Monday, July 9, 2012

ಪುಸ್ತಕದ ಮನೆ..ಎರಡನೇ ಭೇಟಿ...


ಪ್ರಹ್ಲಾದ ತರತರ ನಡುಗುತ್ತ..

"ತಂದೆಯೇ...ಏಕೆ ಇಷ್ಟು ಆಕ್ರೋಶ ನನ್ನ ಮೇಲೆ?"

"ಹರಿ ಎಲ್ಲಿ ಇದ್ದಾನೆ ..? ಈ ಕಂಬದಲ್ಲಿರುವನೆ..ಈ ಕಂಬದಲ್ಲಿರುವನೆ..?

"ತಂದೆಯೇ...ಹರಿಯ ವಿಚಾರ ಬಿಡು...ನಿಮ್ಮ ಅಜ್ಜಿಯಿರುವ ಲೋಕವನ್ನು ತೋರಿಸುತ್ತೇನೆ ಬಾ ನನ್ನ ಜೊತೆ"

"ಏನಂದೆ..ನನ್ನ ಅಜ್ಜಿಯೇ..."

"ಹೌದು..ನೀನೆ ಹೇಳಿದಂತೆ..ನೀನು ಚತುರ್ಮುಖ ಬ್ರಹ್ಮನ ಮೊಮ್ಮಗತಾನೆ...""

"ಹೌದು ಅದಕ್ಕೆ?"

"ಬ್ರಹ್ಮ ನಿನ್ನ ತಾತ ನಾದರೆ..ಸರಸ್ವತಿ ನಿನ್ನ ಅಜ್ಜಿ ತಾನೇ..ಬಾ ನನ್ನ ಜೊತೆ"

ಸರಿ ಇಬ್ಬರು ಭೂಲೋಕಕ್ಕೆ ಬಂದು..ಮೈಸೂರ್ ರಸ್ತೆಯಲ್ಲಿ ಪಾಂಡವಪುರ ರಸ್ತೆಯಲ್ಲಿ ಕೆಳಕಂಡ ವಿಳಾಸಕ್ಕೆ ಬಂದಿಳಿಯುತ್ತಾರೆ


ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206


"ತಂದೆ ಇದೋ ನೋಡು..ಸರಸ್ವತಿ ಲೋಕ..ನೀನು ತ್ರಿಲೋಕವನ್ನು ಗೆದ್ದರೂ..ಈ ಲೋಕವನ್ನು ಜಯಿಸದಾದೆ..ನೋಡಿಕೊಂಡು ಬರೋಣ ಬಾ..."

ಹಿರಣ್ಯಕಶಿಪು ಒಳಗೆ ಕಾಲು ಇಡುತ್ತ ಹೋದ ಹಾಗೆ...ಅವನ ಅಂಧಕಾರ ದೂರವಾಗುತ್ತ ಹೋಗುತ್ತದೆ...ಎಲ್ಲೆಲ್ಲಿ ನೋಡಿದರು ಸರಸ್ವತಿ ಅಜ್ಜಿ ಕಾಣುತ್ತ ಹೋಗುತ್ತಲೇ ಇರುತ್ತಾಳೆ...ಎಂತಹ ಲೋಕ, ಎಂತಹ ವಿಸ್ಮಯ...ಅವನು ಹಾಗೆ ನೋಡುತ್ತಾ..ಅದರ ವಿಚಾರವನ್ನು ತಿಳಿಯಬೇಕು ಎನ್ನುವ ಕುತೂಹಲ ಕಾಡುತ್ತದೆ..

ಆಗ ಅಲ್ಲಿದ್ದ  ಶ್ರೀಮತಿ ಅಂಕೆ ಗೌಡರು, ಶ್ರೀ. ಚಂದ್ರಶೇರಯ್ಯ, ಶ್ರೀ ಧನ್ಯಕುಮಾರ್ ...ಎಲ್ಲ ವಿವರವನ್ನು ಕೊಡುತ್ತಾರೆ...ಬಹಳ ಸಂತೋಷವಾಗುತ್ತದೆ..


"ಪ್ರಹ್ಲಾದ ಕುಮಾರ...ನನ್ನೆಲ್ಲ ಜನ್ಮ ಬರಿ ಯುದ್ದ ಹೋರಾಟಗಳಲ್ಲೇ ಮುಗಿಯಿತು....ನೀನು ನಾರದ ಮುನಿವರ್ಯರ ಜೊತೆ ಎಲ್ಲ ಲೋಕಗಳನ್ನು ಸುತ್ತಿ..ನನ್ನ ಅಜ್ಜಿಯ ವಾಸಸ್ಥಾನವಾದ "ಶ್ರೀ ಅಂಕೆ ಗೌಡರ ಪುಸ್ತಕದ ಮನೆ" ಇದರ ವಿಚಾರವನ್ನು ಲೋಕ ಲೋಕಕ್ಕೂ ತಿಳಿಸಬೇಕು..ಇದು ನನ್ನ ಆಜ್ಞೆ..ಹಾಗು ನನ್ನ ತಾತನ ಆಶಯ..."


"ಆಗಲಿ ತಂದೆ ನೀನು ಹೇಳಿದ ಹಾಗೆಯೇ ಆಗಲಿ..ನಾನು ಮೈಸೂರಿನಲ್ಲಿರುವ ಬಾಲು ಸರ್ (ನಿಮ್ಮೊಳಗೊಬ್ಬ ಬಾಲು ) ಅವರಿಗೆ ಹೇಳುತೇನೆ..ಅವರು ಜ್ಜಿಗರು ಗುಂಪಿಗೆ ತಿಳಿಸುವಂತೆ ಮಾಡಿ..ಅದನ್ನು ಇಡಿ ವಿಶ್ವಕ್ಕೆ ಹಬ್ಬುವಂತೆ ಮಾಡುತ್ತೇನೆ..."

ಬಾಲು ಸರ್ ನಮ್ಮನ್ನು ಪುಸ್ತಕದ ಮನೆಗೆ ಕರೆದುಕೊಂಡು ಹೋದ ಮೇಲೆ ನನ್ನ  ಸ್ನೇಹಿತರ ಬಳಿ ಹೇಳಿದೆ..ಅವರು ಅಲ್ಲಿಗೆ ಹೋಗಬೇಕು ಎನ್ನುವ ಆಸೆ ವ್ಯಕ್ತಪಡಿಸಿದರು..ಅದರ ಪರಿಣಾಮವಾಗಿ ನಮ್ಮ "ಅಲೆಮಾರಿಗಳ ತಂಡ" ಒಂದು ಶನಿವಾರ ಅಲ್ಲಿಗೆ ಭೇಟಿ ನೀಡಿತು...ಅದರ ಕೆಲ ಚಿತ್ರಗಳು...















ಬಂದ ಎಲ್ಲರು ಸಂತೋಷದಿಂದ ಉಘೆ ಉಘೆ ಎನ್ನುತ್ತಾ ಖುಷಿ ಪಟ್ಟರು...ಮತ್ತೆ ಮತ್ತೆ ಬರುವ ಹಂಬಲ ವ್ಯಕ್ತ ಪಡಿಸಿ ತಮ್ಮ ಸ್ನೇಹಿತರಿಗೂ,, ಬಂಧು ವರ್ಗದರಿಗೂ ವಿಷಯವನ್ನು ತಿಳಿಸುವ ಸಂಕಲ್ಪ ಮಾಡಿದರು....

5 comments:

  1. ಸರ್ ತುಂಬ ಖುಷಿ ಆಯಿತು ನೀವು ಎರಡನೇ ಬಾರಿ ಭೇಟಿ ಕೊಡುತ್ತಿರುವುದನ್ನು ನೋಡಿ.... ಜೊತೆಗೆ ನಿಮ್ಮ ಲೇಖನದ ನಿರೂಪಣ ಶೈಲಿ ಸೂಪರ್..

    ReplyDelete
  2. ಶ್ರೀಕಾಂತ್;ನಿಮ್ಮ ಕಲ್ಪನೆಗೆ ಉಘೇ,ಉಘೇ!!ಹಾಗೆಯೇ ಅಂಕೆ ಗೌಡರಿಗೂ ಉಘೇ,ಉಘೇ!!ಬಾಲಣ್ಣನಿಗೂ,ಬ್ಲಾಗಿಗರಿಗೂ,ಜೈ ಹೋ!!

    ReplyDelete
  3. ಗಿರೀಶ್..ನಮಸ್ಕಾರಗಳು...ಹಾಗು ಧನ್ಯವಾದಗಳು ಹೌದು ಹಾ ಜಾಗವೇ ಹಾಗಿದೆ..ಒಂದು ಭೇಟಿಗೆ ಮುಗಿಯದ ಬಾಂಧವ್ಯ ಅದು...ಅಲ್ಲವೇ...

    ReplyDelete
  4. ಡಾಕ್ಟ್ರೆ..ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...ಚಿಲುಮೆಯಾಗಿದ್ದು ನದಿಯಾಗಿ ಹರಿಯುವಂತೆ...ನಿಮ್ಮಂತವರ ನುಡಿಗಳಿಂದ ಪ್ರೋತ್ಸಾಹ ನೂರ್ಮಡಿಯಾಗುತ್ತದೆ...

    ReplyDelete
  5. Dear sir, i have one of them note...
    Give me replay in hindi or english...

    ReplyDelete