Monday, June 27, 2011

ಹಾಸನ-ಉದ್ಭವ ಗಣೇಶನ ಬೆಳವಾಡಿ - ಚಂಡಿಕಹೊಮದ ಕೌಶಿಕ - ೨೫-೨೬ ಜೂನ್ - ೨೦೧೧


ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಅಂತ ಹೇಳ್ತಾರೆ..ಇಲ್ಲಿ ಜನನಿ ಅಂದ್ರೆ ಬರಿ ತಾಯಿ ಮಾತ್ರವಲ್ಲ ತಾಯಿ-ತಂದೆ ಇಬ್ಬರು..ಅವರು ಜನಿಸಿದ ಸ್ಥಳ..ಅವರ ನೆಂಟರು-ಬಂಧು-ಬಳಗ...ಅವರ ಒಡನೆ ಒಡನಾಟ ಇವೆಲ್ಲ ವರ್ಣಿಸಲಸಾಧ್ಯ...
ಮದುವೆ.....ಅಮ್ಮನ ಸೋದರತ್ತೆಯ ಮನೆಯಲ್ಲಿ ಚಂಡಿಕ ಹೋಮ...ಎರಡು ಸಂಭ್ರಮಗಳ ಮಧ್ಯೆ ಇದ್ದ ಅಂತರ ಕೇವಲ ಎಂಟು ಕಿ.ಮಿ. ಗಳು...

                                                                                                     ಕೈ-ಮರ 
ಗಣೇಶನ ದರ್ಶನ ಮಾಡಿ ನಿಷ್ಠೆಯಿಂದ ಇಷ್ಟ ಪ್ರಾರ್ಥನೆ ಮಾಡಿ ಹೊರಗೆ ಬಂದಾಗ ಹೊಯ್ಸಳ ದೇವಾಲಯ ಕೂಗಿ ಕರೆಯಿತು. ದೇವಾಲಯ ವಾಸ್ತು ಶಿಲ್ಪ...ಅಚ್ಚರಿ ಬರಿಸುತ್ತೆ..ಇದು ಸೇರಿ ಅದೆಷ್ಟು ಸರತಿ ಇಲ್ಲಿಗೆ ಬಂದಿದ್ದೀನೋ ಲೆಕ್ಕವಿಲ್ಲ...ಆದ್ರೆ ಪ್ರತಿಬಾರಿಯೂ ಹೊಸತನ ಮೂಡಿಸುತ್ತೆ..ಅಂತಹ ಸ್ಥಳ ಇದು.







ಬೂತಯ್ಯನ ಮಗು ಅಯ್ಯು..ಬಂಗಾರದ ಮನುಷ್ಯ ಚಿತ್ರಗಳನ್ನು ಚಿತ್ರೀಕರಿಸಿದ ಕಳಸಾಪುರಕ್ಕೆ ಬಂದು ನಿಂತಾಗ ಮಹನೀಯರು ಓಡಾಡಿದ ಜಾಗಗಳು, ಚಿತ್ರೀಕರಿಸಿದ ಸ್ಥಳಗಳನ್ನು ನೋಡಿದಾಗ ಏನೋ ಒಂಥರಾ ಆನಂದಾ..ಮಹದಾನಂದ...



ದರುಶನ ಮತ್ತು ದಾರ್ಶನ ಮುಗಿದ ಮೇಲೆ ಮತ್ತೆ ಹಾಸನಕ್ಕೆ ಮಧುವೆಯ ಸಂಭ್ರಮದಲ್ಲಿ ಪಾಲುಗೊಳ್ಳಲು ಬಂದೆವು.  ಬಂಧು-ಮಿತ್ರರು ಜಮಾಯಿಸಿದ್ದರು.  ಅವರ ನಡುವೆ ಉಭಯ-ಕುಶೋಲೋಪರಿ-ಸಾಂಪ್ರತ ಆದ ಮೇಲೆ...ಶಾಸ್ತ್ರಗಳು ಮೊದಲುಗೊಂಡವು....
ಕಟ್ಟೆ ಬಳಗ, ಸುವಾಸಿತ ಧೂಪ, ಗಲಿಬಿಲಿ ಮನಸನ್ನೇ ಶಾಂತಿಗೊಳಿಸುವ ವಾತಾವರಣ ನಿಜಕ್ಕೂ ಆಹ್ಲಾದಕರ...ನಗರದ ಕಲುಷಿತ ಮನಸಿಗೆ ಸರಿಯಾದ ಕಷಾಯ...
ವೇದಘೋಷ, ಮಂತ್ರಗಳ ತರಂಗಗಳು, ಯಜ್ಞಕುಂಡ ಒಂದಕ್ಕಿಂತ ಕಂಡು ಮನಸನ್ನು ಸೂರೆಮಾಡಿದವು.  ಇನ್ನಾರು ತಿಂಗಳಿಗೆ ಬೇಕಾದ ಹುಮ್ಮಸನ್ನು ಕೊಟ್ಟ ಈ ಹೋಮ ಸಮಾರಂಭ ನಿಜಕ್ಕೂ ಶ್ಲಾಘನೀಯ.


ಮಾರನೆದಿನ ಅಂದ್ರೆ ಭಾನುವಾರ ಗಂಡಿಗೆ ಕಾಶಿದಾರಿ ತೋರಿಸಿ..ಕೌಶಿಕಕ್ಕೆ ಲಗ್ಗೆ ಹಾಕಿತು...ಇದು ಒಂದು ಸಂಪ್ರದಾಯವಾದಿಗಳ ಚಿಕ್ಕ ಗ್ರಾಮ...ಹಳ್ಳಿಯಲ್ಲೇ ಒಂದು ರೈಲು ದಾರಿ, ಮುಗಿಲು ಮುಟ್ಟುವ ಗಿಡ-ಮರಗಳು, ಕೆರೆ-ಕಟ್ಟೆ-ಭಾವಿಗಳು, ಸುಂದರವಾದ ದೇವಸ್ಥಾನಗಳು, ರುಚಿಕರ ಭೋಜನ ಎಲ್ಲವು ಮೇಳೈಸಿತ್ತು. 

ಅಮ್ಮನ ಸೋದರತ್ತೆ ಮನೆಯಲ್ಲಿ ನಾವು ತಲುಪುವ ಹೊತ್ತಿಗೆ ಚಂಡಿಕ ಹೋಮ ಶುರುವಾಗಿತ್ತು.  ದೂರದಿಂದಲೇ ಸಮಿತ್ತು, ಉತ್ತರಾಣಿ, ತುಪ್ಪ, ಬೆಲ್ಲ, ಮುಂತಾದ ಆರ್ಜ್ಯಗಳ ಸುವಾಸನೆ ಕೈ ಬೀಸಿ ಕರೆಯುತ್ತ ಇತ್ತು.  ಆಹಾ ಎಂತಹ ವಾತಾವರಣ!!!!!
ಈ ಸಮಾರಂಭ ನಡೆಸಿದ, ಆಹ್ವಾನ ಮಾಡಿದ ಎಲ್ಲರಿಗು ಹೃದಯದಲ್ಲೇ ನಮನ ತೋರಿಸಿ ಒಳಗೆ ಹೆಜ್ಜೆ ಇಟ್ಟೆವು..










ಶುಕ್ರವಾರ ಮಧ್ಯರಾತ್ರಿಯ ಹೊತ್ತಿಗೆ ಹಾಸನ ಸೇರಿದಾಗ...ನಿದ್ರಾದೇವಿ ಬಾಚಿ ತಬ್ಬಿಕೊಂಡಳು..ಬೆಳಿಗ್ಗೆ ಎದ್ದು..ಕಾರ್ಯಕ್ರಮಗಳನೆಲ್ಲ ಮುಗಿಸಿ ಇಷ್ಟ ದೇವತಾ ಪ್ರಸನ್ನ - ಬೆಳವಾಡಿ ಗಣೇಶನ ದರ್ಶನಕ್ಕೆ ಮನಸು, ದೇಹ ಎರಡು ಸಿದ್ದವಾಯಿತು. ಪಯಣಿಗರು ಮುದ್ದಿನ ಮಡದಿ, ಮುದ್ದಿನ ಪಾಪ, ಹಾಗು ಮುದ್ದಿನ ಮಗು ಮತ್ತು ನಾನು.
ಬಸ್ಸಿನಲ್ಲಿ ಪಯಣ ಮಾಡುತ್ತಿದ್ದಾಗ ಜಕಣಚಾರಿ ನೆನಪಿಗೆ ಬಂದು ನಿಲ್ಲಿ ಎಂದು ಕೂಗಿದಂತಾಯಿತು..

ಇಂಥಹ ಒಂದು ಸುಯೋಗ ಇನ್ನೊಮ್ಮೆ ನನ್ನ ಸಮಯಕ್ಕೆ ಕಾಯುತ್ತ ಇತ್ತು..ಅಮ್ಮನ ಸೋದರಮಾವನ ಮಗನ 

No comments:

Post a Comment