"ಅಣ್ಣಾ ಅಣ್ಣಾ.. "
ಫೋನ್ ಕಿರುಚುತಿತ್ತು,..
"ಹಲೋ ಎಸ್ ಪಿ ಹೇಗಿದ್ದೀಯ.. .. ಏನೂ ಯೋಚನೆ ಬೇಡ.. ತಲೆ ಮೇಲೆ ತಲೆ ಬೀಳಲಿ ನಿನ್ನ ಅಮೃತ ಘಳಿಗೆಯಲ್ಲಿ ನಾನಿರುವೆ.. "
"ಅಣ್ಣಾ ಅದು ನನಗೆ ಗೊತ್ತು ಕನ್ನಡಿಯಿಲ್ಲದೆ ನನ್ನ ಮೊಗವನ್ನು ಹೇಗೆ ನೋಡಿಕೊಳ್ಳಲಿ.. ನೀವು ಬಂದೆ ಬರುತ್ತೀರಿ ಎಂದು ನಂಗೆ ಗೊತ್ತು.. ನನ್ನದೊಂದು ಪ್ರಾರ್ಥನೆ.. "
"ಒಯೆ ಯಾಕೋ ಹಾಗೆಲ್ಲ ಹೇಳ್ತೀಯ.. ನೀನು ನನ್ನ ಬಂಗಾರದ ಪುಟ್ಟಿ.. ಹೇಳು ಏನು ನಿನ್ನ ಪ್ರಾರ್ಥನೆ"
"ಮದುವೆ.. ನನ್ನ ಲೋಕದಲ್ಲಿ ನಾನಿರುವೆ.. ಫೋಟೋಗಳು ಬರುವ ತನಕ ಕಾಯುವ ತಾಳ್ಮೆ ಎನಗಿಲ್ಲ.. ಅದಕ್ಕೆ"
"ಓಕೆ ಸರಿ.. ಸಿಗೋಣ ಮದುವೆಯಲ್ಲಿ"
"ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು" ಆಹಾ... ಹೆಣ್ಣು ಮಗಳು ತಲೆ ಸ್ನಾನ ಮಾಡಿ ಕಪ್ಪು ಕೂದಲನ್ನು ಹರಡಿಕೊಂಡು ಕೂತಿರುವ ಹಾಗೆ ಇರುವ ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಕ್ಕನೆ ಒಂದು ಪೋಸ್ಟರ್ ತಡೆದು ನಿಲ್ಲಿಸಿತು ..
ಹಾರಾಡುತ್ತಿರುವ ಮನಸ್ಸಿಗೆ ಆಹ್ವಾನ!!! |
"ಅರೆ ಅರೆ ಹೌದು ಸರಿಯಾದ ನಕ್ಷೆ" ನನ್ನ ಕಾರು ನನಗೆ ಹೇಳಿತು..
ನಿಧಾನವಾಗಿ ಅದರ ತಲೆ ಸವರುತ್ತಾ ಆ ಕಾಡಿನ ಒಳಗೆ ನುಗ್ಗಿಸಿದೆ..
ಅಲ್ಲೊಂದು ಇಲ್ಲೊಂದು ಚಿನ್ಹೆಗಳು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ತೋರಿಸುತ್ತಿತ್ತು..
ಆಹಾ.. ಬನ್ನಿ ಅಣ್ಣಾ ಕಾಯುತ್ತಾ ಇದ್ದೀವಿ!!! |
ಸುಮಾರು ಐದು ನಿಮಿಷಗಳ ನಂತರ...
ಕಾಯುತ್ತಿರುವ ಮಾರ್ಗ ಸೂಚಿ |
ಪ್ರಕೃತಿ ಮಡಿಲಲ್ಲಿ ಮುದ್ದು ಕಂದಮ್ಮ ನಸುನಗುತ್ತಿರುವಂತೆ ವೇದ ಘೋಷಗಳ ಮಧ್ಯೆ ನಮ್ಮ ಸಂಧ್ಯೆ ಅಂಗಳದಿ ಹಸೆಮನೆಯಲ್ಲಿ ನಾಚಿಕೆಯಿಂದ ಕೂತಿದ್ದಳು..
ನಮ್ಮನ್ನು ನೋಡಿದ ಸಂಭ್ರಮ ಆ ಪುಟ್ಟ ಕಣ್ಣುಗಳಲ್ಲಿ ಶರಧಿಯನ್ನೇ ತೋರಿಸಿತು..
ಅದನ್ನು ನೋಡಿದ ನಮಗೆಲ್ಲರಿಗೂ ಸುಮಾರು ೪೭೫ ಕಿಮಿ ಗಳ ಪ್ರಯಾಣದ ಆಯಾಸ ಉಫ಼್ಫ಼್ ಅಂಥಾ ಹಾರಿ ಹೋಯಿತು.. ಅಬ್ಬಾ ನಮ್ಮ ಸಂಧ್ಯಾ ಪುಟ್ಟಿಯ ಮೊಗದಲ್ಲಿ ಈ ನಗುವನ್ನು ತಂದ ನಮ್ಮ ಆಗಮನ ಆಹಾ ಸಾರ್ಥಕ ಎನ್ನಿಸಿತು,.
ಮಂದ ಗತಿಯಲ್ಲಿ ಸಾಗುತ್ತಿದ್ದ ವೇದ ಘೋಷಗಳ ನಡುವೆ ಪರಿಣಯದ ಸುಮಧುರ ಘಳಿಗೆಗೆ ಸಾಕ್ಷಿಯಾಗಿದ್ದು ಬಂಧು ಮಿತ್ರರ ಸಂತಸ.. ಶುಭಕೋರುವ ಮಧುರ ಮನಗಳ ವಿನಿಮಯ..
ನಮಸ್ಕಾರ.. ನಾನು "ವಿನಾಯಕ" ಸಂಧ್ಯಾಳ ಭಾವ.. ಒಂದು ಸ್ಪುರಧ್ರೂಪಿ ಬಿಳಿ ಜುಬ್ಬಾ ಪೈಜಾಮದಲ್ಲಿ ಕಂಗೊಳಿಸುತ್ತಿದ್ದರು... ಫೇಸ್ಬುಕ್ನಲ್ಲಿ ನಿಮ್ಮನ್ನು ನೋಡಿದ್ದೇನೆ.. ನೀವೆಲ್ಲಾ ಬಂದದ್ದು ಬಹಳ ಕುಶಿಯಾಯಿತು ಎಂದರು.. ೬೦ ಹಲ್ಲುಗಳ ಪ್ರದರ್ಶನ ಆದಮೇಲೆ ಆಸರಿಕೆ ಆಯಿತೆ.. ತಂಪಾಗಿ ಕುಡಿಯಿರಿ ಅಂದರು..
ಸಂಧ್ಯಾ ಅಲ್ಲಿಯೇ ಕುಳಿತು ಕಣ್ಣಲ್ಲಿ ಏನೋ ಹೇಳಿದಳು.. ಮರುಕ್ಷಣ ಅವಳ ಇನ್ನೊಂದು ಪ್ರತಿರೂಪ ನಮ್ಮ ಮುಂದೆ ಹಾಜರ್..
ನಾನು ಸುಷ್ಮಾ.. ಸಂಧ್ಯಾಳ ಅಕ್ಕ.. ನೀವೆಲ್ಲ ಬಂದದ್ದು ಖುಷಿಯಾಯಿತು.. ತಂಪಾಗಿ ಕುಡಿಯಿರಿ. ಮತ್ತೆ ಬರುವೆ.. ಎಂದು ಮತ್ತೆ ಮಂಟಪದ ಒಳಗೆ ಓಡಿದರು
ನಿಧಾನವಾಗಿ ಧರೆಗೆ ಇಳಿಯುತ್ತಿದ್ದೆವು..
ಮದುವೆ ಎಂದರೆ ಜಗಮಗ ಬೆಳಕು.. ಗದ್ದಲ.. ಗೌಜು.. ಎಲ್ಲಾ ಕಂಡಿದ್ದ ನಮಗೆ.. ಇಲ್ಲಿ ಪ್ರಕೃತಿ ಮಡಿಲಲ್ಲಿ ಎರಡು ಸುಮಧುರ ಮನೆಗಳ ಮನಗಳ ಒಂದಾಗುತ್ತಿದ್ದದ್ದು ನನಗೆ ಒಂದು ಸುಂದರ ಲೋಕಕ್ಕೆ ಹೋದ ಅನುಭವ..
ಕಲಾತ್ಮಕವಾಗಿ ಮೂಡಿದ್ದ ಕಲ್ಯಾಣ ಮಂಟಪ.. ಅದಕ್ಕೆ ತಕ್ಕ ಒಪ್ಪವಾದ ತೋರಣ.. ವಧು ವರನ ಹೆಸರು. ಅದಕ್ಕೆ ಮಾಡಿದ್ದ ಶೃಂಗಾರ.. ಒಂದಕ್ಕೊಂದು ಕಲಾತ್ಮಕ..
"ಅಣ್ಣಾ ಅಣ್ಣ.. " ಚಿರಪರಿಚಿತ ದನಿ ನನ್ನನ್ನು ಧರೆಗೆ ರಪ್ಪನೆ ಇಳಿಸಿತು..
ಸಿದ್ಧವಾದ ಪುಟ್ಟಿ |
ಕಲಾಕುಸುರಿಯಲ್ಲಿ ಎತ್ತಿದ ಕೈ ನಮ್ಮ ಪುಟ್ಟಿ |
"ಆಯ್ ಪುಟ್ಟಾ ಹೇಗಿದ್ದೀಯ.. "
"ಅಣ್ಣಾ ನಾನು ಸೂಪರ್.. ಪುಟ್ಟಿ.. ಹೇಗಿದ್ದೀಯ.. ಅತ್ತಿಗೆ ಹೇಗಿದ್ದೀರಾ.. ಅರೆ ಭಾಗ್ಯ ಪುಟ್ಟಿ.. ಅರ್ಚನ ಪುಟ್ಟಿ.. ಅಣ್ಣಾ ನನಗೆ ಇದಕ್ಕಿಂತ ಆನಂದ ಇನ್ನೇನು ಬೇಕು.. ಥ್ಯಾಂಕ್ ಯು ಸೊ ಮುಚ್"
"ಅಣ್ಣಾ.. ಅರ್ಚನ ಪುಟ್ಟಿ ಹಾಕಿದ ಮೆಹಂದಿ ನೋಡಿ.. ನಾನೇ ಮಾಡಿಕೊಂಡ ಜಡೆಗೆ ಅಲಂಕಾರ ನೋಡಿ.. " ಅಷ್ಟರಲ್ಲಿ ಸಂಧ್ಯಾಳ ಅಕ್ಕ ಕೂಡ ಶ್ರೀಕಾಂತ್ ನೋಡಿ ಅವಳೇ ಮಾಡಿಕೊಂಡ ಜಡೆಗೆ ಅಲಂಕಾರ ಎಂದರು..
ಅರ್ಚನ ಪುಟ್ಟಿಯ ಚಮತ್ಕಾರ |
ಅರ್ಚನ ಪುಟ್ಟಿಯ ಚಮತ್ಕಾರ |
ಅರ್ಚನ ಪುಟ್ಟಿಯ ಚಮತ್ಕಾರ |
ಅರ್ಚನ ಪುಟ್ಟಿಯ ಚಮತ್ಕಾರ |
ನನ್ನ ಮೊಬೈಲ್ ನಲ್ಲಿ "ಈ ಸಮಯ ಆನಂದಮಯ... " ಹಾಡು ಬರುತ್ತಿತ್ತು...
ಯಾರೋ ಕೂಗಿದರು... ಸಂಧ್ಯಾ ಒಳಗೆ ಓಡಿದಳು..
ವಿನಾಯಕ್ ಬಂದು "ಗೊತ್ತಾಯಿತು ನೀವೆಲ್ಲ ಸಂಧ್ಯಾಳ ಸ್ನೇಹಿತರು.. ಬಂದದ್ದು ಬಹಳ ಖುಷಿಯಾಯಿತು.. ಸುಧಾರಿಸಿಕೊಳ್ಳಿ ಇದೆಲ್ಲ ಸಂಭ್ರಮ ಮುಗಿದಮೇಲೆ ಭೇಟಿ ಮಾಡುವೆ ಎಂದರು.."
ನಮಗೆ ಅರೆ ಮದುವೆ ಇಷ್ಟು ಸರಳ ಸುಂದರ ಸಂಭ್ರವನ್ನಾಗಿ ಮಾಡಬಹುದು ಎಂದು ಅರಿವಾದ ಸಮಯ ನಿಜಕ್ಕೂ ಆನಂದಮಯ ಎನ್ನಿಸಿತು..
ಹೋಮ ಹವನಾದಿಗಳು ಜರುಗುತಿದ್ದವು... ಅಷ್ಟರಲ್ಲಿ ಸ್ವಲ್ಪ ಅಡ್ಡಾಡಿ ಬರೋಣ ಅಂತ ಹೊರಗೆ ಬಂದೆ..
ನಮ್ಮೆಲ್ಲರ ಸುಂದರ ಮನದ ಸರದಾರರು ಬಾಲು ಸರ್ ಕಾರಿನಿಂದ ಇಳಿಯುತ್ತಿದ್ದರು.. ಇನ್ನು ಬಿಡಿ ನಗೆ ಹಬ್ಬ ಖಾತ್ರಿ ಎನ್ನಿಸಿತು..
ಲಾಜ ಹೋಮ ನಡೆಯುತ್ತಿತ್ತು.. ಅತ್ತ ಕಡೆ ನೆರೆದಿದ್ದವರಿಗೆ,.. ಈ ಸಂಭ್ರದಲ್ಲಿ ಪಾಲ್ಗೊಂಡವರ ಉದರವನ್ನು ತಣಿಸಲು ರುಚಿ ರುಚಿ ಭಕ್ಷ್ಯಗಳು ತಯಾರಾಗುತ್ತಿದ್ದವು..
ಲಾಜ ಹೋಮಕ್ಕೆ ಸಿದ್ಧವಾದರು |
ಅಂಗಳದಲ್ಲಿ ಒಲವಿನ ರಂಗವಲ್ಲಿ ಸದಾ ಇರಲಿ ಎಂಬ ಪ್ರಾರ್ಥನೆ ಸಲ್ಲಿಕೆ |
ತಮ್ಮನಿಂದ ಲಾಜ ಹೋಮಕ್ಕೆ |
ದಂಪತಿಗಳಿಂದ ಒಲವಿಗಾಗಿ ಹೋಮಕ್ಕೆ ಲಾಜ |
ಲಾಜ ಹೋಮ ಕೊನೆ ಹಂತಕ್ಕೆ ಬರುತ್ತಿತ್ತು.. ಇತ್ತ ಕಡೆ ವಧುವನ್ನು ಬರಮಾಡಿಕೊಳ್ಳಲು ಮನೆಯಲ್ಲಿ ತಯಾರಿ ಸಿದ್ಧವಾಗಿತ್ತು..
ಮಂದ ಜ್ಯೋತಿಯ ಬೆಳಕಲ್ಲಿ ವಧುವನ್ನು ತಮ್ಮ ಮನೆಯ ಬೆಳಕಾಗುವ ಬೆಳಕನ್ನು ಬರಮಾಡಿಕೊಳ್ಳಲು ಹಾಡು ಹಸೆ ನಡೆಯುತ್ತಿದ್ದವು.,
ಬೀಗುತ್ತಿರುವ ಸಂಭ್ರಮದಲ್ಲಿ ಬೀಗರು |
ಸುಮಧುರ ಮನಗಳ ಒಡತಿಯರು |
ಹೊಟ್ಟೆಯಲ್ಲಿ ಪರಶಿವ ತಾಂಡವವಾಡುತ್ತಿದ್ದ... ಬಾಲೂ ಸರ್ ಎಂದು ಕಣ್ಣು ಹೊಡೆದೆ.. ನಡೆರಿ ಗುರುವೇ ಅಂದರು...
ಚಕಾ ಚಕ್ ಹೊರಗೆ ಬಂದೆವು... ಮೊದಲನೇ ಪಂಕ್ತಿ ಭರ್ತಿಯಾಗಿತ್ತು.. ನಾವು ನಮ್ಮ ದಂತ ಪಂಕ್ತಿಯನ್ನು ತೋರಿದೆವು.. ಚಿಕ್ಕ ಚಿಕ್ಕ ನಗೆ ಚಟಾಕಿ ಸಿಡಿಯುತ್ತಿದ್ದವು..
ಮಗಳಾದ ಭಾಗ್ಯ, ಸ್ನೇಹಿತೆಯಾದ ಶೀತಲ್, ಹೃದಯ ಭಾಗವಾದ ಸವಿತಾ, ತುಂಟ ತಂಗಿ ಅರ್ಚನ, ಮಾವನ ಮಗಳಾದರೂ ನನ್ನ ಮನೆ ಮಗಳಾದ ವಿದ್ಯಾ, ಗುರುಗಳಿಗೂ ಮಿಗಿಲಾದ ಬಾಲೂ ಸರ್ ಮತ್ತು ಅವರ ಶಿಷ್ಯ ನವೀನ ಎಲ್ಲರ ಜೊತೆಯಲ್ಲಿ ಕಳೆದ ಆ ಸಮಯ ನೆನಪಲ್ಲಿ ಉಳಿಯುವಂತದ್ದು..
ಪಾ ಸೂಪರ್ ಟೈಮ್ ಇದು!!! |
ನಾ ಹೀಂಗ ನೋಡುವುದು ನಿಮ್ಮಾ!!! |
ಊಟಕ್ಕೆ ಕೂತೆವು.. ನನಗೆ ಅಪರಿಚಿತ ಅನ್ನಿಸುವ ಕೆಲವು ಪದಾರ್ಥಗಳನ್ನು ಭಾಗ್ಯ ಮತ್ತು ಅರ್ಚನ ವಿವರಿಸುತ್ತಿದ್ದರು.. ಹೊಟ್ಟೆಯೊಳಗೆ ಸದ್ದಿಲ್ಲದೇ ಇಳಿದು ಉಶ್ ಎಂದು ನಿಟ್ಟುಸಿರು ಬಿಡುತ್ತಿದ್ದವು.. ಕೈ ತೊಳೆದು ಹೊರಗೆ ಬಂದಾಗ ನಮ್ಮ ಉದರ ಸಂತೃಪ್ತ ನಗೆ ಬೀರಿದರೆ.. ನಮ್ಮ ಮನ ಸಂತೃಪ್ತ ನಗೆ ಬೀರಲು ಈ ಕೆಳಗಿನ ಚಿತ್ರಕ್ಕೆ ಕಾಯುತ್ತಿತ್ತು..
ಒಂದು ಸುಂದರ ದಿನವನ್ನು ಇನ್ನಷ್ಟು ಸುಂದರಗೊಳಿಸಲು ಮಧುರ ಮಧುರವೀ ಮಂಜುಳಾ ಗಾನ ಎನ್ನಿಸುವಂತ ಮನಗಳು ಬೇಕಿತ್ತು... ಅವುಗಳೆಲ್ಲ ಒಂದಾಗಿ ಸಂಗಮವಾಗಿದ್ದ ದಿನ ಸಂಧ್ಯಾ ಪುಟ್ಟಿಯ ವಿವಾಹದ ಮೆಟ್ಟಿಲು ಹತ್ತಿದ ದಿನ..
ಸಂಧ್ಯಾ ಪುಟ್ಟಿ ವಿನಾಯಕ್ ಭಾವ.. ಗಮನ ಸೆಳೆಯುವ ಮನಗಳ ಸರದಾರರು ನೀವಿಬ್ಬರು.. ಇಡುವ ಹೆಜ್ಜೆಗಳೆಲ್ಲ ಹೂವಿನ
ಹೆಜ್ಜೆಯಾಗಲಿ.. ಹೆಜ್ಜೆಯಲೆಲ್ಲಾ ಸವಿಯಾದ ಫಲಗಳು ಮೂಡಲಿ.. ನಿಮ್ಮ ಬಾಳು ಸುಂದರ ಅಂಗಳದಲ್ಲಿ ನಲಿಯುವ ನಗುವ ರಂಗವಲ್ಲಿಯಾಗಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಬಳಗ ನಿಮ್ಮಗೆ ವೈವಾಹಿಕ ಜೀವನ ಅಂದುಕೊಂಡ ಕನಸ್ಸುಗಳನ್ನು ನನಸ್ಸು ಮಾಡಲಿ ಎಂದು ಉಲಿಯುತ್ತೆವೆ!!!!
ವಿವಾಹ ಜೀವನಕ್ಕೆ ಶುಭಾಶಯಗಳು... !!!
ಅಣ್ಣ ನನಗೆ.. ನಿಮ್ಮ ಸಿರ್ಸಿ ಪಯಣದ ಮುಂದುವರೆದ ಭಾಗ ಬೇಕು ಬೇಗ ಹೇಳಿ.. ನೋಡಿ ನಾ ಮದುವೆಯ ಸಂಭ್ರಮದಲ್ಲಿ ಮಿಂದು ಬೆಂಗಳೂರಿಗೆ ಬರುವಷ್ಟರಲ್ಲಿ ಈ ಸರಣಿ ಬರಬೇಕು ಆಯ್ತಾ... ನನ್ನ ಒತ್ತಾಯಕ್ಕೆ ಮಣಿದು ಸಿರ್ಸಿ ಪಯಣದ ಈ ಭಾಗವನ್ನು ಕೊಟ್ಟಿದ್ದೀರ.. ಇದಕ್ಕಾಗಿ ಸಮಸ್ತ ಬ್ಲಾಗ್ ಬಳಗಕ್ಕೆ ನನ್ನ ಧನ್ಯವಾದಗಳು.. !!!
ಇಂತಿ ನಿಮ್ಮ ವಿನಾಯ"ಕಂಗಳ"ದಲ್ಲಿ ಸಂಧ್ಯಾ
Sri, bahala bega update maadidri :) maduvege barokaaglilla anthaadru, photos nodi, nimma maatugaLalli swalpa samaadaanavaaythu.
ReplyDeleteVadhu vararige shubhaashayagaLu. Noorkaala chennaagi daampathya nadisli antha harastheeni. And Sandy, enaadru Vinayak hange hinge andre naanu alle irtheeni, just ondu phone call kodu kandha :) alle haazar :) ha ha .... just kidding kano :) enjoy enjoy....
ಒಂದು ಮದುವೆಯ ಸಮಾರಂಭವನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದೀರಿ.
ReplyDeleteಸಂಧ್ಯಾರ ವೈವಾಹಿಕ ಜೀವನ ನಂದನವನವಾಗಲಿ.
ನಿಮ್ಮ ಚಿತ್ರಗಳು ನೋಡಿ ನಾನೇ ಅಲ್ಲಿ ಹೋಗಿ ಬಂದಂತಾಯಿತು.
ಒಲವ ಬಣ್ಣ ಬೆರೆತ ಸಂಧ್ಯಾಳ ಬದುಕಲಿನ್ನು ಪ್ರತಿ ಕ್ಷಣವೂ ಖುಷಿಯ ಹೋಳಿಯ ಸಂಭ್ರಮವಿರಲಿ...
ReplyDeleteನಗುವೇ ಬದುಕಾಗಲಿ...
;;;;
ಚಂದದ ಬರಹ...
ಚಂದದ ಬರಹದ ಜೊತೆ ಮಸ್ತ್ ಎನಿಸುವ ಫೋಟೋಗಳು ಮತ್ತು ಅಡಿಬರಹ...
ReplyDeleteಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ... :)
Happy married life
shrudayada chendada manassugala parichaya maadisiddiri. Nimma valavige e barahave saakshi.
ReplyDelete