಕ ಲೋಕ..ನೀವು ಕೇಳಿದ ವಿಷಯ, ನೋಡಬೇಕಾದ ಪುಸ್ತಕ, ಏನೇ ಇದ್ದರು ಒಂದು ಚೂರು ಬೇಸರಿಸದೆ ಈ ಮಹಾನುಭಾವರು ತಂದು ಕೊಡುತ್ತಾರೆ..ಅತ್ಯಂತ ಬೆಲೆ ಬಾಳುವ ಪುಸ್ತಕದಿಂದ ಹಿಡಿದು, ಅಭೂತ ಪೂರ್ವ, ಅನರ್ಘ್ಯ ರತ್ನಗಳಂತ ಪುಸ್ತಕಗಳು ಇಲ್ಲಿವೆ...

ಮೊದಲನೇ ಪ್ರತಿಗಳು, ಮೊದಲ ಪ್ರಕಾಶನವಾದ ನಿಯತ ಕಾಲಿಕಗಳು, ನಿಮಗೇನು ಬೇಕು..ಸಿಗುತ್ತದೆ...

ಪಟ್ಟಿ ಉದ್ದ ಮಾಡುವ ಮೊದಲು ನನ್ನ ಜನುಮದಾತರಾದ ಶ್ರೀಮಾನ್ ಅಂಕೆ ಗೌಡರ ಒಂದು ಪರಿಚಯ..ನಿಮಗಾಗಲೇಬೇಕು...
ವಿದ್ಯೆ ಹೇಳಿಕೊಟ್ಟ ಗುರುಗಳ ಒಂದು ಚಿಕ್ಕ ಮಾತು ಚಿಕ್ಕ ಸಾಹಸ ಮುಂದೆ ಒಂದು ಬೃಹತ್ ಸಾಧನೆಯಾಗಿ ಪರಿವರ್ತಿತವಾಯಿತು...
ಅವರು ನಂಬಿದ್ದು ಒಂದೇ ಸಿದ್ದಾಂತ..ತಾಳಿದವನು ಬಾಳಿಯಾನು...

ಮುಂದೆ ಅವರು ನಡೆದದ್ದೇ ಗಜ ಮಾರ್ಗವಾಯಿತು.

.ಅಡೆತಡೆಗಳು ಏನೇ ಬಂದರು ನಿಭಾಯಿಸಿಕೊಂಡು ಮುನ್ನುಗ್ಗಿದರು...ಇವರ ಸಾಹಸದ ಹಿಂದೆ ಬೆಂಗಾವಲಾಗಿ, ಸ್ಪೂರ್ತಿಯಾಗಿ ಇವರ ಸಹಧರ್ಮಿಣಿ ಇವರ ಪ್ರತಿಹೆಜ್ಜೆಯಲ್ಲೂ ತನ್ನ ಹೆಜ್ಜೆಯನ್ನು ಸೇರಿಸಿದರು...


ಪಲಿತಾಂಶ ಒಂದು ಬೃಹತ್ ಪುಸ್ತಕದ ಲೋಕ...

ಅರೆ ಅರೆ..ಇಂತಹ ಪುಸ್ತಕ ಕಡಲು ನಮ್ಮ ಕರ್ನಾಟಕದಲ್ಲಿ  ಇದೆಯೇ ಎಂದು ಅಚ್ಚರಿಯಾಗುತ್ತಿದೆಯೇ...ಖಂಡಿತ ಇದೆ ...ನೋಡಬೇಕೆನ್ನುವ ತವಕ ಹೆಚ್ಹಾಗುತಿದೆಯೇ......ಹೌದೇ!!!!!! 








ಹಾಗಾದರೆ  ನೀವು ನಿಮ್ಮ ಸ್ನೇಹಿತರನ್ನು, ಕುಟುಂಬದವರನ್ನು ಕರೆದು ತನ್ನಿ.  ಇವರ ಬಗ್ಗೆ ಹಾಗು ಪುಸ್ತಕದ ಮನೆಯ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ. 

ಶ್ರೀಮಾನ್ ಅಂಕೆ ಗೌಡರು ಬಯಸುವುದು, ತಮ್ಮ ಜೀವನದ ಉದ್ದಕ್ಕೂ ಗಳಿಸಿದ ಧನವನೆಲ್ಲ ತಮ್ಮ ಹವ್ಯಾಸಕ್ಕೆ.ಹಾಗು ನಂತರದ ಪೀಳಿಗೆಗೆ  ಕೂಡಿಟ್ಟಿರುವ,  ಈ ಜ್ಞಾನ ಸಂಪತ್ತಿನ ಸದ್-ವಿನಿಯೋಗ...ಆಗಲೇ ಅವರು ಈ ಹವ್ಯಾಸವನ್ನು ಇನ್ನಷ್ಟು ಬೆಳೆಸಿಕೊಂಡು, ಉಳಿಸಿಕೊಂಡು, ಸಂರಕ್ಷಿಸಿಕೊಂಡು ಇರಲು ಕಾರಣವಾಗುತ್ತದೆ..ನನ್ನನ್ನು ಕಾಪಾಡಲು ಆಗುವುದು .ಏನಂತೀರ ಗೆಳೆಯರೇ...

ಬನ್ನಿ ವಾರಾಂತ್ಯದಲ್ಲಿ ಆರಾಮಾಗಿ ಬೇಟಿ ನೀಡಬಹುದಾದ ಹಾಗು ಬೆಂಗಳೂರಿಗೆ ಕೇವಲ ನೂರು-ನೂರಿಪ್ಪತ್ತು ಕಿ.ಮಿ. ದೂರದಲ್ಲಿರುವ ಜ್ಞಾನ ದೇಗುಲಕ್ಕೆ ಹೋಗೋಣ..ಕೈ ಮುಗಿಯೋಣ...

ಪೂರ ಮಾಹಿತಿಗಾಗಿ ಈ ಕೆಳಕಂಡ ಲಿಂಕನ್ನು ನಿಮ್ಮ ಬಲಗೈ ಇಂದ ಕ್ಲಿಕ್ ಮಾಡಿ..ಶುಭಾರಂಭ ಮಾಡಿ...ಡೈರಿ ಮಿಲ್ಕ್ ಚಾಕ್ಲೆಟ್ ಜೊತೆ :-)
ಈ ಲೋಕವನ್ನು ನಮಗೆ ಪರಿಚಯಿಸಿದ ಬಾಲು ಸರ್ ಅವರ ಒಂದು ಲೇಖನ..ಪುಸ್ತಕ ಲೋಕದ ಒಂದು ಪರಿಚಯ

ಅಲೆಗ್ಸಾಂಡರ್ ಕಣ್ಣಿಂದ ಆನಂದ ಭಾಷ್ಪ ಉರುಳಿತು...

"ಓಹ್ ಲಾರ್ಡ್..ನಾನು ಭಾರತ ದೇಶಕ್ಕೆ ಬಂದು ದಂಡಯಾತ್ರೆ ಮಾಡಿ ತಪ್ಪು ಮಾಡಿದೆ..ಪುಸ್ತಕದ ಮನೆ ಇರುವಂತಹ ನಾಡಿನಲ್ಲಿ ಮುಂದಿನ ಜನುಮಗಳಲ್ಲಾದರೂ  ಹುಟ್ಟುವ ಸೌಭಾಗ್ಯ ಕೊಟ್ಟುಬಿಡು ಲಾರ್ಡ್..." 

8 comments:

  1. ಬಹಳ ಸುಂದರ ಮತ್ತು ಮಾಹಿತಿ-ಚಿತ್ರ ಸಮ್ಮಿಳಿತ ಲೇಖನ... ಎಲ್ಲರೂ ವಿವಿಧವಾಗಿ ಬರೆದರೆ ಎಲ್ಲಾ ಆಯಾಮಗಳನ್ನು ಪರಿಚಯಿಸಿದ್ದಂತಾಗುತ್ತದೆ.

    ReplyDelete
  2. ಶ್ರೀ ಕಾಂತ್ ಸರ್ ನಿಮ್ಮ ಅನುಭವದ ಪೂರ್ಣ ಚಿತ್ರಣ ಸುಂದರವಾಗಿ ಮೂಡಿಬಂದಿದೆ.ಮನಸೆಳೆಯುವ ಚಿತ್ರಗಳು ಅಲ್ಲಿಗೆ ಹೋಗಲು ಆಸೆ ಹುಟ್ಟಿಸುತ್ತವೆ. ಓದಿದ ಪ್ರತಿಯೊಬ್ಬರೂ ಅಲ್ಲಿಗೆ ಹೋಗಿ ಬಂದಲ್ಲಿ ಲೇಖನ ಸಾರ್ಥಕವಾಗುತ್ತದೆ.ಒಳ್ಳೆಯ ವಿಚಾರಕ್ಕೆ ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  3. ಬಹಳ ಸುಂದರವಾದ ಚಿತ್ರಣ & ಲೇಖನ .. ಮೊದಲ ನುಡಿ....ಅದ್ಬುತ......ಇವರ ಪುಸ್ತಕ ಬಂಡಾರವನ್ನು ಎಷ್ಟು ವರ್ಣಿಸಿದರು ಸಾಲದು ... ಅಲ್ವ

    ReplyDelete
  4. ಶ್ರೀಕಾಂತ್ ಸರ್,
    ಅಲೆಕ್ಸಾಂಡರ್ ಮೂಲಕ ನಮ್ಮ ಅಂಕೇಗೌಡರ ಪುಸ್ತಕ ಮನೆ ಮತ್ತು ಅದರ ವಿಶೇಷಗಳನ್ನು ವಿಭಿನ್ನವಾಗಿ ಅನೇಕ ಚಿತ್ರಗಳ ಮೂಲಕ ಮಾಹಿತಿಯನ್ನು ನೀಡಿದ್ದೀರಿ..ನಾವೆಲ್ಲ ಬ್ಲಾಗಿಗಗರು ಇಂಥ ಒಂದು ಕೆಲಸದ ನಮ್ಮ ಬದುಕನ್ನು ಸಣ್ಣದಾಗಿ ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿದ್ದೇವೆ. ಇನ್ನೂ ಅನೇಕ ಬ್ಲಾಗಿಗಗರು ಈ ವಿಚಾರದಲ್ಲಿ ಕೈಗೂಡಿಸಲಿ ಎನ್ನುವ ಆಸೆ ನನ್ನದು...

    ReplyDelete
  5. ಬಹಳ ಸುಂದರವಾಗಿ ಬರೆದಿದ್ದೀರಿ ಹಾಗೆ ಮಾಹಿತಿಯನ್ನು ನೀಡಿ ಎಲ್ಲರೂ ಹೋಗಿ ನೋಡಲೇಬೇಕು ಎನಿಸುವಂತೆ ಮಾಡಿದ್ದೀರಿ. ಧನ್ಯವಾದಗಳು

    ReplyDelete
  6. ankegoudaru tamma tandeyavaru endu tilidu santasavaayitu.

    ReplyDelete
  7. Shrikaant sir nimma lekhanagalalli punch line super iruttade.. ee lekhanada aarambhavoo haage..

    ReplyDelete