Monday, October 29, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೫

ಸಾತೊಡ್ಡಿ ಜಲಪಾತದ ದೃಶ್ಯ ವೈಭವಕ್ಕೆ ಮರುಳಾಗಿ ಮತ್ತೆ ವಾಸ್ತವ ಲೋಕಕ್ಕೆ ಬಂದಾಗ ವೇಳೆ ಸುಮಾರು ಎಂಟು ಘಂಟೆಯಾಗಿತ್ತು. ಒಂದು ಹುಚ್ಚು ಧೈರ್ಯ ಮನಸನ್ನು ಆವರಿಸಿತ್ತು.  ಶನಿವಾರದ ರಾತ್ರಿ ಕಳೆಯೋಕೆ ಸ್ವಲ್ಪ ಹೊತ್ತು ಹೋಟೆಲ್ ರೂಮಿಗಾಗಿ ಹುಡುಕಾಡಿದೆವು .

ಸಾತೊಡ್ಡಿಯ ಕಾಡಿನ ಹಾದಿ ನಿಜವಾಗಿಯೂ ಒಂದು ದುರ್ಗಮ ಹಾದಿ, ಸುವ್ಯವಸ್ಥಿತ ಕಾರುಗಳು ಅಲ್ಲಿಗೆ ಹೋಗಲು ಬಹಳ ಶ್ರಮ ಪಡಬೇಕು..ದ್ವಿಚಕ್ರ ವಾಹನಗಳು ಉತ್ತಮ, ಇಲ್ಲವೇ ಜೀಪ್ ಗಳು ಕೂಡ ಉತ್ತಮ..ಮಿಕ್ಕಿದ ವಾಹನಗಳು ಯಾವಾಗ ಕೈಕೊಡುತ್ತವೆ ಎನ್ನುವುದು ತಿಳಿಯೋಲ್ಲ.

ಆ ಕತ್ತಲ ಹಾದಿಯಲ್ಲಿ ಬಸವಳಿದು ಬಂದಾಗ ನಮಗೆ ಆ ಅಮಾವಾಸ್ಯೆಯ ರಾತ್ರಿಯಲ್ಲಿ ಸಿಕ್ಕಿದ್ದು "ಪ್ರಕಾಶ"ಮಾನವಾದ ದೀಪಗಳು.  ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ ಹೆಗಡೆಯವರು ಮಧುವನ ಹೋಟೆಲಿನ ಮಾಲೀಕರು ಶ್ರೀ ವಿಶ್ವ ಅವರನ್ನು ಸಂಪರ್ಕಿಸಿ ನಮಗೆ ತಂಗಲು ವ್ಯವಸ್ಥೆ ಮಾಡಿದರು. ಅಲ್ಲಿಗೆ ಹೋದಾಗ ನಮ್ಮನ್ನು ಆದರದಿಂದ ಬರಮಾಡಿಕೊಂಡ ಶ್ರೀ ಪ್ರಕಾಶ್  ಅವರು ಮತ್ತು ಪ್ರಕಾಶ್ ಹೆಗಡೆ ಇಬ್ಬರು ಬಂಧುಗಳು ಎಂದು ತಿಳಿಯಿತು..


ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಪ್ರಕಾಶ್ ಹೆಗಡೆ ನನಗೆ ಕರೆ ಮಾಡಿ, "ಶ್ರೀಕಾಂತ್ ನಿಮಗೆ ಹೋಟೆಲ್ ಮಧುವನದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದೇನೆ, ನಿಮ್ಮ ಹೆಸರು ಹೇಳಿದ್ದೇನೆ ಅಲ್ಲಿ ಹೋಗಿ ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳಿ ನಿಮಗೆ ಅನುಕೂಲ ಮಾಡಿಕೊಡುತ್ತಾರೆ" ಎಂದರು. ಕತ್ತಲಿನ ಹಾದಿಯಲ್ಲಿ ತೋರಿದ ಒಂದು ಬೆಳಕು ನಮ್ಮ ದೇಹಕ್ಕೆ ಬೇಕಾದ ವಿಶ್ರಾಂತಿ ಕೊಟ್ಟಿತು.

ತುಂಬಾ ಮೃದು ಮಾತಿನ "ಪ್ರಕಾಶ್" ಏನು ಯೋಚನೆ ಮಾಡಬೇಡಿ ನಿಮ್ಮ ಆರು ಮಂದಿಗೆ ವ್ಯವಸ್ಥೆ ಮಾಡಿದ್ದೇನೆ, ಹೋಟೆಲ್ ನಲ್ಲಿ ಊಟ ಮುಗಿಯುವ ಮುನ್ನಾ ಹೋಗಿ ಊಟ ಮಾಡಿ ಬನ್ನಿ ನಂತರ ಮಾತಾಡುವ" ಎಂದರು.

ಶ್ರೀ ಪ್ರಕಾಶ್ 

ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಉತ್ತರ ಭಾರತದ ಶೈಲಿಯ ಊಟ ಮಾಡಿ, ಹೊಟ್ಟೆ ತುಂಬಿಕೊಂಡ ನಂತರ ಸಿಕ್ಕದ್ದು ಸೊಗಸಾದ ಕೋಣೆಗಳು.  ಧಣಿದ ದೇಹಕ್ಕೆ ಇದಕ್ಕಿಂತ ಅನುಕೂಲ ಬೇಕೇ.  ಮತ್ತೆ ನಾನು ಕೆಳಗೆ ಬಂದಾಗ , ಪ್ರಕಾಶರವರು ಊಟ ಮಾಡುತಿದ್ದರು, ಬೇಸರ ಮಾಡಿಕೊಳ್ಳದೆ, ನಮ್ಮ ನಾಳಿನ ಕಾರ್ಯಕ್ರಮವನ್ನು ವಿಚಾರಿಸಿ, ಅನುಕೂಲವಾದ ಮಾಹಿತಿ ಕೊಟ್ಟರು, ಮೊದಲು ಎಲ್ಲಿಗೆ ಹೋಗಬೇಕು, ನಂತರ ಎಲ್ಲಿಗೆ, ಬೆಂಗಳೂರಿಗೆ ಹೋಗಬೇಕಾದರೆ ಎಷ್ಟು ಹೊತ್ತಿಗೆ ಹೊರಡಬೇಕು , ಊಟವೆಲ್ಲಿ ಮಾಡಬೇಕು ಹೀಗೆ  ಒಂದು ದಿನಚರಿ ಪಟ್ಟಿಯನ್ನೇ ನಮಗೆ ಸಿದ್ಧಮಾಡಿಕೊಟ್ಟರು.

ಶ್ರೀ ಪ್ರಕಾಶ್ ಜೊತೆಯಲ್ಲಿ ನಮ್ಮ ಅಲೆಮಾರಿಗಳು ತಂಡ!

ಮನಸು ಹಾರಾಡಿತು, ಕಾಣದ ಊರಿನಲ್ಲಿ, ಕೇವಲ ಬ್ಲಾಗ್ ಲೋಕದಲ್ಲಿ ಸಂಪರ್ಕ ಇರುವ ಅಮೂಲ್ಯ ಸ್ನೇಹಿತರಿಂದ ಅಮೂಲ್ಯವಾದ ಆದ್ರೆ ಬೆಲೆ ಕಟ್ಟಲಾರದ ಸಹಾಯ ಮನಸನ್ನು ಮೂಕನನ್ನಾಗಿಸಿತು. ಹೋಟೆಲ್ ಮಧುವನದ ಮಾಲೀಕರಾದ  ಶ್ರೀ ವಿಶ್ವ ಅವರಿಗೂ..ಹಾಗೂ  ಇಬ್ಬರು ಪ್ರಕಾಶ್ ರಿಗೂ ಮನಸಲ್ಲಿ ವಂದಿಸುತ್ತಾ ನಿದ್ರಾ ಲೋಕಕ್ಕೆ ಜಾರಿದೆವು.

ಬೆಳಿಗ್ಗೆ ಎದ್ದು, ಅವರ ಜೊತೆ ಇನ್ನಷ್ಟು ಹರಟಿದೆವು, ಮನಸಿಗೆ ಸಂತೋಷವಾಯಿತು ಅವರ ಸತ್ಕಾರ ಕಂಡು, ಜೊತೆಯಲ್ಲಿ ನೆನಪಿಗಾಗಿ ಒಂದಷ್ಟು ಚಿತ್ರಗಳನ್ನು ಅವರ ಜೊತೆ ತೆಗಿಸಿಕೊಂಡು ಅವರಿಂದ ಬೀಳ್ಕೊಟ್ಟೆವು.

ಶನಿವಾರದ ಇರುಳನ್ನು ಸುಮಧುರವಾಗಿ ಕಳೆಯಲು ಸಹಾಯ ಮಾಡಿದ ಶ್ರೀ ವಿಶ್ವ , ಶ್ರೀ ಪ್ರಕಾಶ್ , ಮತ್ತು ಶ್ರೀ ಪ್ರಕಾಶ್  ಹೆಗಡೆ ಅವರಿಗೆ ಈ ಬ್ಲಾಗಿನ ಲೇಖನ ಅರ್ಪಿತ, ಮತ್ತು ನಮ್ಮ "ಅಲೆಮಾರಿಗಳು" ತಂಡದ ಪರವಾಗಿ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ

(ಸಶೇಷ)

4 comments:

  1. ಸಿರ್ಸಿಯಲ್ಲಿನ ಹೋಟೆಲ್ ವ್ಯವಸ್ಥೆ ಬಗ್ಗೆ ಓದಿ ಖುಷಿಯಾಯಿತು , ಶ್ರೀ ವಿಶ್ವ , ಶ್ರೀ ಪ್ರಕಾಶ್ , ರವರ ಸಹಾಯ ನಿಮ್ಮ ಬ್ಲಾಗ್ನಲ್ಲಿ ನೆನೆದದ್ದು ಒಳ್ಳೆಯ ಸಂಪ್ರದಾಯ. ಹಾಗೆ ಪ್ರಕಾಶ್ ಹೆಗ್ಡೆ ಗೂ ಥ್ಯಾಂಕ್ಸ್ ತಿಳಿಸಿದ್ದು ಖುಷಿಯ ವಿಚಾರ. ನಿಮಗೆ ಅನುಕೂಲ ನಾಡಿಕೊಟ್ಟ ಮೂರೂ ಜನರಿಗೆ ನನ್ನದೂ ಒಂದು ಥ್ಯಾಂಕ್ಸ್. ಅನುಭವ ಶೈಲಿ ಚೆನ್ನಾಗಿದೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಸಾತೊಡ್ಡಿ ಜಲಪಾತ ತಲುಪುವ ಬಗ್ಗೆ ತಾವು ಬರೆದ ಕಠಿಣ ಹಾದಿ ಕೇಳಿಯೇ ಸಂತೋಷ ಪಟ್ಟೆ (!). ನನ್ನಿಂದಾಗೋಲ್ಲಪ್ಪಾ...

    ಪ್ರಕಾಶಣ್ಣನ ಬಂಧುವಿನ ಉಪಚಾರ ಇಷ್ಟವಾಯ್ತು.






    ReplyDelete
  3. ಹೊತ್ತಿನಲ್ಲಿ ತುತ್ತು ಕೊಟ್ಟವರು..ತುತ್ತಿನ ಸಮಯದಲ್ಲಿ ಮೆತ್ತನೆ ಹಾಸಲು ಕೊಟ್ಟವರು ಎಂದಿಗೂ ಸ್ಮರಣೀಯರು. ಧನ್ಯವಾದಗಳು ಬಾಲೂ ಸರ್..

    ReplyDelete
  4. ಬದರಿ ಸರ್ ಬನ್ನಿ ನಮ್ಮ ಜೊತೆ ಒಮ್ಮೆ ಸಂತಸವಾಗುತ್ತೆ ನಮಗೆ..ಹೌದು ಇಬ್ಬರು ಪ್ರಕಾಶಣ್ಣ ಮತ್ತು ವಿಶ್ವ ಸರ್ ಅವರ ಸಹಾಯ ಚಿರಕಾಲ ನೆನಪಲ್ಲಿ ಇರುತ್ತೆ..

    ReplyDelete