Monday, August 20, 2012

ಶ್ರೀ ರಂಗಪಟ್ಟಣದ ದರ್ಶನ - ಬಾಲು ಸರ್ ಮಾರ್ಗದರ್ಶನ...


ಇಂದು ಆಗಸ್ಟ್ ೨೦ನೆ ತಾರೀಕು ೨೦೧೨ ...ರಮ್ಜಾನ್ ಪ್ರಯುಕ್ತ ಕಛೇರಿಗೆ ರಜ ಘೋಷಿಸಿದ್ದರು... ಪ್ರಾತಃಕರ್ಮಗಳನ್ನೆಲ್ಲ ಮುಗಿಸಿ ಕೂತಾಗ ಮನಸ್ಸು ಖಾಲಿ ಖಾಲಿ..ಸರಿ ಏನಾದರು ವಿಶೇಷವಾದ ಕೆಲಸ ಮಾಡೋಣ ಅನ್ನಿಸಿತು..

ಮೊದಲಿನಿಂದಲೂ ವಿಷ್ಣುವಿನ ಕೆಲ ಅವತಾರಗಳು, ರೂಪಗಳು ಬಲು ಇಷ್ಟ...ಕೃಷ್ಣ, ವೆಂಕಟೇಶ್ವರ, ರಂಗನಾಥ..ಹೀಗೆ..

ಅಚಾನಕ್ಕಾಗಿ ಶ್ರೀರಂಗ ಪಟ್ಟಣಕ್ಕೆ ಹೋಗೋಣ ಅನ್ನಿಸಿತು..ಆದ್ರೆ ಕಳೆದ ಶನಿವಾರ ಸಂಬಂಧಿಕರೊಬ್ಬರು ಇಹಲೋಕ ತ್ಯಜಿಸಿದ್ದರಿಂದ..ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದಿದ್ದರಿಂದ, ಹಾಗು ಮನೆಯಲ್ಲಿ ಇನ್ನು ಸೂತಕವಿದ್ದುದರಿಂದ ಜನಿವಾರ ಬದಲಾಯಿಸಿರಲಿಲ್ಲ..ಹಾಗಾಗಿ ದೇವಸ್ಥಾನದ ಭೇಟಿಯ  ಸಾಧ್ಯಸಾಧ್ಯತೆಗಳು ಇರಲಿಲ್ಲ..

ಚಿತ್ರ ಕೃಪೆ..ಅಂತರ್ಜಾಲ
ಏನೋ ಮಾಡಲಿ ನಾನು ಏನು ಮಾಡಲಿ..ಈ ತವಕ ಜಾಸ್ತಿಯಾಯಿತು...ಸರಿ ಶ್ರೀ ರಂಗನಾಥನನ್ನೇ ಕೇಳೋಣ ಅಂತ ಮನಸಲ್ಲಿ ಅಂದುಕೊಂಡು... ಕೈ ಮುಗಿದೇ...ಸ್ವಾಮೀ ನಿನ್ನ ದರುಶನ ಮಾಡಬೇಕು...ಶ್ರೀ ರಂಗಪಟ್ಟಣದ  ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನನ್ನ ಕುಟುಂಬಕ್ಕೆ ತೋರಿಸಬೇಕು..ಹಾಗೆಯೇ...ಸಧ್ಯದ ಕಷ್ಟವನ್ನು ತಡೆದುಕೊಳ್ಳುವ ಗಟ್ಟಿ ಮನಸನ್ನು ಕೊಡು ಎಂದು ಕೇಳುತ್ತಿದ್ದಾಗ...

ಶ್ರೀರಂಗ ಕಣ್ಣ ಮುಂದೆ ಬಂದಂತಾಗಿ ..."ಶ್ರೀಕಾಂತ...ನಿನ್ನಂತೆ ಹಲವಾರು ಭಕ್ತರು ಇದೆ ವಿಧವಾದ ಹಲವಾರು ಕೋರಿಕೆಗಳನ್ನು ಸಲ್ಲಿಸುತ್ತಾ ಇದ್ದಾರೆ ...ನಾನು ಅವರಿಗೆ ಉತ್ತರ ಹೇಳಿ ಹೇಳಿ ಸುಸ್ತಾಗಿ ಮಲಗಿ ಬಿಟ್ಟಿದ್ದೇನೆ...ನೋಡು ನಾನು ಇರುವ ಪರಿ ಕೆಳಗಿನ ಚಿತ್ರದಲ್ಲಿರುವಂತೆ ಇದ್ದೇನೆ...."
ಚಿತ್ರ ಕೃಪೆ..ಅಂತರ್ಜಾಲ
"ಮೈಸೂರಿನಲ್ಲಿರುವ ಬಾಲಸುಬ್ರಮಣ್ಯ ಅಥವಾ ಎಲ್ಲರಿಗೂ ಚಿರಪರಿಚಿತರಾಗಿರುವಂತೆ "ಬಾಲು" ಎನ್ನುವರು ಇಂದಿಗೆ ಸರಿಯಾಗಿ ಎರಡು ವರ್ಷಗಳಿಂದ ಶ್ರೀರಂಗ ಪಟ್ಟಣದ ಇತಿಹಾಸ, ಮಹತ್ವ, ಅದರ ಚಿತ್ರಗಳು ಎಲ್ಲವನ್ನು ವಿವರಿಸುತ್ತ ಬಂದಿದ್ದಾರೆ..ಅದನ್ನು ಓದಿ, ನಲಿ, ಮತ್ತು ಆ ಎಲ್ಲ ಜಾಗಗಳಿಗೆ ನೀನು ಒಮ್ಮೆ ಭೇಟಿ ಕೊಡು.. ಇದು ನನ್ನ ಆಜ್ಞೆ,,ಹಾಗು ಆಶೀರ್ವಾದ..ಹಾಗೆಯೇ..ಬಾಲು ಅವರು ಶ್ರಮವಹಿಸಿ ಮಾಡುತ್ತಿರುವ ಈ ಸುವರ್ಣ ಕಾರ್ಯಕ್ಕೆ ಒಂದು ಕೃತಜ್ಞತೆ ಹೇಳಿದ ಹಾಗೆ ಆಗುತ್ತೆ..."
http://shwethadri.blogspot.in/2010/08/blog-post.html
ಸರಿ ಆದೇಶ ಬಂದ ನಂತರ...ಓದುತ್ತ ಹೋದೆ...ಸುಮಾರು ೧೩೦೦-೧೪೦೦ ವರುಷಗಳ ಹಿಂದೆ ಕರೆದೊಯ್ಯಿತು ಬಾಲು ಸರ್ ಅವರ ಲೇಖನಗಳು..
ಶ್ರೀರಂಗ ಪಟ್ಟಣದ ಉದಯ,
ಅದರ ಮಹತ್ವ,
ಜಗತ್ತಿನಾದ್ಯಂತ ಅದರ ಪರಿಚಯ,
ಐತಿಹಾಸಿಕ ಕ್ಷಣಗಳಿಗೆ ಮೂಕವಾಗಿ ನಿಂತದ್ದು,
ಎಷ್ಟೋ ತಂತ್ರಜ್ಞಾನಗಳಿಗೆ ಮೊದಲ ಮೆಟ್ಟಿಲಾದದ್ದು,
ತನ್ನ ಹೆಸರನ್ನು ದೇಶ ವಿದೇಶಗಳಲ್ಲಿ ಹಬ್ಬಿದ್ದು,
ಆಸ್ಟ್ರೇಲಿಯಾ ಖಂಡದಲ್ಲಿ ತನ್ನ ಹೆಸರಿಂದ ಪ್ರಖ್ಯಾತವಾದದ್ದು
ಹೀಗೆ ಅಲ್ಲಿನ ಪ್ರತಿಯೊಂದು ಕಲ್ಲು,  ಮಣ್ಣು, ನೀರು, ಗಾಳಿ ಎಲ್ಲವಕ್ಕೂ ಅದರದೇ ಆದ ವೈಶಿಷ್ಟ್ಯ, ಇತಿಹಾಸಗಳು, ಪ್ರಾಮುಖ್ಯತೆ ಓದುತ್ತ ಹೋದ ಹಾಗೆ ಮೈ ಮನ ಹಾಗೆಯೇ  ಒಮ್ಮೆ ಜುಮ್ಮೆಂದಿತು...

ಸುಮಾರು ಎರಡು ಘಂಟೆಗಳಲ್ಲಿ ೧೦೦೦ ವರುಷಕ್ಕು ಮಿಕ್ಕಿದ ಇತಿಹಾಸವನ್ನು ಉಣಬಡಿಸಿದ ಸದಾ ನಗು ಮೊಗದ ಬಾಲು ಸರ್ ಅವರ ಲೇಖನಗಳಿಗೆ ನನ್ನ ಒಂದು ನಮನಗಳು...

http://shwethadri.blogspot.in/2010/08/blog-post.html

ಗೆಳೆಯರೇ, ದಯವಿಟ್ಟು ಬಿಡುವುಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿ..ಹಾಗು ನಮ್ಮ ಹೆಮ್ಮೆಯ ಶ್ರೀ ರಂಗ ಪಟ್ಟಣದ ಇಂಚಿಂಚು ಇತಿಹಾಸವನ್ನು ಅರಿಯಿರಿ..ಹಾಗೆಯೆ ಮೈಸೂರ್ ಕಡೆ ಹೋಗುವಾಗ ಹಾಗೆಯೇ ಆ ಸ್ಥಳಗಳಿಗೂ ಸದಾ ಭೇಟಿ ನೀಡುತ್ತಾ ಇರಿ...ಬಾಲು ಸರ್...ಕಾವೇರಿ ರಂಗ

4 comments:

  1. ಧನ್ಯವಾದಗಳು ಸಂದೀಪ್..ಬಾಲು ಸರ್ ಅಂತಹ ಮಹನೀಯರನ್ನು ನನಗೆ ಪರಿಚಯಿಸಿದಕ್ಕೆ...ಅವರ ಶ್ರೀರಂಗಪಟ್ಟಣ ಲೇಖನ ಮಾಲಿಕೆ ಒಂದು ಅನರ್ಘ್ಯ ರತ್ನ ಅಂತ ಹೇಳಬಹುದು...

    ReplyDelete
  2. ಚಿಕ್ಕಪ್ಪ..ಧನ್ಯವಾದಗಳು..ಮೈಸೂರ್ನಲ್ಲಿರುವ ಬಾಲು ಸರ್..ಶ್ರೀರಂಗಪಟ್ಟಣದ ಮೂಲೆ ಮೂಲೆಯನ್ನು ಪರಿಚಯಿಸಲು ಪಟ್ಟಿರುವ ಶ್ರಮ ಶ್ಲಾಘನೀಯ...ಅವರ ಬ್ಲಾಗ್ ಒಳಗೆ ಓಡಾಡಿ ಬಂದೆ ಬಲು ಖುಷಿ ಕೊಟ್ಟಿತು...

    ReplyDelete