ಚಡಪಡಿಕೆ ಚಡಪಡಿಕೆ.................................................!
ನನಗೆ ಹುಚ್ಚಿತ್ತು.. ಪ್ರವಾಸಕ್ಕೆ ಹೋಗುವ ಮೊದಲೇ.. ಆ ಪ್ರವಾಸದ ಬಗ್ಗೆ ಬರೆದು ನಂತರ ಬರೆದ ಹಾಗೆಯೇ ಪ್ರವಾಸವನ್ನು ಅನುಭವಿಸಬೇಕು ಎಂದು.. ಈ ಹುಚ್ಚಿನ ಮೊದಲ ಮಜಲು ಈ ಲೇಖನ ಈ ಕೊಂಡಿಯಲ್ಲಿದೆ.. ಕೂಸು ಹುಟ್ಟುವ ಮುಂಚೆಯೇ ಕುಲಾವಿ!
ಸೂರ್ಯಂಗೇ ಟಾರ್ಚ್... ಪ್ರವಾಸಕ್ಕೆ ಟಾರ್ಚ್!!!
ರವಿಯೂ ಕಾಯುತ್ತಿದ್ದ ಈ ಪ್ರವಾಸಕ್ಕೆ ಬೆಳಕಾಗಲು!!! |
ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..
ಅಪ್ಪ ಭಾಗ್ಯ ಅಕ್ಕನನ್ನು ನಾನೆ ಕರೆದು ಕೊಂಡು ಬರುತ್ತೇನೆ ಎಂದಳು ನನ್ನ ಸ್ನೇಹಿತೆ ಶೀತಲ್!! |
ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ"
"ಹೇಳು ಮಗಳೇ ಯಾಕೆ ಅಲ್ಲಿಯೇ ನಿಲ್ಲಿಸಿದೆ"
"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"
"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "
ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..
ರವಿ ನಮ್ಮ ಪಯಣಕ್ಕೆ ಶುಭಕೋರಿ ತನ್ನ ಗೂಡನ್ನು ಸೇರಲು ಹೊರಟ ಕ್ಷಣ! |
ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..
ನಾ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ತೋಚಲಿಲ್ಲ ಕಾರಣ.. ನನಗೂ ಅದೇ ಪ್ರಶ್ನೆಗಳು ಕಾಡುತ್ತಿದ್ದವು.
ನಿಮ್ಮ ಪ್ರವಾಸಕ್ಕೆ ನಾನು ಬರುತ್ತೇನೆ ಎಂದ ಶ್ವಾನ ಮಹಾರಾಜ!!! |
"ಶ್ರೀ ಇಷ್ಟು ದೂರ ಬಂದಿದ್ದೇವೆ.. ದೊಡ್ಡಮ್ಮನ ಮನೆಗೆ ಹೋಗಿ ಬರೋಣ" ಸವಿ ಉವಾಚ..
ಶೀತಲ್ ಕುಣಿಯುತ್ತಿದ್ದಳು.. ಮೆಲ್ಲಗೆ ಮಗಳ (ಭಾಗ್ಯ) ಕಡೆ ನೋಡಿದೆ ..
"ಅಣ್ಣಾ ನೀವು ಎಲ್ಲಿಗೆ ಕರೆದುಕೊಂಡು ಹೋದರು ನಾ ಬರುವೆ ನಿಮ್ಮೊಡನೆ.. "ಭಾಗ್ಯ ಉವಾಚ!
ಸರಿ ಶಿವಮೊಗ್ಗದ ಕೋಟೆ ಆಂಜನೇಯನ ಬೀದಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದೆವು.. ಅಲ್ಲಿ ನದಿಯಲ್ಲಿರುವ ನೀರು ಶರಧಿಗೆ ಸೇರುವಂತೆ.. ಪ್ರೀತಿಯ ಸಾಗರವನ್ನೇ ಹರಿಸಿ ಬಿಟ್ಟರು.. ಕೇವಲ ಒಂದು ಹತ್ತು ಹದಿನೈದು ನಿಮಿಷದ ಭೇಟಿ.. ಎರಡು ಘಂಟೆಗಳ ಭೇಟಿಗೆ ತಿರುಗಿತು....
ಹೊಟ್ಟೆ ತುಂಬಾ ಊಟ ಬಾಯಿ ತುಂಬಾ ಮಾತು.. ಸಂಕೋಚದ ಮುದ್ದೆ ಎನಿಸಿಕೊಂಡಿದ್ದ ಭಾಗ್ಯ.. ಉತ್ಸಾಹದ ಚಿಲುಮೆಯಾಗಿದ್ದಳು..
ಸುಮಾರು ಹೊತ್ತು ಇದ್ದು.. ಮಾತು ಮಾತು ಇನ್ನಷ್ಟು ಮಾತಿನ ನಂತರ ದೊಡ್ಡಮ್ಮನ ಆಶೀರ್ವಾದ ಪಡೆದು.. ಅಣ್ಣ ತಮ್ಮ ಎನ್ನುವ ಮಾತೆ ಇಲ್ಲದೆ ಗೆಳೆಯರ ತರಹ ಮಾತಾಡುತ್ತಿದ್ದ ಸುಬ್ಬರಾಮು ದಂಪತಿಗಳಿಂದ ಅಪ್ಪಣೆ ಪಡೆದು ಹೊರಟೆವು... !
ಮೆಲ್ಲನೆ ಒರೆಗಣ್ಣಲ್ಲಿ ನೋಡಿ "ಅಣ್ಣಾ ಗಿರೀಶ್ ಮತ್ತು ಅವರ ಸ್ನೇಹಿತ ಶಿವಮೊಗ್ಗದಲ್ಲಿ ಇದ್ದಾರಂತೆ" ಭೇಟಿ ಮಾಡೋಣ..
ಕಣ್ಣು ಮಿಟುಕಿಸಿದೆ... ನನ್ನ ಪ್ರೀತಿಯ ಕಾರು ಶಿವಮೊಗ್ಗದ ವಾಹನ ನಿಲ್ದಾಣದ ಮುಂದೆ ಹಾಜಿರ್.. ಗಿರೀಶ್ ಮತ್ತು ಅವರ ಸ್ನೇಹಿತರಾದ ಪೂರ್ಣೇಶ್ ನಿಂತಿದ್ದರು... ಮಾತು ಇನ್ನಷ್ಟು ಮಾತು.. ಭಾಗ್ಯ ಪುಟ್ಟಿಯ ಸಂತಸದ ನಗು.. ಅರೆ ಘಳಿಗೆ ಅರೆ ಘಳಿಗೆಯಲ್ಲೂ ಬದಲಾಗುತ್ತಿದ್ದ ನಮ್ಮ ಪಯಣದ ಪಟ್ಟಿ..
ಸಿದ್ದಾಪುರದಿಂದ ಕರೆ ಬರುತ್ತಲೇ ಇತ್ತು.. ಎಷ್ಟು ಹೊತ್ತಿಗೆ ಬರ್ತೀರಿ.. ಆ ಪ್ರಶ್ನೆಗೆ ಯಾರಲ್ಲೂ ಉತ್ತರವಿರದ ಪ್ರಶ್ನೆಯಾಗಿತ್ತು.. :-)
ಗಿರೀಶ್ ಮತ್ತು ಸ್ನೇಹಿತರಿಗೆ ಎಲ್ಲಾ ಆಮಿಷ ತೋರಿದೆವು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲು.. ಆದ್ರೆ ಅವರು (AAP) ಪೊರಕೆ ಗುರುತಿನ ಮಾಲೀಕನಂತೆ.. ಗಲಿಬಿಲಿ ನಿರ್ಧಾರವಿರಲಿಲ್ಲ.. ಇಲ್ಲ ಸರ್ ನಮ್ಮದು ಆಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ.. ದಯಮಾಡಿ ಕ್ಷಮಿಸಿ ಮತ್ತೊಮ್ಮೆ ಬರುತ್ತೇವೆ.. ಎಂದರು.
ಸಾಗರದ ನಿರೀಕ್ಷಣ ಮಂದಿರದತ್ತ ಕಾರು ಓಡಿತು.. ನಗುಮೊಗದ ಅಧ್ಯಾಪಕರು ಸರಿ ರಾತ್ರಿ ಹನ್ನೆರಡರ ಆಸುಪಾಸಿನಲ್ಲಿಯೂ ನಸು ನಗುತ್ತ ನಮ್ಮನ್ನು ಮಾತಾಡಿಸಿ ಬನ್ನಿ ಊಟ ಮಾಡುವಿರಂತೆ.. ಇಲ್ಲಾ ಕಡೆ ಪಕ್ಷ ಕಾಫಿಯಾದರೂ ಕುಡಿಯಲೇ ಬೇಕು ಎಂದು ಒತ್ತಾಯ ಮಾಡಿದರು. ಆಗದು ಎಂದು ಹೇಳಲು ಆಗಲಿಲ್ಲ..
ಏನೀ ಸ್ನೇಹ ಸಂಬಂಧ. ಎಲ್ಲಿಯದೂ ಈ ಅನುಬಂಧ.. ಸರಿ ರಾತ್ರಿಯಲ್ಲಿ ಬ್ಲಾಗ್ಲೋಕದ ಜೊತೆಯಲ್ಲಿ!!! |
ಭಾಗ್ಯ ನಗುತ್ತಲೇ ಇದ್ದಳು.. "ಅಣ್ಣಾ ನಿಮ್ಮ ಹೃದಯ ನಿಮ್ಮ ಕಾರಿಗಿಂತ ದೊಡ್ಡದು....:) "
ಮಧ್ಯರಾತ್ರಿಯಲ್ಲಿ ಪರಿಚಯವೇ ಇಲ್ಲದ ಒಂದು ಕುಟುಂಬದ ಭೇಟಿಗೆ ಮನ ಕಾಯುತ್ತಿತ್ತು. ಮುದ್ದಾದ ಮಗುವಿನ.. ತಾಳ್ಮೆಯ ಮಡದಿ ಕೂಡಿದ ಚಂದದ ಸಂಸಾರ ಅವರದ್ದು.. ಬನ್ನಿ ಬನ್ನಿ ಸ್ವಲ್ಪ ಹೊತ್ತು ಮಾತಾಡುತ್ತಾ ಕೂತಿರಿ.. ಬಿಸಿ ಬಿಸಿ ಅಡಿಗೆ ಮಾಡಿಬಿಡುತ್ತೇನೆ. ಆ ಮಲೆನಾಡಿನ ಹೆಬ್ಬಾಗಿಲಲ್ಲಿ ಸರಿ ರಾತ್ರಿಯ ತಣ್ಣನೆ ಗಾಳಿಯಲ್ಲೂ ಮೈ ಸಣ್ಣಗೆ ಬೆವರಿತು.
ಬೇಡ ಸರ್.. ಕಾಫಿ ಮಾತ್ರ ಕೊಡಿ.. ಭಾಗ್ಯ ಮತ್ತೆ ಮತ್ತೆ ನಗುತ್ತಿದ್ದಳು.. "ಅಣ್ಣ ನಿಮಗೆ ಕಾಫಿ ಸಿಕ್ಕರೆ.. ಆ ದೇವರನ್ನು ಕೂಡ ಒಮ್ಮೆ.... ಹಹಹ ಹಹಹ" ಅವಳ ನಗು ನಿಂತಿರಲಿಲ್ಲ.
ಕಾಫಿ ಬಂತು.. ಸರ ಸರ ಕುಡಿದು.. ದೇವರಲ್ಲಿ ಪ್ರಾರ್ಥಿಸಿದೆವು. ದೇವರೇ ಇನ್ನು ನಮ್ಮ ಮುಂದಿನ ನಿಲ್ದಾಣ ಸಿದ್ದಾಪುರದ ಮಾಯ್ನೋರಮನೆ ಆಗಿರಲಪ್ಪ. ಕಾರಣ ಭಾಗ್ಯ ಪುಟ್ಟಿಯ ಮೊಬೈಲ್ ಅಳುತ್ತಲೇ ಇತ್ತು.. ಪಾಪ ಅದನ್ನು ಎತ್ತಿ ಕೊಂಡು ಎತ್ತಿ ಕೊಂಡು ಸಮಾಧಾನ ಮಾಡಿ ಮಾಡಿ.... !
"ಅಣ್ಣಾ ಮಾತಾಡುತ್ತಿರಿ.. "
ಸರಿ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳು.. ಎಲ್ಲವೂ ನನ್ನ ಬಾಯಿಂದ ಅನಾವರಣಗೊಳ್ಳುತ್ತಿದ್ದವು!
ಕಾರು ಸಿದ್ದಾಪುರ ದಾಟಿತು.. ಮಾಯ್ನೋರಮನೆಯ ಮುಂದೆ ಬಂದು ನಿಂತಿತು..!!!
ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "
ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಓಡಿಸಿದ್ದ ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು..!
ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಆದರೆ ಮರುದಿನ ಬೆಳಿಗ್ಗೆ.. (ಮರುದಿನ ಬೆಳಿಗ್ಗೆ ವಾಟ್ ನಾನ್ಸೆನ್ಸ್.. ನಾವು ತಲುಪಿದ್ದು ಬೆಳಗಿನ ಜಾವ ಎರಡು ಘಂಟೆ ಹೊತ್ತಿಗೆ) ಮತ್ತೆ ಪ್ರಯಾಣ ಮುಂದುವರೆಸ ಬೇಕಾಗಿದ್ದರಿಂದ.. ಲ್ಯಾರಿ ಅಜ್ಜನ ಕೋಣೆಯಲ್ಲಿ ಮಲಗಿಕೊಂಡೆವು.. ಸವಿತಾ ಶೀತಲ್ ಆಗಲೇ ನಿದ್ರಾದೇವಿಯ ಅಸ್ತ್ರಕ್ಕೆ ಬೆರಗಾಗಿದ್ದರು. ನಾನು ಕೆಲಹೊತ್ತು ಸಂದೇಶಗಳನ್ನು ನೋಡಿ..ಹಾಗೇ.. ನಿದ್ರಾದೇವಿಯ ಮಡಿಲಿಗೆ ಜಾರಿದೆ.
ಮುಂದಿನ ದಿನದ ದಿನಚರಿಯ ಬಗ್ಗೆ ಮತ್ತೆ ಚಡಪಡಿಕೆ.. ಚಡಪಡಿಕೆ.........................!
ಶಿರಸಿಯ ಪ್ರವಾಸದ ಮೊದಲ ಭಾಗ ಅನಾವರಣ ಗೊಂಡಿದೆ, ದಾರಿಯುದ್ದಕ್ಕೂ ಸಿಕ್ಕ ಆತಿಥ್ಯ , ಭಾಗ್ಯ ಪುಟ್ಟಿ ಕಡೂರಿನಲ್ಲಿ ಸಿಕ್ಕಿದ್ದು, ಶಿವಮೊಗ್ಗದಲ್ಲಿ ಗಿರೀಶ್ ಹಾಗು ಅವರ ಗೆಳೆಯರ ಭೇಟಿ ಅಲ್ಲಿಂದ ಅವರ ಜೊತೆ ಪ್ರವಾಸ , ಮಾಯ್ನೋರ್ ಮನೆ ಯಲ್ಲಿ ಭಾಗ್ಯ ಮನೆಯಲ್ಲಿನ ಹಿರಿಯರ ಭೇಟಿ ವಾವ್ ವಾವ್ ಇನ್ನೇನು ಬೇಕು ಇಂತಹ ಚಂದದ ಅನುಭಾವಕೆ, ಒಳ್ಳೆ ಟೇಕ್ ಆಫ್ ಆಗಿದೆ ಮೊದಲ ಭಾಗದ ಪಯಣ, ನೀವೆಲ್ಲಾ ಕಾರಿನಲ್ಲಿ ಎಷ್ಟೆಲ್ಲಾ ಕೀಟಲೆ , ತಮಾಷೆ, ನಗು, ಇವುಗಳನ್ನು ಅನುಭವಿಸಿರ ಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಖುಶಿಯಾಗುತ್ತದೆ. ಎರಡನೇ ಭಾಗಕ್ಕೆ ಕಾಯುತ್ತಿದ್ದೇನೆ .
ReplyDeleteಬರೆದ ಹಾಗೆಯೇ.. ನಡೆದರೆ.. ಆಹಾ ಅದಕ್ಕಿಂತ ಇನ್ನೇನು ಬೇಕು.. ಹಾಗೆಯೇ ನಡೆಯಿತು ಜೊತೆಯಲ್ಲಿ ಸ್ನೇಹ ಸಿಂಚನ.. ಮಧುರ ಬಾಂಧವ್ಯ.. ಇವೆಲ್ಲ ಬಂಗಾರಕ್ಕೆ ಸುವರ್ಣ ಚೌಕಟ್ಟು ಕೊಟ್ಟಿತು.. ಸುಂದರವಾದ ಮೊದಲ ದಿನ ಕಳೆದದ್ದೇ ಗೊತ್ತಾಗಲಿಲ್ಲ.. ಧನ್ಯವಾದಗಳು ಸರ್ಜಿ ನಿಮ್ಮ ಸುಂದರ ಮನದಾಳದ ಪ್ರತಿಕ್ರಿಯೆಗೆ..
Deleteಹಾ ಹಾ ..ಶ್ರೀಕಾಂತಣ್ಣಾ ಸೂಪರ್.
ReplyDeleteನಿಜ ಸಂಜೆ ಆರಕ್ಕೆ ಶುರುವಾದ ಅವತ್ತಿನ ಮಾತಿಗೆ ಪೂರ್ಣವಿರಾಮ ಬಿದ್ದಿದ್ದು ಬೆಳಿಗ್ಗೆ ಮೂರಕ್ಕೆ ಅಲ್ವಾ?
ನೀವು ನಮ್ಮ ಮನೆಗೆ ಬಂದಿದ್ದು ಕನಸೇನೋ ಅಂತನ್ನೋವಷ್ಟರ ಮಟ್ಟೀಗೆ ನಾ ಕಳೆದುಹೋಗಿದ್ದೆ ಅಲ್ಲಿ.
ಶಿವಮೊಗ್ಗದ ಅಣ್ಣ ಅತ್ತಿಗೆ ದೊಡ್ಡಮ್ಮನ ಆತಿಥ್ಯಕ್ಕೆ ನನ್ನದೊಂದು ನಗೆಯ ನಮನ .ಗಿರೀಶ್ ಮತ್ತವರ ಸ್ನೇಹಿತ ಸಿಕ್ಕಿದ್ದು ಪ್ರಯಾಣದ ಹಾದಿಯ ಮತ್ತೊಂದಿಷ್ಟು ತರ್ಲೆಗಳಿಗೆ ಕಾರಣವಾಯ್ತು....ಪುಟ್ಟಿ ಅತ್ತಿಗೆ ನೀವು ...ಮಾತು...ಹರಟೆ....ತರಲೆ.....ನೀವ್ ಇರಲು ಜೊತೆಯಲ್ಲಿ.
ಮರುದಿನದ ಭಾವದ ನಿರೀಕ್ಷೆಯಲ್ಲಿ...
ಈ ಮೂರು ದಿನದ ಸಂಪೂರ್ಣ ಖುಷಿಯ ನನ್ನಲ್ಲೇ ಯಾವತ್ತಿಗೂ ಉಳಿಸಿಕೊಂಡು.
ಪ್ರೀತಿಯಿಂದ
ಮಗಳೇ ಈ ಖುಷಿಗೆ ಕಾರಣ ಕರ್ತೆ ಮತ್ತು ಒಡತಿ ನೀನೆ.. ನೀ ಸಿಕ್ಕಿದ್ದು ನನ್ನ "ನಿನ್ನ ಹೆಸರೇ" ಸರಿ.. ಜನುಮ ಜನುಮದ ಅನುಬಂಧ.. ಇಷ್ಟವಾಯಿತು.. ಸುಮಾರು ಹನ್ನೆರಡು ಘಂಟೆಗಳು ಕಾರಲ್ಲಿ ಕೂತಿದ್ದರು.. ಆಯಾಸ ಪದದ ಅರ್ಥವೇ ಸುಳಿಯಲಿಲ್ಲ ಅದಕ್ಕೆ ಕಾರಣ ನಮ್ಮೆಲ್ಲರ ಮಾತುಗಳು.. ಜೊತೆಯಲ್ಲಿ ಓಡಾಡಬೇಕು ಎನ್ನುವ ಬಹುದಿನಗಳ ಹಂಬಲ..
Deleteನಿಮ್ಮ ಮನೆಯಲ್ಲಿ ತೋರಿದ ಪ್ರೀತಿಗೆ ನಾ ಏನೇ ಬರೆದರೂ ಕಡಿಮೇ.. ಆದರೂ ನನ್ನ ಪ್ರಯತ್ನ ಮಾಡುವೆ..
ಧನ್ಯವಾದಗಳು ಮಗಳೇ ಆ ಪ್ರೀತಿಗೆ.. ಆ ವಿಶ್ವಾಸಕ್ಕೆ ಮತ್ತು ಸುಂದರ ಪ್ರತಿಕ್ರಿಯೆಗೆ
ಪ್ರೀತಿಯ ಶ್ರೀಕಾಂತೂ....
ReplyDeleteಬದುಕಿನ
ಪ್ರತಿ ಕ್ಷಣವನ್ನೂ
ತನ್ನ ಬಾಂಧವ್ಯಗಳನ್ನು ಅನುಭವಿಸ ಬಲ್ಲವ ಹೀಗೆ ಬರೆಯಬಲ್ಲ...
ಬರಹ ಓದುತ್ತಿದ್ದರೆ ನಿಮ್ಮ ಸ್ನೇಹ ಪ್ರಭಾವಳಿಯಲ್ಲಿ ಒಳಗಾದ ನಾವು ಧನ್ಯ ಎನಿಸುತ್ತದೆ...
ವ್ಯವಹಾರದ ಈ ಜಗತ್ತಿನಲ್ಲಿ ನಿಮ್ಮಂಥವರು
ಮತ್ತೆ ಮತ್ತೆ ನಮ್ಮೊಳಗಿನ ಅಂತಃಪ್ರಜ್ಞೆಯನ್ನು ಜಾಗ್ರತಿಗೊಳಿಸುತ್ತಾರೆ..
ನಿಮಗೆ ಪ್ರೀತಿಯ ವಂದನೆಗಳು ಪುಟ್ತಮ್ಮಾ...
ಪ್ರವಾಸ ಪ್ರಯಾಸವಾಗದೆ ಇರೋದಕ್ಕೆ ಈ ಮಮತೆಯ ಸಂಕೋಲೆ ಕಾರಣ.. ಪ್ರೀತಿ ವಿಶ್ವಾಸಗಳು ಈ ಮಟ್ಟಿಗೆ ಸಿಗುತ್ತವೆ ಎಂದು ಕನಸಲ್ಲೂ ಕಾಣೋಕೆ ಆಗೋಲ್ಲ.. ರಕ್ತ ಸಂಬಂಧವಿಲ್ಲ.. ಪರಿಚಯವಿಲ್ಲ.. ಅಚಾನಕ್ ಭೇಟಿ ಈ ನಿಟ್ಟಿನ ಪ್ರೀತಿ ವಿಶ್ವಾಸಗಳು ತರುತ್ತವೆ ಅಂದರೆ.. ಭಗವಂತ ಈ ಭೂಮಿಯಲ್ಲಿ ಇದ್ದಾನೆ ಅನ್ನುವುದು ಸ್ಪಷ್ಟ.. ನಿಮ್ಮಂಥವರ ರೂಪದಲ್ಲಿ..
Deleteಧನ್ಯವಾದಗಳು ಪ್ರಕಾಶಣ್ಣ
ಮಾಮರವೆಲ್ಲೋ ಕೋಗಿಲೆ ಎಲ್ಲೋ ಅಲ್ಲವೇ ಮತ್ತೆ. ಮೊದಲ ಭಾಗ ಶುರುವಾಗಿದೆ, ಮುಂದುವರೆಸಿ ಜಮಾಯಿಸಿ ಬಿಡಿ.
ReplyDeleteಬದರಿ ಸರ್ ಪ್ರತಿ ಪ್ರವಾಸವೂ ನಿಮ್ಮ ಮಾತಿಂದಲೇ ಶುರುವಾಗುತ್ತದೆ.. ಯಾಕೋ ಏನೋ ಕಾಣೆ ನೀವು ನನ್ನ ಜೊತೆ ಪ್ರವಾದಲ್ಲಿ ಬರಬೇಕು ಇರಬೇಕು ಎನ್ನುವ ಹಂಬಲ ಬಹಳ ಇದೆ.. ನೀವು ಕೊಡುವ ಈ ಪ್ರೋತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು
Deleteಚೆಂದದ ಪ್ರವಾಸ ಕಥನ !!!! ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇವೆ :-)
ReplyDeleteಡಾಕ್ಟ್ರೆ ಏನು ಹೇಳಲಿ ನಿಮ್ಮ ಮಾತುಗಳಿಗೆ.. ಸ್ನೇಹಜೀವಿ ಎಂದರೆ ಹೀಗೆ ಇರುತ್ತಾರೆ ಎನ್ನುವುದಕ್ಕೆ ಉತ್ತಮ ನಿದರ್ಶನ ನೀವು.. ಖಂಡಿತ ಮುಂದಿನ ಭಾಗ ಆದಷ್ಟು ಬೇಗ ಬರುತ್ತದೆ.. ನಿಮ್ಮ ಸ್ನೇಹಮಯ ಪ್ರತಿಕ್ರಿಯೆ ನನ್ನ ಧನ್ಯವಾದಗಳು
Deleteಶ್ರೀಕಾಂತ್ ಮಂಜುನಾಥ್... ನಿಮ್ಮ ಛಾಯಾಚಿತ್ರಗಳಷ್ಟೇ ಸುಂದರ ನಿಮ್ಮ ಬರವಣಿಗೆ. ಒಂದೊಂದು ವಾಕ್ಯವೂ ಒಂದೊಂದು ಫ್ರೇಮು.
ReplyDeleteಓದುತ್ತ ನಾನೂ ನಿಮ್ಮೊಂದಿಗೆ ನನ್ನ ಪ್ರೀತಿಯ ಸಿದ್ದಾಪುರದ ತನಕ ಪಯಣಿಸಿದೆ.
ಈಗ ನಲವತೈದು ವರ್ಷಗಳ ಹಿಂದೆ ನಾನು ಓದಿದ್ದು, SSLC ಪಾಸು ಮಾಡಿದ್ದು ಇದೇ ಸಿದ್ದಾಪುರದ SV ಹೈಸ್ಕೂಲಿನಿಂದ...
ಸಿದ್ದಾಪುರದಿಂದ ಯಾವ ಕಡೆ ಈ 'ಮಾಯ್ನೋರ ಮನೆ'...? ಎಷ್ಟು ದೂರ?
ಮುಂದಿನ ಕಂತಿನಲ್ಲಿ ಹೇಳಿ ಪ್ಲೀಜ್.
ಗುರುಗಳೇ ನಾ ಧನ್ಯನಾದೆ.. ಬಹಳ ಖುಷಿಯಾಗುತ್ತಿದೆ ನಿಮ್ಮ ಪ್ರತಿಕ್ರಿಯೆ ನೋಡಿ.. ನೀವು ಸಿದ್ದಾಪುರದಲ್ಲಿ ಓದಿದ್ದು ಎಂಬ ವಿಷಯ ತಿಳಿದು ಸಂತಸವಾಯಿತು..
Deleteತಂಗಿಯಾಗಿ ಬಂದು ಮಗಳೇ ಆಗಿರುವ ಭಾಗ್ಯ ಭಟ್ ತಿಳಿಸಿರುವ ಮಾಹಿತಿ ಇಲ್ಲಿ ಹಾಗೆ ಹಾಕುತ್ತಿದ್ದೇನೆ.
ನಮಸ್ತೆ ಸರ್...
ಶ್ರೀಕಾಂತ್ ಅಣ್ಣನ ಬ್ಲಾಗ್ ನಲ್ಲಿ ನಿಮ್ಮ ಕಾಮೆಂಟ್ ನೋಡಿ (http://tripping-life.blogspot.in/2014/03/blog-post_31.html) ಮಾತಾಡಬಂದೆ ನಾನಿಲ್ಲಿ.
ಸರ್ ನಾನೂ ಸಿದ್ದಾಪುರದ ಎಸ್ ವಿ ಯಲ್ಲೇ ಓದಿದ್ದು ೨ ವರ್ಷ...ಮಾಯ್ನೋರಮನೆ(ನನ್ನೂರು) ಇರೋದು ಸಿದ್ಧಾಪುರದಿಂದ ಮೆಣಸಿ ಲಂಬಾಪುರ ಮಾರ್ಗದಲ್ಲಿ...ಸಿದ್ದಾಪುರದಿಂದ ೨೦ ಕಿಲೋಮೀಟರ್ ಆಗುತ್ತೆ ಅಷ್ಟೇ. ಅಣ್ಣನ ಬ್ಲಾಗ್ನಲ್ಲಿನ್ನ ನಿಮ್ಮ ಕಾಮೆಂಟ್ ಆಪ್ತವಾಯ್ತು ..ಖುಷಿಯಾಯ್ತು.
ನಮಸ್ತೆ
ಧನ್ಯವಾದಗಳು ಗುರುಗಳೇ ನಿಮ್ಮ ಸುಂದರ ಪ್ರತಿಕ್ರಿಯೆಗೆ
ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ನೀಡಿದ್ದು ಹಾಲು ಅನ್ನ ಅನ್ನೋ ಹಾಗೆ, ನೀವು ಕಂಡ ಕನಸಿಗೆ ಹಾಲು ತುಪ್ಪ ಸೇರಿಸಿದ ಹಾಗಿದೆ ನಿಮ್ಮ ನನಸು. ಮುಂದಿನ ಭಾಗಕ್ಕೆ ಕಾತರದ ಕಾಯುವಿಕೆ.. ಬೇಗ ಬರಲಿ ಮುಂದಿನ ಸಂಚಿಕೆ :)
ReplyDeleteಕಂಡ ಕನಸು ನನಸಾಗಿ ಕಣ್ಣ ಮುಂದೆ ಬಂದು ನಿಂತಿತು ಈ ಪ್ರವಾಸ.. ದಾರಿಯುದ್ದಕ್ಕೂ ನಿಮ್ಮ ಮಾತುಗಳು.. ಸಂದೇಶಗಳು ನನಗೆ ಬೇಕಿದ್ದ ಉತ್ಸಾಹ ತುಂಬುತ್ತಿತ್ತು.. ಖಂಡಿತ ಮುಂದಿನ ಭಾಗ ಬರುತ್ತದೆ ಆಸಷ್ಟು ಬೇಗ
Deleteಸೂಪರ್....ಮುಂದಿನ ಸಾರ್ತಿ ನಮ್ಮನ್ನೂ ಕರಿತಿರಾ ? :)
ReplyDeleteಪ್ರಕಾಶ್ ಹೆಗಡೆಯವರು ಹೇಳಿದಂತೆ ಖುಷಿಯಾಗತ್ತೆ ನಿಮ್ಮ ಬಾಂಧವ್ಯದ ಬಗ್ಗೆ ಓದಲು
ಹಾಗೂ ಅದರಲ್ಲಿ ಒಳಪಡಲು
ಸಹೋದರಿ ಖಂಡಿತ ನೀವು ಬರುವುದಾದರೆ ಕರೆದೊಯ್ಯಲು ನಾವು ಸಿದ್ಧ ಪರಿವಾರದೊಂದಿಗೆ.. ಈ ಮಧುರ ಬಾಂಧವ್ಯದ ನನ್ತಿತೆ ಕಾರಣ ಈ ಅಕ್ಷರ ಸರಸ್ವತಿ. ಆ ದೇವಿಯ ಅನುಗ್ರಹ ಇರುವ ನಿಮ್ಮೆಲ್ಲರ ಸಖ್ಯ ನನಗೆ ಸಿಕ್ಕದ್ದು ನನ್ನ ಭಾಗ್ಯ... ಸುಂದರ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಧನ್ಯವಾದಗಳು
Deleteಮುಂದಿನ ಭಾಗಕ್ಕೆ ವೈಟಿಂಗ್ :)
ReplyDeleteಟ್ರೈಲರ್ ಆಯಿತು.. ಟೈಟಲ್ ಕಾರ್ಡ್ ಆಯಿತು.. ಖಂಡಿತ ಚಿತ್ರ ಬಂದೆ ಬರುತ್ತದೆ ಪಿ ಎಸ್.. ಧನ್ಯವಾದಗಳು ಓದಿ ಮೆಚ್ಚಿದ್ದಕ್ಕಾಗಿ
DeleteNice nice.. avattu haakalagada comment ivattu net sariyaada mele :-) waiting for next part.. :-)
ReplyDeleteಧನ್ಯವಾದಗಳು ಪ್ರಶಸ್ತಿ. .ತದವಾಗಿ ಪ್ರತಿಕ್ರಿಯೆ ನೀಡಿದರೂ ನಾ ಪ್ರತಿಕ್ರಿಯೆ ಕೊಡುವ ಹೊತ್ತಿನಲ್ಲಿ ನಿಮ್ಮ ಮೆಚ್ಚುಗೆ ಬಂದಿದ್ದು ಖುಷಿಯಾಯ್ತು.. ಧನ್ಯವಾದಗಳು ಮುಂದಿನ ಭಾಗ ಸದ್ಯದಲ್ಲೇ
DeleteYettana mamara, yettana kogile, yeni sneha sambandha...simply you are great...
ReplyDelete