Tuesday, October 30, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೬

ಹೋಟೆಲ್ ಮಧುವನದ ಶ್ರೀ ಪ್ರಕಾಶ್ ಅವರಿಂದ ಮಾರ್ಗಸೂಚಿ ಪಡೆದು, ವಿಘ್ನವಿನಾಶಕ ಸಿರ್ಸಿ ಮತ್ತು ಸುತ್ತ ಮುತ್ತಲ ಸ್ಥಳದಲ್ಲಿ ಶಕ್ತಿ ದೇವರು ಎಂದು ಹೆಸರಾದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಹೋದೆವು.

ಆಶ್ಚರ್ಯ ಎನ್ನುವಂತೆ, ದೇವಸ್ಥಾನ ಒಂದು ಭವ್ಯ ಮನೆಯ ಹಾಗೆ ಇದ್ದದ್ದು.  ನಾವು ಅನುಮಾನದಿಂದಲೇ ಆ ಕಟ್ಟಡದ ಮೆಟ್ಟಿಲು ಹತ್ತಿದಾಗ ಎದುರಿಗೆ ಒಂದು ದೊಡ್ಡ ಗಣಪ ಕೂತಿದ್ದ,  ದೇವರ ಮೂರ್ತಿ ಬಹು ಆಕರ್ಷಕವಾಗಿತ್ತು.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

 ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರು ಹೇಳಿದ್ರು ಈ ದೇವಸ್ಥಾನದ ಬಗ್ಗೆ.  ಸಿರ್ಸಿ ಸುತ್ತ ಮುತ್ತ ಜನರು ತಮ್ಮ ಕಾರ್ಯಗಳಿಗೆ ಮುನ್ನ ಈ ಗಣಪನನ್ನು ನೆನೆಯುವುದು, ಹರಕೆ ಕಟ್ಟಿಕೊಳ್ಳುವುದು, ಕೆಲಸ ಕಾರ್ಯಗಳು ನೆರವೇರಿದ ಮೇಲೆ ಹರಕೆಯನ್ನು ಸಲ್ಲಿಸುವುದು ಮುಂತಾಗಿ ಹೇಳಿದ್ದರು.  ಲೇವಾದೇವಿ, ಭೂಮಿ ಕೊಡು ಕೊಳ್ಳುವಿಕೆ, ಹಣಕಾಸಿನ  ವಹಿವಾಟು ವ್ಯವಹಾರ ಎಲ್ಲದಕ್ಕೂ ಗಣಪನ ಪೂಜೆಯೇ ಇಲ್ಲಿ ಪ್ರಥಮ ಎಂದು ಹೇಳಿದ್ದರು.  ಅಂದುಕೊಂಡ ಕಾರ್ಯ ನೆರವೆರಿಸುವಷ್ಟು ಮನೋಸ್ಥೈರ್ಯವನ್ನು ಶ್ರೀ ಮಹಾಗಣಪತಿ ಕೊಡುವನು ಎನ್ನುವ ನಂಬಿಕೆ ಇಲ್ಲಿನ ಪ್ರಾಂತ್ಯದಲ್ಲಿ ಜಾಸ್ತಿ.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

ಮೊದಲೇ ಗಣಪನ ಬಗ್ಗೆ ತುಂಬಾ ಒಲವಿರುವ ನನಗೆ, ಈ ಮಾತುಗಳು ಇನ್ನಷ್ಟು ಹುಮ್ಮಸ್ಸನ್ನು ಕೊಟ್ಟಿತು, ನಮ್ಮ ಹುಡುಗರನ್ನು ಕರೆದುಕೊಂಡು ಈ ಗಣಪನ ಸನ್ನಿಧಾನಕ್ಕೆ ಬಂದು ಕೂತಾಗ ಚಂಡಮಾರುತದ ಅಲೆಗಳಿಗೆ ತೂರಾಡುತಿದ್ದ  ಮನಸಲ್ಲಿ ಏನೋ ಒಂದು ತರಹ ಪ್ರಶಾಂತತೆ, ನೆಮ್ಮದಿ ಕಾಣ ತೊಡಗಿತು.


ದೇವಸ್ಥಾನದ ಮುಂಭಾಗ ಮತ್ತು ಮುಖ್ಯ ದ್ವಾರ 

ದೇವಸ್ಥಾನದ ಸುತ್ತ ಮುತ್ತಲಿನ ಪರಿಸರವನ್ನು ಕ್ಯಾಮೆರ ತನ್ನ ಹೊಟ್ಟೆಗೆ ಸೇರಿಸಿಕೊಳ್ಳುತ್ತಿತ್ತು..ಅಲ್ಲಿಗೆ ಬಂದ ಓರ್ವ "ದೇವರ ಮೂರ್ತಿಯನ್ನು ಚಿತ್ರಿಸಿ ಕೊಳ್ಳಿ" ಅಂದಾಗ, ನಾನೇ ಬೇಡ..ದೇವರ ಚಿತ್ರ ಬೇಡ ಅಂದೇ..ಇಲ್ಲ ಸರ್ ನಾನು ದೇವಸ್ಥಾನದವನೇ, ಫೋಟೋ ತೆಗೆದುಕೊಳ್ಳಬಹುದು ಅಂದ್ರು..ಅಳುಕಿನಿಂದಲೇ ಮತ್ತೆ ದೇವಸ್ಥಾನದ ಒಳಗೆ ಹೋದೆ, ಮತ್ತೆ ಅಲ್ಲಿನ ಅರ್ಚಕರನ್ನು ಕೇಳಿದೆ,  ತಗೊಳ್ಳಿ ತೊಂದರೆ ಇಲ್ಲ ಅಂದ್ರು.

ದೇವಸ್ಥಾನದ ಭವ್ಯ ಒಳಾಂಗಣ 
ಗಣಪನ ಗರ್ಭಗುಡಿ 

 ಸರಿ ಗಣಪನನ್ನು ನನ್ನ ಕ್ಯಾಮೆರಾದಲ್ಲಿ ಹಲವಾರು ಕೋನದಲ್ಲಿ ಚಿತ್ರೀಕರಿಸಿಕೊಂಡು ಹೊರಗೆ ಬರುವಾಗ ಗಣಪನಿಗೆ ನಾನು ಅಂದುಕೊಂಡ ಕಾರ್ಯ ನೆರವೇರಿದ ಮೇಲೆ ನನ್ನ ಮಡದಿ,  ಹಾಗೂ ಮಗಳಿಗೆ ನಿನ್ನ ದರುಶನ ಮಾಡಿಸುತ್ತೇನೆ ಪ್ರಭು ಎಂದು ವಾಗ್ಧಾನ ಮಾಡಿ ಹೊರಗೆ ಬಂದೆ..

ವಿಘ್ನ ವಿನಾಶಕ ಶ್ರೀ ಮಹಾಗಣಪತಿ

ಮಾರಿಕಾಂಬೆ ದೇವಾಸ್ಥಾನದಿಂದ ಮಹಾಗಣಪನ ಗುಡಿಗೆ ನಕಾಶೆ 


ಸಿರ್ಸಿ ಪಟ್ಟಣದಿಂದ ಯಾಣಕ್ಕೆ ಹೋಗುವ ಮಾರ್ಗದಲ್ಲೇ ಸಿರ್ಸಿಯ ಹೃದಯ ಭಾಗದಲ್ಲೇ ಇರುವ ಈ ದೇವಸ್ಥಾನ ಬಹು ಭಕ್ತರನ್ನು ಆಕರ್ಷಿಸುತ್ತಿದೆ.  

(ಸಶೇಷ)

8 comments:

 1. ಸುಂದರ ಗಣಪತಿ ದೇವಸ್ಥಾನ ..... ಚಂದದ ಮೂರ್ತಿ ...ಶ್ರೀಕಾಂತ್ ...ನಿಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ಅವನ ದಯೆಯಿಂದ ನೆರವೇರಲಿ.... :))

  ReplyDelete
 2. ಶಿರಸಿಯ ದೊಡ್ಡ ಗಣಪನ ದರುಶನ ಮಾಡಿಸಿದ ನಿಮಗೆ ಅಭಿನಂದನೆಗಳು. ನಾನು ಶಿರಸಿಯಲ್ಲಿ ಮಿಸ್ ಮಾಡಿಕೊಂಡೆ . ನಿಮ್ಮ ಬ್ಲಾಗ್ ಮೂಲಕ ದರುಶನ ಸಿಕ್ಕಿತು. ಮತ್ತೊಂದು ವಿಚಾರ, ನೀವು ಸಾಗಿದ ಹಾದಿಯ ಬಗ್ಗೆ ಮ್ಯಾಪ್ ನಲ್ಲಿ ಗುರುತಿಸುತ್ತಿರುವುದು ಸಂತಸ ತಂದಿತು.ಲೇಖನ ಚೆನ್ನಾಗಿದೆ. ಜೈ ಹೋ
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 3. ಮಹಾ ಗಣಪತಿ ದೇವಸ್ಥಾನವು ವಿಶಿಷ್ಟ ರಚನೆ.

  ಗಣಪತಿ ಬಲು ಸುಂದರವಾಗಿದ್ದಾನೆ.
  ReplyDelete
 4. ಶ್ರೀಕಾಂತ್ ಸರ್,
  ನಾನು ಈ ಗಣೇಶನ ದೇವಸ್ಥಾನಕ್ಕೆ ಬೇಟಿಕೊಟ್ಟಿರಲಿಲ್ಲ. ನಿಮ್ಮ ಚಿತ್ರಸಹಿತ ಲೇಖನವನ್ನು ಓದಿ ಬೇಟಿ ಕೊಟ್ಟ ಹಾಗೆ ಆಯ್ತು..

  ReplyDelete
 5. ಸುದೀಪ ನಿಮ್ಮ ಹಾರೈಕೆಗೆ ಧನ್ಯವಾದಗಳು..ಪ್ರಕಾಶಣ್ಣ ಹೇಳಿದಂತೆ ನಿಜಕ್ಕೂ ಗಣಪನ ಗುಡಿ ಒಂದು ತರಹ ಗಮನ ಸೆಳೆಯುತ್ತೆ..

  ReplyDelete
 6. ಬಾಲೂ ಸರ್..ಧನ್ಯವಾದಗಳು..ನಾವು ಕಾಣದಿರುವ ಜಾಗ ನೀವು ತೋರಿಸುತ್ತ ಇದ್ದೀರಾ..ನಮ್ಮದು ಒಂದು ಸಣ್ಣ ಪ್ರಯತ್ನ..ನಕ್ಷೆಯಾ ಕಡೆ ಗಮನ ಬಂದಿದ್ದು ನಿಮ್ಮ ಕೆಲವು ಬ್ಲಾಗ್ಗಳನ್ನೂ ನೋಡಿ..

  ReplyDelete
 7. ಬದರಿ ಧನ್ಯವಾದಗಳು ಹೌದು ಗಣಪ ನೋಡಲು ಸುಂದರ..ಹಾಗೆ ದೇವಾಲಯವೂ ಕೂಡ..ಆದಾಗ ಭೇಟಿ ನೀಡಿ..

  ReplyDelete
 8. ಶಿವೂ ಸರ್..ನಾವು ಕಂಡು ಕಾಣದಿರುವ, ಗುರುತಿಸಲಾಗದ, ಭಾವಗಳನ್ನ ಗುಬ್ಬಿ ಎಂಜಲು ಪುಸ್ತಕದಲ್ಲಿ ನವಿರಾಗಿ ವರ್ಣಿಸಿದ್ದೀರ..ಗಣಪನನ್ನು ಮುಂದಿನ ಭೇಟಿಯಲ್ಲಿ ದರ್ಶನ ಮಾಡಿ ಬನ್ನಿ..ಧನ್ಯವಾದಗಳು

  ReplyDelete