Monday, October 15, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೧

ತಲೆಯಲ್ಲಿ ಬೇಕಾದ್ದು ಬೇಡವಾದ್ದು ವಿಚಾರಗಳ ಮಧ್ಯೆ ಒಂದು ಸಮರವೇ ನಡೆದಿತ್ತು..ಹಾಗೆ ಮನಸು ವಿಸ್ಮಯ ಲೋಕದಲ್ಲಿ ತೇಲುತ್ತಾ ಹೋದಾಗ.."ಏನು ಮಾಡಲಿ ನಾನು ಏನು ಹೇಳಲಿ" ತ್ರಿಮೂರ್ತಿಯ  ಅಣ್ಣಾವ್ರ ಹಾಡು ನೆನಪಿಗೆ ಬಂತು..ಹಾಗೆಯೇ "ಅಂದುಕೊಂಡಂಗೆಲ್ಲ ಸಾಗದು ಜೀವನ ಗೆಳೆಯ..ವಿಧಿಯ ಆ ಆಟ"..ಮಲ್ಲ ಚಿತ್ರದ ರವಿ ಮಾಮನ ಹಾಡು ನೆನಪಿಗೆ ಬಂತು..

ಸರಿ ಒಂದು ಸ್ವಲ್ಪ ಕಾಲ ಸುತ್ತ ಮುತ್ತಲಿನ  ಪ್ರಪಂಚ ಬಿಟ್ಟು...ಶ್ರೀಯ ಪರಪಂಚದ ಕಡೆಗೆ ಸ್ವಲ್ಪ ಹೆಜ್ಜೆ  ಹಾಕೋಣ ಅನ್ನಿಸಿತು ..ಶಿರಸ್ಸಿಗೆ ಬಂದ ಯೋಚನೆ ಶಿರಸಿ (ಸಿರ್ಸಿ) ಪ್ರವಾಸ...ಮರುಯೋಚನೆ ಇಲ್ಲದೆ ಅಲೆಮಾರಿಗಳು ತಂಡದ ಕಾಯಂ ಸದಸ್ಯರಾದ ಸಂದೀಪ್, ಲತೇಶ್ , ಪ್ರಶಾಂತ್ ಬರುತ್ತೇನೆ ಎಂದರು, ರಘು ಕೂಡ ಸೇರಿಕೊಂಡರು..ಸರಿ ಅಲೆಮಾರಿಗಳು ತಂಡದ ಐದು ಮಂದಿಯ ಗುಂಪು ಸಿರ್ಸಿಗೆ ದಾಳಿ ಮಾಡಲು ಸಿದ್ಧವಾಯಿತು.
 ಅಲೆಮಾರಿಗಳು!!!
ಎರಡು ದಿನಗಳ ಈ ಸುಂದರ ಪ್ರವಾಸ ನಮ್ಮನ್ನು ಸುಮಾರು ಹದಿನೆಂಟು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯಿತು.

ಭೂದೇವಿಯ ಮಕುಟದ ನವಮಣಿಯೆ
..............
ಹಸುರಿನ ಗಿರಿಗಳ ಸಾಲೇ
ನಿನ್ನಯ ಕೊರಳಿನ ಮಾಲೆ
................
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಜಯ ಸುಂದರ ನದಿ ವನಗಳ ನಾಡೇ
...............
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ಈ ನಮ್ಮ ನಾಡಗೀತೆಯನ್ನು ಹೇಳುವುದಷ್ಟೇ ಅಲ್ಲದೆ ಅದರ ಸಾಕ್ಷಾತ್ಕಾರದ ಅನುಭವ ಕೊಟ್ಟ ಈ ಪ್ರವಾಸ ನಮ್ಮ ಅಲೆಮಾರಿಗಳು ತಂಡದ ಒಂದು ರಮಣೀಯ ಪರ್ವ ಎನ್ನಬಹುದು..

ನಮ್ಮ ಭೂದೇವಿಯ ಮಕುಟದ ನವಮಣಿಯಾದ ಕರುನಾಡ ತಾಯಿಗೆ ಒಂದು ಅನರ್ಘ್ಯ ರತ್ನ ಕೊಡೋಣ ಅಂತ ಅಂದುಕೊಂಡಿದ್ದೆವು..ನಮ್ಮ ಪ್ರವಾಸದ ಹೆಜ್ಜೆ ಗುರುತು ಗಮನಿಸಿದಾಗ ನಮಗೆ ಆಶ್ಚರ್ಯವಾಯಿತು..ಅರೆ..ರತ್ನ ಕೊಡೋಣ ಅಂದ್ರೆ..ಕೌಸ್ತುಭ ಹಾರವೇ ಆಯಿತು..ನೀವೇ ನೋಡಿ!!!

ಕರುನಾಡ ತಾಯಿಗೆ ಕೌಸ್ತುಭ ಹಾರ!!!
ಪ್ರಯಾಣ ಮುಂದುವರೆಯುತ್ತದೆ..

12 comments:

  1. ಶ್ರೀಕಾಂತ್...

    ಬಹಳ ಚಂದದ ಕಲ್ಪನೆ...!

    ನಿಮ್ಮ ಪ್ರಯಾಣದ ದಾರಿ ಹಾರದಂತಿದೆ...

    ಇನ್ನಷ್ಟು ವಿವರಗಳನ್ನು..
    ಫೋಟೊಗಳೋಡನೆ ನಿರೀಕ್ಷೆಯಲ್ಲಿರುವೆವು.....

    ReplyDelete
  2. ನಿಮ್ಮಿಂದ ನಾನು ಕಲಿಯ ಬೇಕಾದ ಮೊದಲ ಪಾಠ ಪ್ರವಾಸದ ಸಾರ್ಥಕ ಬಳಕೆ.

    ನಿಜ ನೀವು ಹೇಳಿದಂತೆ ಒಳ್ಳೆಯ ಅನರ್ಘ್ಯ ರತ್ನದ ಹಾರದಂತೆಯೇ ಇದೆ ನಿಮ್ಮ ಹೆಜ್ಜೆ ಗುರುತು.

    ಮುಂದುವರೆಯಲಿ.

    ReplyDelete
  3. ಶ್ರೀಕಾಂತ್ ಸರ್,
    ಪ್ರವಾಸದ ಪ್ರಾರಂಭ ಕುತೂಹಲಕಾರಿಯಾಗಿದೆ...ಮುಂದುವರಿಸಿ...

    ReplyDelete
  4. ಚಂದದ ಹಾರವಿದೆ , ಅದರಲ್ಲಿನ ಹೂಗಳನ್ನು ನೋಡಲು, ಮತ್ತು ಪರಿಮಳ ಸವಿಯಲು ಮನಸ್ಸು ಕಾತರಿಸುತ್ತಿದೆ .. ಬೇಗ ಮುಂದುವರಿಯಲಿ ಪ್ರಯಾಣ ..
    ಫೋಟೋಗಳಿಲ್ಲದ್ದು ಸ್ವಲ್ಪ ನಿರಾಶೆ ಮೂಡಿಸಿತು ..

    ReplyDelete
  5. ಎಲ್ಲೆಲ್ಲಿ ಹೋಗಿದ್ರಿ... ಏನೇನು ಮಾಡಿದ್ರಿ ಅನ್ನೋದು ಬೇಗ ಬರೀರಿ...ಜಾಸ್ತಿ ಕಾಯಿಸಬೇಡಿ ನಮಗೆ..ಇಲ್ಲ ಅಂದ್ರೆ ಧರಣಿ ಮಾಡಬೇಕಾಗುತ್ತೆ..ಯಾಕಂದ್ರೆ ಕುತೂಹಲ ಜಾಸ್ತಿ ಆಗ್ತಿದೆ...

    ReplyDelete
  6. ಪ್ರಕಾಶಣ್ಣ ಧನ್ಯವಾದಗಳು ನಿಮಗೆಮೊದಲು!!..ಸುಂದರ ಸ್ಥಳಗಳ ವಿವರಗಳನ್ನು ಕೊಟ್ಟಿದ್ರಿ ಅದನ್ನ ಉಪಯೋಗಿಸಿಕೊಂಡೆವು. ಖಂಡಿತ ಬರುತ್ತೆ ಮುತ್ತುಗಳ ಹಾರ ಸಿರ್ಸಿಗೆ

    ReplyDelete
  7. ಬದರಿ ಸರ್ ಎಲ್ಲರೊಡನೆ ಕಲೆತು ಸಾಗರದ ಒಂದು ಬಿಂದುವನ್ನು ಕುಡಿಯುವ ಯತ್ನ ನನ್ನದು, ಭಾಗಗಳು ಮುಂದುವರೆಯುತ್ತವೆ.ಧನ್ಯವಾದಗಳು ನಿಮಗೆ

    ReplyDelete
  8. ಶಿವೂ ಸರ್ ಧನ್ಯವಾದಗಳು ಎರಡು ದಿನದ ಪ್ರವಾಸ ಎರಡು ವರ್ಷಗಳ ಅನುಭವ ಕೊಟ್ಟಿತು..ಹೇಗೆ ಶುರುಮಾಡಲಿ ಎಂದು ಯೋಚನೆಗೆ ಬಿದ್ದಾಗ ಹೊಳೆದಿದ್ದು ಈ ರೀತಿ.ಮುಂದುವರೆದ ಭಾಗಗಳು ಬರುತ್ತವೆ ಶೀಘ್ರದಲ್ಲಿ

    ReplyDelete
  9. ಬೇಗ ಮುಂದುವರಿಸಿ:)

    ReplyDelete
  10. ಎಸ್ .ಪಿ. ನಿಮ್ಮ ಊರಿನ ಹೊವನ್ನು ಆಘ್ರಾಣಿಸಿ ಬಂದಿದ್ದೀನಿ...ಆ ಹೂವುಗಳ ಹಾರ ಮಾಡುವ ಒಂದು ಯತ್ನ ಮಾಡುತ್ತೇನೆ..ನಿರಾಶೆ ಬೇಡ ಮುಂದಿನ ಭಾಗಗಳಲ್ಲಿ ಚಿತ್ರಗಳು ಬರುತ್ತವೆ..

    ReplyDelete
  11. ಗಿರೀಶ್ ಧನ್ಯವಾದಗಳು ನಿಮಗೆ... ಧರಣಿ ಮಂಡಲದಲ್ಲೇ ನಾವು ಇರುವುದು..ಹಾಗಾಗಿ ಧರಣಿ ಬೇಡ..ಮುಂದುವರೆದ ಕಥಾನಕಗಳು ಬರುತ್ತವೆ ಶೀಘ್ರದಲ್ಲಿ

    ReplyDelete
  12. ಎಸ್ .ಎಸ್ ..ಧನ್ಯವಾದಗಳು..ಬರುತ್ತೆ ಮುಂದಿನ ಬಾಗ..ಶೀಘ್ರದಲ್ಲಿ :-)

    ReplyDelete