"ಏನ್ ಶ್ರೀ...ನನ್ನ ಹೊರಗೆ ಕರೆದುಕೊಂಡು ಹೋಗೆ ಇಲ್ಲ....ಬರಿ ಬೆಂಗಳೂರಿನಲ್ಲಿ ಸುತ್ತಿ ಸುತ್ತಿ ಬೇಜಾರಿಗಿದೆ...ಬೆಂಗಳೂರಿಂದ ನನ್ನ ಹೊರಗೆ ಕರೆದುಕೊಂಡು ಹೋಗಿ ಸುಮಾರು ಒಂದು ವರುಷದ ಮೇಲೆ ಆಯಿತು...!!"
ಯಾಕೋ ನನ್ನ ಸಾರಥಿ ವಿಕ್ಟರ್ ನಾ ಮಾತು ಕೇಳಿ ಮನಸಿಗೆ ತಾಕಿತು..ನನ್ನ ಗೆಳೆಯ ಸಂದೀಪ್ ಹಾಗು ಪ್ರಶಾಂತ್..ಭಾನುವಾರ ಬೆಳಿಗ್ಗೆ ಬೆಂಗಳೂರಿನ ಹೊರಗೆ ಹೋಗಿ ಬರೋಣ ಎಂದರು...ಸರಿ ರೇವಣ ಸಿದ್ದೇಶ್ವರ ಬೆಟ್ಟ ಅಥವಾ ರಾಮಗಿರಿ ಬೆಟ್ಟ..ಎರಡರ ಮಧ್ಯೆ ತಾಕಲಾಟ ಶುರುವಾಯಿತು..ಕಡೆಗೆ ರಾಮಗಿರಿ ಬೆಟ್ಟ ಗೆದ್ದಿತು..
ನಮ್ಮ ಮೋಟರ್ ಸೈಕಲನ್ನು ವಾಹನ ನಿಲ್ದಾಣದಲ್ಲಿ ನಿಲ್ಲಿಸಿ ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಸಾಗಿದೆವು..ರಣಹದ್ದಿನ ಸಂರಕ್ಷಣ ಸ್ಥಳ ಎಂದು ತಿಳಿದಿತ್ತು...ನಮ್ಮ ಅದೃಷ್ಟಕ್ಕೆ..ಯಾವುದೇ ಒಂದು ಪಕ್ಷಿಯು ಕಾಣಲಿಲ್ಲ...ಆದ್ರೆ ಮುಂಜಾನೆಯ ತಂಗಾಳಿ, ಮೋಡ ಕವಿದ ವಾತಾವರಣ...ಮನಸಿಗೆ ಹುರುಪು ತಂದಿದ್ದು ಸುಳ್ಳಲ್ಲ..
ಮೂರು ಗೆಳೆಯರಿದ್ದ ಕಾರಣ..ಮಾತಿಗೇನು ಕೊರತೆ ಇರಲಿಲ್ಲ...ಪ್ರಶಾಂತ್ ಬದಲಾವಣೆಗೆಂದು ತನ್ನ ಮಾಮೂಲಿ ಕ್ಯಾಮೆರಾ ಬಿಟ್ಟು..ಚಿಕ್ಕ ಚೊಕ್ಕ..ಪುಟಾಣಿ ಕ್ಯಾಮೆರಾ ತಂದಿದ್ದ..ಅದರ ಬಗ್ಗೆ ತಮಾಷೆ..ಕುಹಕ, ಗೇಲಿ ಮಾತು ಎಲ್ಲ ನಡೆದಿತ್ತು...ಬಹಳ ಮಧುರ ಈ ಸ್ನೇಹದ ಲೋಕ...
ಸಂದೀಪ್ ನ ಒಂದಷ್ಟು ತಮಾಷೆ ಮಾಡಿದೆವು, ಆಮೇಲೆ ಪ್ರಶಾಂತನ ಸರದಿ..ಕಡೆಗೆ ಅವರಿಬ್ಬರೂ ಸೇರಿ ನನ್ನ..ಹೀಗೆ ಸಾಗಿತ್ತು...
ರಾಮ ಕಾಕುಸುರನ್ನು ನಿಗ್ರಹಿಸಿದ ಸ್ಥಳ ಈ ರಾಮ ಗಿರಿ ಬೆಟ್ಟ...ಕಾಗೆಗಳು ಬಲು ಅಪರೂಪ ಈ ಸ್ಥಳದಲ್ಲಿ...ಅಲ್ಲಿಯ ಅರ್ಚಕರು ಆ ಬೆಟ್ಟದ ಬಗ್ಗೆ ಇನ್ನಷ್ಟು ಮಾಹಿತಿ ಕೊಟ್ಟರು...
ಹನುಮ ದೇವರು, ಮಹಾದೇವ, ಹಾಗು ರಾಮ ದೇವರ ಆಶೀರ್ವಾದ ಪಡೆದು..ತಂಪಾದ ತಾಣದಲ್ಲಿ ಮನೋಲ್ಲಾಸ ಹೊಂದಿ ಬೆಂಗಳೂರಿಗೆ ಹಿಂತಿರುಗಿ ಬಂದಾಗ...ಉದಯ ಟಿ.ವಿಯಲ್ಲಿ "ಇದು ಹಕ್ಕಿ ಅಲ್ಲ..ಆದ್ರೆ ಹಾರ್ತೈತಲ್ಲ ..." ಹಾಡು ಬರ್ತಾ ಇತ್ತು..ಮನಸು ಕೂಡ ಹಕ್ಕಿಯಾಗದಿದ್ದರೂ ಕೂಡ ಉಲ್ಲಾಸದಿಂದ ಹಾರುತ್ತಿತು..
ಬೆಂಗಳೂರಿಂದ ಮೈಸೂರ್ ರಸ್ತೆಯಲ್ಲಿ ನಲವತ್ತು ಕಿ.ಮಿ. ದೂರದಲ್ಲಿರುವ ರಾಮದೇವರ ಬೆಟ್ಟ..ಸುಂದರವಾದ ತಾಣ..ಮಕ್ಕಳಾದಿಯಾಗಿ ಎಲ್ಲರು ಬಂದು ನಲಿಯುತ್ತಾರೆ..ನಿಸರ್ಗ ಮಾತೆ..ಆರಾಮಾಗಿ ಸುಖ ಕೊಡುವ ಹಾಗು ಪಟ್ಟಣದ ಉರಿಯುವ ಬಾಣಲೆಯಿಂದ ತಂಪನ್ನು ಹಾಗು ಮನೋಲ್ಲಾಸವನ್ನು ಕೊಡುವ ಸ್ಥಳ..ಅಪರೂಪದ ಜಾಗ...
ಚೆಂದದ ಬರಹ.ಅಂದದ ಫೋಟೋಗಳು!ಅಭಿನಂದನೆಗಳು ಶ್ರೀಕಾಂತ್.
ReplyDeleteಉತ್ತಮ ಸಚಿತ್ರ ಬರಹ.
ReplyDeleteಚಾರಣಗಳು ಮನೋಲ್ಲಾಸಕ ಮತ್ತು ದೈಹಿಕ ವ್ಯಾಯಾಮ.
good one heard about it now u gave full info
ReplyDeleteಧನ್ಯವಾದಗಳು ಡಾಕ್ಟ್ರೆ ... ನಿಮ್ಮ ಪ್ರೋತ್ಸಾಹದಾಯಕ ನುಡಿಗಳು ಶ್ರೀರಕ್ಷೆ..
ReplyDeleteಹೌದು ಬದರಿ ಸರ್..ನಿಮ್ಮ ಮಾತುಗಳು ಅಕ್ಷರಶಃ ನಿಜ...ಅಪಾಯವಿಲ್ಲದ ಚಾರಣ..ಮನಸಿನ ಹೂರಣ ತೆಗೆದಿಡುತ್ತದೆ..ಧನ್ಯವಾದಗಳು
ReplyDeleteಧನ್ಯವಾದಗಳು ದೇಸಾಯಿ ಸರ್..
ReplyDeleteThis is great!
ReplyDelete