Thursday, January 31, 2013

ಮನಸಿನ ಜಗತ್ತನ್ನು ಗೆದ್ದ ಬಾಹುಬಲಿಯ ಬಸದಿಯಲ್ಲಿ - ಶ್ರವಣಬೆಳಗೊಳ

ಸುಮಾರು ೨೯ ವರ್ಷಗಳ ಹಿಂದೆ .....ರೆಬಲ್ ಸ್ಟಾರ್ ಅಂಬರೀಶ್ ಅವರ ಸಿನಿಮಾಗಳನ್ನು  ಬಹಳ ಇಷ್ಟ ಪಡುತಿದ್ದ ಕಾಲ...ಕಾರಣ ಅವರ ಸಿನೆಮಾಗಳಲ್ಲಿ ಬಾಕ್ಸಿಂಗ್ (ಆಗಿನ ನಮ್ಮ ಬಾಲ ಭಾಷೆ) ಬಹಳ ಇರ್ತಾ ಇದ್ದವು.... ಆ ಸಿನಿಮಾದಲ್ಲಿ ನನಗೆ ಗೊತ್ತಿದ್ದಂತೆ ಪ್ರಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡು ಸತ್ಯಂ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ "ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ"  ಹಾಡಿನಲ್ಲಿ ಬರುವ...

"ಚಾಮುಂಡಿ ರಕ್ಷಣೆ ನಮಗೆ
ಗೋಮಟೇಶ್ವರ ಕಾವಲು ಇಲ್ಲಿ..."

ಸಾಲು ಬಹಳ ಕಾಡಿತ್ತು...

ಗೊಮ್ಮಟ ಯಾಕೆ ಹಾಗೆ ....ಯಾಕೆ ಹೀಗೆ ನಿಂತ.... ಎನ್ನುವ ನೂರಾರು ತರ್ಕ ಬದ್ಧ ಪ್ರಶ್ನೆಗಳು ಕಾಡಿದ್ದವು...ಜೊತೆಗೆ ಗೋಮ್ಮಟನಷ್ಟೇ ಹೆಸರುವಾಸಿ ಆ ಬೃಹತ್ ಶಿಲ್ಪದ  ರೂವಾರಿ ಶ್ರೀ ಚಾವುಂಡರಾಯ..ಅದರಲ್ಲೂ ಶಾಲಾ ದಿನಗಳಲ್ಲಿ ಬಾಹುಬಲಿ ಹಾಗೂ ಭರತನ ನಡುವೆ ನಡೆಯುವ ಯುದ್ಧದ ವರ್ಣನೆ (ದೃಷ್ಠಿ ಯುದ್ದ,  ಜಲಯುದ್ದ  ಮಲ್ಲಯುದ್ಧ) ಇವೆಲ್ಲ ಕಣ್ಣಿಗೆ ಕಟ್ಟಿದಂತೆ ವರ್ಣನೆ ಮಾಡಿದ್ದ ನಮ್ಮ ಮಾಸ್ತರು..ಆ ಶಿಲ್ಪವನ್ನೊಮ್ಮೆ ನೋಡುವ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದರು...

ನನ್ನ ಸ್ನೇಹಿತೆ (ನನ್ನ ಮಗಳು) ಹಾಸನಕ್ಕೆ ಹೋಗುವಾಗೆಲ್ಲ ಹೇಳುತಿದ್ದಳು ಒಮ್ಮೆ ಹೋಗೋಣ ಅಪ್ಪ ಅಂತ...ಸರಿ ಆ ಅವಕಾಶ ಒದಗಿ ಬಂತು...ಕಾರಣಾರ್ಥ ಹಾಸನಕ್ಕೆ ಹೋಗುವ ಅವಕಾಶ ಬಂದಾಗ ಸರಿ ಕರೆದೊಯ್ಯೋಣ ಎಂದು ಹೊರಟೆ...

ಇಂದ್ರ ಗಿರಿಯ ಮುಖ್ಯ ದ್ವಾರ 
ಬೆಟ್ಟದ ಬುಡದಲ್ಲಿ ನಿಂತಾಗ ಸುಮಾರು ಸಂಜೆ ನಾಲ್ಕು ಘಂಟೆಯಾಗಿತ್ತು...ಸೂರ್ಯ ತಂಪಾಗಲು ಹೊರಟಿದ್ದ...

"ಸರ್ ಕಾಲು ಸುಡುತ್ತೆ ಸರ್ ಸಾಕ್ಸ್ ತಗೊಳ್ಳಿ.."

"ಚಪ್ಪಲಿ ಹಾಕಿಕೊಂಡು ಬೆಟ್ಟ ಹತ್ತುವ ಹಾಗಿಲ್ಲ"

"ಮ್ಯಾಪ್ ತಗೊಳ್ಳಿ ಸರ್, ಬೇಳೂರು, ಹಳೇಬೀಡು, ಶ್ರವಣ ಬೆಳಗೊಳದ ಬಗ್ಗೆ ಪುಸ್ತಕ ಇದೆ ಸರ್" ಹೀಗೆಲ್ಲ ಪ್ರಾಣ ತಿಂತಾ ಇದ್ದರು ...
"ಅಪ್ಪ ಸಾಕ್ಸ್ ಬೇಡ..ಪುಸ್ತಕ ತಗೊಳ್ಳಿ ಓದೋಕೆ ಆಗುತ್ತೆ.."ಅಂದಳು ಮಗಳು...

ಶುರುವಾಯಿತು ಮೆಟ್ಟಿಲಿನ ಲೆಕ್ಕಾಚಾರ!
"ಸರಿ" ಎಂದೆ ...ಪುಸ್ತಕವನ್ನು  ಚೀಲಕ್ಕೆ ಹಾಕಿಕೊಂಡು...ನಿಧಾನವಾಗಿ ಸುಮಾರು ೬೫೦ ಮೆಟ್ಟಿಲು ಅಂತ ಅಂದಾಜು ಇರುವ ಇಂದ್ರ ಗಿರಿ ಬೆಟ್ಟವನ್ನು ಹತ್ತಲು ಶುರು ಮಾಡಿದೆವು..ಮಗಳು ಉತ್ಸಾಹದ ಚಿಲುಮೆಯಾಗಿದ್ದಳು..ಮನದನ್ನೆ ಮನವನ್ನೇ ಬಾಣಲೆ ಮಾಡಿಕೊಂಡು ಮನದಲ್ಲೇ ನನ್ನನ್ನು ಹುರಿಯುತಿದ್ದಳು...ನಾನು ಹಾಗೂ ಮಗಳು ಇಬ್ಬರೂ ನಗುತ್ತ...ಹಾಗೆ ಕ್ಯಾಮೆರಾಗೆ ಕೆಲಸ ಕೊಡುತ್ತ ಹತ್ತುತ್ತಾ ಸಾಗಿದೆವು...
ಹುರುಪಿನಲ್ಲಿ!
ಮಗಳಿಗೆ ಗೊಮ್ಮಟನ ಕಥೆ ಹೇಳುತ್ತಾ, ನಗಿಸುತ್ತಾ ಸಾಗಿದೆ...ಮನದನ್ನೆಯು ದುಮುಗುಡುತ್ತಲೇ ಇದ್ದಳು...ಕಡೆಗೆ ವಿಧಿಯಿಲ್ಲದೆ ನಮ್ಮ ಹಾದಿಗೆ ಬಂದಳು...ಕಾರಣ ಸಂಪುಟ ಸಭೆಯಲ್ಲಿ ಮೆಜಾರಿಟಿ ನಮ್ಮ ಕಡೆ ಇತ್ತು....:-)

ಉಸ್ಸಪ್ಪಾ ...ಹೆಂಗಪ್ಪ ಹತ್ತೋದು... ಮನದನ್ನೆ!
ಸುಮಾರು ಒಂದು ಸಾವಿರ ವರ್ಷಗಳ ಆಸು ಪಾಸಿನ, ಬಂಡೆಯ ಮೇಲೆ ಕೆತ್ತಿರುವ, ಲಿಪಿಗಳನ್ನು ಸಂರಕ್ಷಿಸಿರುವ ರೀತಿಯನ್ನು ವಿವರಿಸುತ್ತ, ಅದನ್ನೆಲ್ಲ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಗಿದೆ..

ಸಂರಕ್ಷಿಸುವ ರೀತಿ ಇಷ್ಟವಾಯಿತು
ಪಕ್ಕದಲ್ಲೇ ಒದೆಕಲ್ಲ ಬಸದಿ ಕಾಣಿಸಿತು.. ಕಲ್ಲುಗಂಭಗಳನ್ನು ಸುತ್ತಲು ಆಧಾರವಾಗಿ ನಿಲ್ಲಿಸಿದ್ದರಿಂದ ಇದಕ್ಕೆ ಒದೆಗಲ್ಲ ಬಸದಿ ಎಂದು ಕರೆಯುತ್ತಾರೆ ಎಂದು ಅಲ್ಲಿನ ಒಂದು ಶಾಸನ ಹೇಳಿತು. ಇದು ಸುಮಾರು ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಿದೆ ಎನ್ನುವ ಮಾಹಿತಿ ಸಿಕ್ಕಿತು. ಒಳಗೆ ಸುಂದರ ಮೂರ್ತಿಗಳು ಇದ್ದವು..ಅದನ್ನೆಲ್ಲ ನೋಡಿ ಮತ್ತೆ  ಮೇಲಕ್ಕೆ ಹತ್ತಲು ಶುರು ಮಾಡಿದೆವು.
ಒದೆಗಲ್ಲ ಬಸದಿ
ಮುಂದೆ ತ್ಯಾಗದ ಕಂಬದ ದರ್ಶನವಾಯಿತು. ಇದು ಎರಡು ಅಂತಸ್ತಿನ ಮಂಟಪದ ಮಧ್ಯ ಭಾಗದಲ್ಲಿ ಕುಸುರಿ ಕೆಲಸ ನಾಜೂಕಾಗಿ ಮಾಡಿರುವ ಸುಮಾರು ಹತ್ತು ಅಡಿ ಕಂಭ ಮನಸೆಳೆಯಿತು. ಸುಮಾರು ಹತ್ತನೆಯ ಶತಮಾನದಲ್ಲಿ ಕೆತ್ತಿಸಿರಬಹುದು ಎಂದು ತಿಳಿಯಿತು. ಸೊಗಸಾದ ಕೆತ್ತನೆ ಎಷ್ಟು ಬಾರಿ ನೋಡಿದರು ಮನತಣಿಯದು.

ತ್ಯಾಗದ ಕಂಬ 
ಇಲ್ಲಿಂದ ಕಾಣುವ ಎದುರಿನಲ್ಲಿರುವ ಚಂದ್ರ ಗಿರಿ, ಕೊಳ, ಸುತ್ತ ಮುತ್ತಲ ದೃಶ್ಯಗಳು ನಯನ ಮನೋಹರ.

ಚಂದ್ರ ಗಿರಿ, ಕೊಳದ ಮನಮೋಹಕ ದೃಶ್ಯ 

ನಿಧಾನವಾಗಿ ಏರುತ್ತಿದ್ದ ಹಾಗೆ ಸುಂದರ ಜಾಲಂಧ್ರಗಳನ್ನು ಹೊಂದಿದ (ಅಖಂಡ ಬಾಗಿಲು) ಹೆಬ್ಬಾಗಿಲು, ಅಕ್ಕ ಪಕ್ಕದಲ್ಲಿ ಗೋಮಟೇಶ್ವರ,  ಭರತೇಶ್ವರರ ವಿಗ್ರಹ, ಕೆಲವು ಸಣ್ಣ ಸಣ್ಣ ಶೀಲ ಶಾಸನಗಳು ಕಣ್ಣಿಗೆ ಬಿದ್ದವು. ಬಂಡೆಯ ಮೇಲೆ ಕೆತ್ತಿರುವ ತೀರ್ಥಂಕರರ ದೃಶ್ಯ ನನ್ನ ಮಗಳ ಮನಸೆಳೆಯಿತು.

ಹಾಗೆಯೇ ಕಡೆಯ ತಿರುವನ್ನು ಹತ್ತಿ ಮೇಲೆ ಬರುವಾಗ ಬಾಗಿಲ ಅಕ್ಕ ಪಕ್ಕದಲ್ಲಿ ರಚಿಸಿರುವ ಕುದುರೆ, ಆನೆ ಚಿತ್ರಗಳು, ಬಸದಿಯ ಹೊರ ಗೋಡೆಗಳು ಸುಂದರವೆನಿಸುವ ಅನುಭವ ನೀಡಿತು.


ಅಲ್ಲಿಯೇ ಕಂಡು ಬರುವ ಗುಳ್ಳೆ ಕಾಯಿ ಅಜ್ಜಿಯ ಮಂಟಪ, ವಿಗ್ರಹ, ಮಧ್ಯದ ಕಂಭವನ್ನು ಬಂಡೆಯಲ್ಲೇ ಕೊರೆದು ನಿರ್ಮಿಸಿರುವ ಮಂಟಪ ಇಷ್ಟವಾಗುತ್ತದೆ. ಸುಮಾರು ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿತವಾಯಿತು ಎನ್ನುವ ಸಂದೇಶ ಅಲ್ಲಿನ ಲಿಖಿತ ಮಾಹಿತಿಯಿಂದ ತಿಳಿದು ಬಂತು. ದಂತ ಕಥೆಯ ಪ್ರಖಾರ ಚಾವುಂಡರಾಯ ಗೊಮ್ಮಟನ ಶಿಲ್ಪವನ್ನು ಕೆತ್ತಿಸಿದ ಮೇಲೆ ಗರ್ವಿತನಾದಾಗ..ಗರ್ವವನ್ನು ಇಳಿಸಲು ಪದ್ಮಾವತಿ ಯಕ್ಷಿಯು ಗುಳ್ಳೆಕಾಯಿ ಅಜ್ಜಿ ರೂಪದಲ್ಲಿ ಬಂದು ಗರ್ವವನ್ನು ಇಳಿಸಿದಳು.

ಗೋಮಟೇಶ ಕಾವಲು ಇಲ್ಲಿ!
ಅಲ್ಲಿಯೇ ನಿಂತು ತಲೆ ಎತ್ತಿ ನೋಡಿದಾಗ ಇಡಿ ಗಿರಿಯನ್ನು ತನ್ನ ಕಣ್ಣಲ್ಲೇ ಕಾಯುವಂತೆ ನಿಂತಿರುವ ಭಂಗಿಯಂತೆ ಭಾಸವಾಯಿತು. "ಗೋಮಟೇಶ ಕಾವಲು ಇಲ್ಲಿ" ಎನ್ನುವ ಸಾಲು ನೆನಪಿಗೆ ಬಂದಿತು.  ಹಾಗೆ ನೋಡುತ್ತಾ ಒಳಗೆ ಕಾಲಿಟ್ಟೆ...ನನ್ನ ಮಗಳಿಗೆ ಏನೋ ಸಾಧಿಸಿದ ಖುಷಿ. ಬಾಹುಬಲಿಯನ್ನು ಹತ್ತಿರದಿಂದ ನೋಡಿ, ನಮಸ್ಕರಿಸಿ, ಧ್ಯಾನ ಮಾಡಿ, ಅಲ್ಲೇ ಇದ್ದ ಆರ್ಚಕರಿಂದ ತೀರ್ಥವನ್ನು ಪಡೆದ ಮೇಲೆ ತೋರಿದ ಮಂದಹಾಸ ಇನ್ನು ಮನಸಲ್ಲಿ ಅಚ್ಚೊತ್ತಿ ನಿಂತಿದೆ.

ಮನಸಿನ ಜಗತ್ತನ್ನು ಗೆದ್ದು ನಿಂತ!
ಸುಮಾರು ೫೭ ಅಡಿ ಎತ್ತರದ ಸುಮಾರು ೯೮೩ನೆ  ಇಸವಿಯಲ್ಲಿ,  ವಿಶ್ವದಲ್ಲೇ ಒಂದೇ ಬಂಡೆಯಿಂದ ಕೊರೆದ,  ಬೃಹತ್ ಶಿಲ್ಪ ಇದಾಗಿದೆ. ಶಾಂತ ಮುಖ ಭಾವ, ಅರೆ ತೆರೆದ ಕಣ್ಣುಗಳು, ನೀಳವಾದ ಕೈ ಬೆರಳುಗಳು, ನಿಜವೇನೋ ಅನ್ನಿಸುವಂತೆ ಕೆತ್ತಿರುವ ಕಾಲಿನ ಬೆರಳುಗಳು, ಗುಂಗುರು ಕೂದಲು, ನೀಳ ನಾಸಿಕ, ಹುತ್ತದ ಮಧ್ಯೆ ನಿಂತ ಭಂಗಿ, ಹಬ್ಬಿರುವ ಬಳ್ಳಿಯ ಚಿತ್ರಗಳು ತುಂಬಾ ಸಹಜವಾಗಿ ಮೂಡಿ ಬಂದಿದೆ.


ಈ ಚೆಲುವಾಂತ ಚೆನ್ನಿಗನನ್ನು ಚಂದನ, ಕುಂಕುಮ, ಅರಿಶಿನ ಮುಂತಾದ ಮಂಗಳ ದ್ರವ್ಯಗಳಲ್ಲಿ ಮಜ್ಜನ ಮಾಡಿಸುವ ಹನ್ನೆರಡು ವರ್ಷಗಳಿಗೊಮ್ಮೆ ನೆರವೇರುವ ಮಹಾ ಮಸ್ತಕಾಭಿಷೇಕ ಬಲು ಸೊಗಸಾಗಿರುತ್ತೆ. ೨೦೧೮ರಲ್ಲಿ ನಡೆಯುವ ಮಹಾ ಮಜ್ಜನಕ್ಕೆ ಮಗಳನ್ನು ಕರೆದುಕೊಂಡು ಬರುವೆ ಎಂಬ ಸಂಕಲ್ಪದಿಂದ ಹಕ್ಕಿಯ ಮನಸಿನ ಹಾಗೆ ನಿಧಾನವಾಗಿ ಕೆಳಗಿಳಿಯಲು ಶುರು ಮಾಡಿದೆವು. ದೇವಸ್ಥಾನದ ಆವರಣದ ಗೋಡೆಯ ಮೇಲೆ ಉಬ್ಬು ಶಿಲ್ಪದ ಮಾದರಿ ಕೆತ್ತನೆಗಳು ಸುಂದರವಾಗಿದ್ದವು.

ಸುಂದರ ಉಬ್ಬು ಶಿಲ್ಪ!

ನನ್ನ ಕುಟುಂಬ ಮೊದಲ ಚಾರಣದ ಅನುಭವದಲ್ಲಿ!

ಸೂರ್ಯ ತನ್ನದಿನದ ಕಾರ್ಯ ಮುಗಿಸುವ ತರಾತುರಿಯಲ್ಲಿದ್ದ. ಸೂರ್ಯಸ್ಥದ ದೃಶ್ಯವನ್ನು ಸೆರೆ ಹಿಡಿಯಲು ಇನ್ನಷ್ಟು ಹೊತ್ತು ಅಲ್ಲಿರ ಬೇಕಿತ್ತು..ಆದರೆ ಸಮಯದ ಅಭಾವವಿದ್ದ ಕಾರಣ...ಮತ್ತು ಹೊಟ್ಟೆ ಚುರುಗುಟ್ಟುತಿದ್ದುದರಿಂದ ನಿಧಾನವಾಗಿ ಕೆಳಗಿಳಿದು "ಹೋಟೆಲ್ ರಘು" ಗೆ  ಕಾಲಿಟ್ಟೆವು.

ತನ್ನ ಮನೆಗೆ ಹೊರತು ನಿಂತ ದಿನಕರ!
ಮಾಮೂಲಿ ಮಗಳಿಗೆ ಇಡ್ಲಿ, ಮನದನ್ನೆಗೆ ಮಸಾಲಾ ದೋಸೆ, ನನಗೆ ನನ್ನ "ಸೆಟ್ ದೋಸೆ " ಬಂತು. ಚಟ್ನಿ ಬಾಯಿಗಿಟ್ಟೆ..ಆಹಾ..ಈಗಲೂ ಬಾಯಲ್ಲಿ ನೀರು ಬರಿಸುತ್ತೆ...ವಡೆ ಸ್ವಲ್ಪ ತಡವಾಗುತ್ತೆ ಅಂದ್ರು...ಸರಿ ಕಾಯುವ ಅಂದು ಕೂತೆವು.ವಡೆ ಸೀದಾ ಬಾಣಲೆಯಿಂದ ತಟ್ಟೆಗೆ ತಂದು ಹಾಕಿದರು...ಬಿಸಿ ಬಿಸಿ ವಡೆ, ಮಸಾಲೆ ಭರಿತ ಖಾರ ಖಾರ ಚಟ್ನಿ...ಆಹಾ ಆ ಛಳಿಗೆ ಇನ್ನೇನು ಬೇಕು...ಚಟ್ನಿಯ ಮೇಲಿನ ಪ್ರೀತಿಯಿಂದ ಇನ್ನೊಮ್ಮೆ ಮೂರು ಮಂದಿ ವಡೆ-ಚಟ್ನಿ ಬಾರಿಸಿದೆವು ಹೊರಬರುವಾಗ  ನಾಲಿಗೆ ಖುಶಿಯಿಂದ ಆ ಹೋಟೆಲಿನ ಮಾಲಿಕರಿಗೆ "ಸರ್ ಚಟ್ನಿ ಸೂಪರ್.." ಎಂದಿತು..ಮಾಲೀಕರು..ಸಣ್ಣಗೆ ನಗೆ ಬೀರಿದರು..ನಾವು ವಡೆಯಂತೆ ಗರಿ ಗರಿ  ಮನಸಿನಿಂದ ಅಲ್ಲಿಂದ ಹೊರಟೆವು!

Saturday, January 26, 2013

Alemaarigalu Team - Silver Jubilee!

"Sri, you should go sri, what an amazing place, and you love nature very much, start early morning, and by late evening you can come back...you should see that place Sri, you will feel even more energetic"

Post lunch session, to kill the drowziness Kusuma just injected this idea of visiting Gopalaswamy Betta on a weekend.

A casual talk between Sandeep and myself in a cab late in the evening triggered the idea of pushing out of extra calories by being part with the nature for a day, and their an idea of forming a team spilled the bean.

What followed was a dream marathon where in the small team grew big, now brimming with 30 plus members zipping on the beautiful locations with out stamping & littering the mother nature!

We follow very basic rules!
1. No littering, No alcohol, No Cigarettes!
2. Comfort zone is the last word in our team
3. We don't abuse or tease any one (male or female) neither in the group nor the outsiders
4. We only shoot with the camera, and share the pictures among the members without any conditions
5. We chose the best economical mode, so lighter wallet...heavy satisfaction is the motto of the group!
6. We go with the team, come back with team.  No race against each other nor heroism!!!
7. We respect woman as much we respect our parents!


Here you go, and enjoy the beautiful team in many wonderful locations on the earth! This blog is dedicated to Kusuma and the team of Alemaarigalu!

Trip # 1 : 
Team : Srikanth, Sandeep, Ravi, Chethan, Vinay, Tribhuvan
Location: Himavad Gopalaswamy Betta, Nanjanagoodu, Chaamundi Betta, Nimishaamba Temple




Trip # 2 : 

Team : Srikanth, Sandeep, Ravi, Chethan, Vinay, Tribhuvan
Location: Melukote, Shravanabelagola





Trip # 3 : 

Team : Srikanth, Sandeep, Ravi, Chethan, Vinay, Gulshan
Location: Trimurthy Temple, Sangama, Makedaatu






Trip # 4 : 

Team : Srikanth, Sandeep, Ravi, Vinay, Sunil, Raaghu
Location: Golden Temple Bayalukuppe, Nisarga Dhaama, Dubaare, Madikeri, Maandala Patti, Talakaaveri, Bhaagamandala 




Trip # 5: 

Team : Srikanth, Sandeep, Latesh, Yashdeep, Selva, Sunil, Raaghu
Location: Shivana Samudra (Gagana Chukki, Bhara Chukki, Somanaathapura Temple





Trip # 6: 

Team : Srikanth, Sandeep, Latesh, Yashdeep, Sunil, Satish
Location: Gopalaswamy Betta, Balamuri Falls





Trip # 7: 

Team : Srikanth, Sandeep
Location: Kukke Subramanya, Kumara Parvatha



Trip # 8: 


Team : Srikanth, Sandeep, Latesh, Yashdeep, Arun, Kishor
Location: Savana Durga, Manchina Bele, Big Banyan Tree





Trip # 9: 


Team : Srikanth, Sandeep, Latesh, Yashdeep, Swamiji
Location: Kukke Subramanya, Kumara Parvata




Trip # 10: 


Team : Srikanth, Sandeep, Rohit, Ravikanth
Location: Muttatti Temple, Bheemeshwari



Trip # 11: 


Team : Srikanth, Sandeep, Prashanth, Suresh, Shashidhar
Location: Nandi Hills



Trip # 12: 


Team : Srikanth, Sandeep, Prashanth, Latesh, Yashdeep, Sunil, Arvind
Location: Kemmannu Gundi, Z point, Hebbe Falls, Mullayanagiri, Belavaadi Temple, Udbhava Ganapati Temple




Trip # 13: 
Team : Srikanth, Sandeep
Location: Mysore Palace, Sunil's Marriage




Trip # 14: 


Team : Srikanth, Sandeep, Prashanth, Soma, Kishor
Location: Kukke Subramanya, Kumara Parvata





Trip # 15: 


Team : Srikanth, Sandeep, Girish, Arun
Location: Bangalore University Campus



Trip # 16: 


Team : Srikanth, Sandeep, Arun
Location: Kukke Subramanya, Kumara Parvata




Trip # 17: 


Team : Srikanth, Sandeep, Prashanth, Latesh, Yashdeep, Soma, Kishor
Location: Kambala event in Joppina Mogaru, Kadri Temple, Tanneer Bhaavi Beach, Udupi Temple, St. Mary's Island




Trip # 18: 


Team : Srikanth, Sandeep, Girish, Preeti
Location: Rama Devara Betta in Ramanagara



Trip # 19: 


Team : Srikanth, Sandeep, Prashanth, Latesh, Soma, Naveen, Kishor, Ashish, Anil
Location: Dudhsaagar falls



Trip # 20: 


Team : Srikanth, Sandeep, Latesh, Yashdeep, Raghu, Anil, Sunil
Location: Pustakada Mane, Kunti Betta, Venugopalaswamy Temple in KRS backwaters


Trip # 21: 


Team : Srikanth, Sandeep, Prashanth
Location: Rama Devara Betta in Ramanagara




Trip # 22: 


Team : Srikanth, Sandeep, Prashanth
Location: Sri Revana Siddeshwara Betta, Aprameya Temple (Ambegaalu Krishna temple), Heritage Wine yard



Trip # 23: 
Team : Srikanth, Sandeep, Prashanth, Latesh, Raghu, Sunil
Location: Sri Maarikaamba Temple, Banavasi, Sahasra Linga, Saatoddi Falls, Mahaganapati temple, Yaana, Vibhooti Falls, Gokarna Mahabaleshwawra Temple, Kudle Beach



Trip # 24: 


Team : Srikanth, Sandeep, Prashanth, Raghu, Kishor, Nagesh
Location: Waynad, Edkal Caves, Kaarapuzha Dam, Chembra Peak


Trip # 25: 
Team : Srikanth, Sandeep, Prashanth, Ravikanth, Girish Somashekhar, Darshan
Location: Kukke Subramanya, Kumara Parvatha



Thanks to all the members of Alemaarigalu group with whom I could able visit so many vibrant places in our country..Lets keep the lamp of alemaarigalu glowing all the way!

Wednesday, January 16, 2013

ಕುಮಾರ ಪರ್ವತ ಚಾರಣ - ೨೦೧೩ರ ಜನವರಿ ೫-೬!

"ಸಿಂಧೂರ ಲಕ್ಷ್ಮಣನೆಂದರೆ ಸಾಕು ಶೌರ್ಯವು ಮೈಯಲ್ಲಿ ತುಂಬುವುದು" ಸಿಂಧೂರ ಲಕ್ಷಣ ಚಿತ್ರದ ಮೈನವಿರೇಳಿಸುವ ಗೀತೆಯ ಹಾಗೆ ಕುಮಾರ ಪರ್ವತ ಎಂದರೆ ಸಾಕು ಅರ್ಧ ರಾತ್ರಿಯಲ್ಲೂ ಕೂಡ ಏನೋ ಒಂದು ಹೊಸತನ ಮೈ ಮನಸನ್ನು ಆವರಿಸಿಕೊಳ್ಳುತ್ತದೆ.

ವರ್ಷ ೨೦೧೨ ಆರಂಭದಲ್ಲಿ ಇಲ್ಲಿಂದಲೇ ಶುರುಮಾಡಿದ ಅಲೆಮಾರಿಗಳ ಪ್ರವಾಸ, ವರ್ಷಾಂತ್ಯದಲ್ಲಿ ಇಲ್ಲಿಯೇ ಮುಗಿಸುವ ಆಸೆ ಕೈಗೂಡಲಿಲ್ಲ. ಆದರೇನು ಕುಮಾರ ಪರ್ವತ ಚಾರಣ ಎಂದರೆ ನಮ್ಮ ಅಲೆಮಾರಿಗಳ ತಂಡ ಕೊಡುವ ಉತ್ತರ ಒಂದೇ "ಹೋಗೋಣ"

ಈ ಬಾರಿ ಸಂದೀಪ್, ಪ್ರಶಾಂತ್  ಗಿರೀಶ್, ರವಿಕಾಂತ್, ದರ್ಶನ್ ನನ್ನನ್ನು ಜೊತೆಗೂಡಿದರು. ಆರು ಮಂದಿ ಶುಕ್ರವಾರ ರಾತ್ರಿ ೮.೫೦ಕ್ಕೆ ಬಸ್ಸಿನಲ್ಲಿ ಕೂತಾಗ ಒಂದು ರೀತಿಯ ಸಂತಸಭರಿತ ಕುತೂಹಲ. ಪ್ರತಿಬಾರಿಯೂ ಹೊಸ ಅನುಭವ ಕೊಡುತಿದ್ದ ಪರ್ವತ ಈ ಬಾರಿ ತನ್ನೊಡಲಲ್ಲಿ ಏನು ಹುದುಗಿಸಿಕೊಂಡಿದೆಯೋ ಎನ್ನುವ ತವಕ.

ಶನಿವಾರ ಬೆಳಿಗ್ಗೆ  ಐದಕ್ಕೆ ಕುಕ್ಕೆ ಸುಬ್ರಮಣ್ಯದ ನಿಲ್ದಾಣದಲ್ಲಿ ಬಸ್ ನಿಂತಾಗಷ್ಟೇ ಎಚ್ಚರ.  ಬ್ಯಾಗ್ಗಳನೆಲ್ಲ ಒಟ್ಟು ಗೂಡಿಸಿಕೊಂಡು ಬೆಳಗಿನ ಉಪಹಾರಕ್ಕೆ ಬಂದೆವು. ಆಗಲೇ ಅನೇಕ ತಂಡಗಳು ಚಾರಣಕ್ಕೆ ಹೊರಡಲು ಸಿದ್ಧವಾಗಿದ್ದವು.  ಲಘು ಉಪಹಾರ ಮುಗಿಸಿ ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಅಲೆಮಾರಿಗಳು ತಂಡದ ರಜತ ಸಂಭ್ರಮದ ಚಾರಣಕ್ಕೆ (ಹೌದು ಅಲೆಮಾರಿಗಳ ತಂಡದ ಇಪ್ಪತೈದನೆಯ ಯಾನ ಇದು) ಚಾಲನೆ ನೀಡಿದೆವು.

ಮೊದಲ ಹಂತದ ಚಾರಣ - ಭೀಮನ ಕಲ್ಲು

ಮಾತು ಕಮ್ಮಿ ಹೆಜ್ಜೆ ಹೆಚ್ಚು ಎನ್ನುತ್ತಾ ಸದ್ದಿಲ್ಲದೇ ಮೊದಲ ಐದು ಕಿ.ಮಿ. ಗಳನ್ನೂ ಸಾಗುವ ಉತ್ಸಾಹ ತೋರಿದೆವು. ಕಾಡಿನ  ಏರು ಹಾದಿ ತ್ರಾಸದಾಯಕವಾಗಿತ್ತು. ಆದ್ರೆ ಉತ್ಸಾಹ ಇಮ್ಮಡಿಸುತಿತ್ತು.  ಸುಸ್ತಾದಗಲೆಲ್ಲ ಕೊಂಚ ವಿಶ್ರಾಂತಿ, ಕೊಂಚ ತಿನಿಸು, ಹರಟೆ ತಮಾಷೆ ಮಾತುಗಳು, ಹೊಸ ಹುಡುಗು ದರ್ಶನ್ ಹುಮ್ಮಸ್ಸಿನಲ್ಲಿ ಚಿತ್ರಗಳನ್ನು ತೆಗೆಯುತ್ತ ಇನ್ನಷ್ಟು ಹುರುಪನ್ನು ತುಂಬುತ್ತಿದ್ದರು. ಸುಮಾರು ೨.೫ ಕಿ.ಮಿ.ಗಳು ನಡೆದು ಭೀಮನ ಕಲ್ಲು ತಲುಪಿದಾಗ ಅಲ್ಲಿದ್ದ ತಂಡದ ಜೊತೆ ಮಾತಾಡಿ, ಅವರು ಹೋದ ಮೇಲೆ ಆ ಬೃಹತ್ ಬಂಡೆಯ ಮೇಲೆ ನಮ್ಮ ತ್ರಾಣಗೊಂಡಿದ್ದ ದೇಹವನ್ನು ಹಾಗೆ ಗಾಳಿಗೆ ಮೈಯೊಡ್ಡಿ ವಿರಮಿಸಿದೆವು.

ಎರಡನೇ ಹಂತ - ಪುಷ್ಪಗಿರಿಯ ಹುಲ್ಲುಗಾವಲು
ಅಂದು ಕೊಂಡಂತೆ ಸರಿ ಸುಮಾರು ಬೆಳಗಿನ ೯.೩೦ರ ಸಮಯಕ್ಕೆ ಪುಷ್ಪಗಿರಿ ಹುಲ್ಲುಗಾವಲಿನ ತಾಣಕ್ಕೆ ಬಂದೆವು. ಕೊಂಚ ದೀರ್ಘ ವಿಶ್ರಾಂತಿ ಬೇಕು ಎಂದು ಬಯಸಿದ್ದರಿಂದ ಅಲ್ಲಿಯೇ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಕ್ಯಾರೆಟ್, ಸೌತೆಕಾಯಿ, ಬಿಸ್ಕೆಟ್, ಬ್ರೆಡ್ ಖಾಲಿ ಮಾಡಿದೆವು. ಕಳೆದ ಬಾರಿ ಇದೆ ಜಾಗದಲ್ಲಿ ಕುಳಿತು ಹರಟಿದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತ ಮತ್ತೆ ಮುಂದೆ ಹೊರಟೆವು.
ದೂರದ ಬೆಟ್ಟ ನುಣ್ಣಗೆ! ಮೊದಲ ಝಲಕ್ !!!

ಮೂರನೇ ಹಂತ - ಅರಣ್ಯ ಇಲಾಖೆ ಕಚೇರಿ 
ಎಲ್ಲರೂ ಒಂದೇ ನಿರ್ಧಾರಕ್ಕೆ ಬಂದೆವು..ಭಟ್ಟರ ಮನೆಯಲ್ಲಿ ನಾಳೆ ಊಟ ಮಾಡುವ ಎಂದು. ಸರಿ ನಿಧಾನವಾಗಿ ಸುಸ್ತಾದ ಕಾಲುಗಳನ್ನು ಎಳೆದುಕೊಂಡು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಅರಣ್ಯ ಇಲಾಖೆಯ ಕಚೇರಿಯ ಕಡೆ ನಡೆದೆವು. ಚಾರಣ ಮಾಡಬೇಕಿದ್ದ ಪರ್ವತ ತುತ್ತ ತುದಿ ಕಾಣುವ ಇಲ್ಲಿನ ನೋಟ ಮನೋಹರ. ದರ್ಶನ್, ಗಿರೀಶ್, ರವಿ ಕಾಂತ್ ಉತ್ಸುಕರಾಗಿದ್ದರು.  ಕಚ ಕಚ ಅಂತ ಕೆಲ ಚಿತ್ರಗಳನ್ನು ಕ್ಯಾಮೆರ ಪೆಟ್ಟಿಗೆಯೊಳಗೆ ಸೆರೆ ಹಿಡಿದಾಗಿತ್ತು.  "ಅಗೋ ನೋಡಿ ಭಟ್ಟರ ಮನೆ" ಎಂದ ತಕ್ಷಣ ಇನ್ನೊಮ್ಮೆ ಕ್ಯಾಮೆರ ಸದ್ದು ಮಾಡಿತು. ಕಚೇರಿ ಹತ್ತಿರ ನಿಧಾನವಾಗಿ ಬರುತಿದ್ದಾಗ ಅರಣ್ಯಾಧಿಕಾರಿ ಕುಕ್ಕೆಗೆ ಹೊರಟಿದ್ದರು. ನಮ್ಮನ್ನು ನೋಡಿದ ತಕ್ಷಣ
"ಓಹ್ ನಮಸ್ಕಾರ ಚೆನ್ನಾಗಿದ್ದೀರಾ, ಏನೋ ಈ ಸಲ ಬಹಳ ಹೊತ್ತು ಮಾಡಿಬಿಟ್ರಲ್ಲ. ಡಿಸೆಂಬರ್ ತಿಂಗಳಲ್ಲಿ ಬರುತ್ತೀರಾ ಎಂದು ಕೊಂಡಿದ್ದೆ"
"ನಮಸ್ಕಾರ ಸರ್..ನಾವು ಚೆನ್ನಾಗಿದ್ದೇವೆ..ಹೌದು ಬರಬೇಕಿತ್ತು...ಹುಡುಗರಿಗೆ ರಜ ಇರಲಿಲ್ಲ ಹಾಗಾಗಿ ತಡವಾಯಿತು"
"ಒಳ್ಳೇದು ಒಳ್ಳೆ ಸಮಯಕ್ಕೆ ಬಂದಿದ್ದೀರಿ...ಬನ್ನಿ ತಿಂಡಿ ತಿನ್ನೋದಾದ್ರೆ ನೋಡಿ ಅಲ್ಲಿ ಸೊಂಪಾಗಿ ನೆರಳಿದೆ..ಅಲ್ಲೇ ಕುಳಿತು ವಿಶ್ರಾಂತಿ ತೆಗೆದುಕೊಂಡು ನಿಧಾನವಾಗಿ ಹೋಗಿ..ನನಗೆ ಸ್ವಲ್ಪ ಕೆಲಸ ಇದೆ ಕುಕ್ಕೆ ಹೋಗ್ತಾ ಇದ್ದೀನಿ...ನಮ್ಮ ಹುಡುಗ ಇದ್ದಾನೆ ನಿಮಗೆ ಏನಾದರು ಅನುಕೂಲ ಬೇಕು ಅಂದ್ರೆ ಮಾಡಿಕೊಡ್ತಾನೆ:
ಇಷ್ಟು ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿ ಈ ಕಾಡಿನಲ್ಲಿ ಸಿಕ್ಕಾಗ ಸುಸ್ತಾದ ದೇಹಕ್ಕೆ ಮತ್ತೆ ಉಲ್ಲಾಸ ತುಂಬಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ.
ಗಿರೀಶ್ ತಂದಿದ್ದ ಖಡಕ್ ರೋಟಿ, ಮೊಸರು, ಉಪ್ಪಿನಕಾಯಿ, ದರ್ಶನ್ ತಂದಿದ್ದ ಚಪಾತಿ ಎಲ್ಲ ಅನಾಯಾಸವಾಗಿ ತಮ್ಮ ಪೂರ್ವ ನಿರ್ಧಾರಿತ ಗುರಿ ಸೇರಿದವು. ಒಂದು ಹದಿನೈದು ನಿಮಿಷ ನಿದ್ದೆ ಮಾಡಿ ಸುಮಾರು ೧೨.೦೦ ಘಂಟೆಗೆ ಮುಂದಿನ ಮಹಾನ್ ಯಾನಕ್ಕೆ ಹೊರಟೆವು.

ನಾಲ್ಕನೆ ಹಂತ - ಕಲ್ಲು ಮಂಟಪ 
ಕುಮಾರ ಪರ್ವತ ಚಾರಣ ಸಾಮಾನ್ಯವಾಗಿ ಕಠಿಣ ಅನ್ನುವ ಪದ ಉಪಯೋಗಕ್ಕೆ ಬರುವುದು ಇಲ್ಲೇ.  ಸೂರ್ಯ ತನ್ನ ಮನೆಯಲ್ಲಿರುವ ಒಲೆಯನ್ನು ಉರಿಸುತ್ತಾ ಅತಿ ಹೆಚ್ಚು ಶಾಖ ಹೊಮ್ಮಿಸುವ ಸಮಯ ಇದಾಗಿರುತ್ತೆ. ನೆರಳಿಗೆ ಒಂದು ಗಿಡ ಮರವಿರುವುದಿಲ್ಲ, ಮತ್ತೆ ಏರು ಹಾದಿ ದೇಹದಲ್ಲಿನ ಶಕ್ತಿಯನ್ನು ಉಡುಗಿಸಿಬಿಡುತ್ತದೆ . ಸಾಕಪ್ಪ ಈ ಪರ್ವತದ ಸಹವಾಸ ಎನ್ನುವಷ್ಟು ಹತಾಶೆ ಮೂಡಿಸುತ್ತದೆ ಇದಕ್ಕೆ ನಿದರ್ಶನವಾಗಿ ಇನ್ನೊಂದು ತಂಡದಲ್ಲಿ ಬಂದಿದ್ದ ಮೂರು ನಾಲ್ಕು ಹುಡುಗಿಯರು ಅವರನ್ನು ಕರೆದುಕೊಂಡು ಬಂದಿದ್ದ ಆ ತಂಡದ ನಾಯಕನಿಗೆ ಹಿಗ್ಗಾ ಮುಗ್ಗಾ ಬಯ್ತ ಇದ್ದರು! ಈ ಬಿಸಿಲು, ನೆರಳಿಲ್ಲ..ಎಷ್ಟು  ನೀರು ಕುಡಿದರೂ ಸಾಕಾಗೊಲ್ಲ, ಸಮತಟ್ಟಾದ ಹಾದಿಯಿಲ್ಲ ಅಂತ ಸಹಸ್ರನಾಮಾರ್ಚನೆ ಮಾಡುತ್ತಿದ್ದರು.

ನಮ್ಮ ಜೊತೆ ಬಂದಿದ್ದ ಮಿಕ್ಕೆಲ್ಲರೂ ಹುಮ್ಮಸ್ಸಿನಿಂದ ನಿಧಾನವಾಗಿ ಕಲ್ಲು ಮಂಟಪದೆಡೆಗೆ ಸಾಗುತಿದ್ದರು. ನನಗೆ ತುಂಬಾ ಸುಸ್ತಾಗುತಿತ್ತು. ಒಂದು ನಿಮಿಷ ಸಾಕಪ್ಪ...ಈ ಬಾರಿ ಆಗೋಲ್ಲ.ವಾಪಸ್ ಭಟ್ಟರ ಮನೆಯಲ್ಲಿ ಇರ್ತೀನಿ ನೀವು ಹತ್ತಿ ಬನ್ನಿ ಎಂದು ಕೂಗಿ ಹೇಳುವ ಆಸೆಯಾಗುತ್ತಿತ್ತು. ಆದ್ರೆ ಅವರು ನನ್ನಿಂದ ತುಸು ದೂರದಲ್ಲಿದ್ದರೂ. ಮತ್ತೆ ನಾನೇ ಈ ಚಾರಣಕ್ಕೆ ಹೋಗೋಣ ಅಂತ ಎಲ್ಲರನ್ನು ಕರೆದು ನಾನೇ ಹಿಂದೆ ಬಂದರೇ....ಛೆ ಛೆ ಏನು ಮಾಡೋದು ಅನ್ನುವಾಗ ತಲೆಗೆ ಬಂದದ್ದು...

"ಆಗದು ಎಂದು.... ಕೈಲಾಗದು ಎಂದು
ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ"

ಮೂರು ಅಣ್ಣಂದಿರು ....ನನ್ನ ಅಣ್ಣ ( ಅಪ್ಪ ), ನಮ್ಮ ಅಣ್ಣ (ಅಣ್ಣಾವ್ರು ), ಬಾಲಣ್ಣ (ಕನ್ನಡ ಚಿತ್ರನಟ ಬಾಲಕೃಷ್ಣ)  ನೆನಪಿಗೆ ಬಂದರು, ಮೂವರಿಗೂ ಮನದಲ್ಲಿಯೇ ವಂದಿಸಿ ನಿಮ್ಮ ಛಲ, ಸಾಹಸ ಮನೋಭಾವದ ಒಂದು ಅಂಶ ನನಗೆ ಕೊಡಿ ಎಂದು ಬೇಡುತ್ತಾ ಹತ್ತಲು ಶುರು ಮಾಡಿದೆ...ಆಶ್ಚರ್ಯ...ಅನಾಯಾಸವಾಗಿ ಕಲ್ಲು ಮಂಟಪದೆಡೆಗೆ ಸಾಗುತ್ತ ಹೋದೆ...
ಸಂದೀಪ್ ಹೇಳಿದ್ರು "ಶ್ರೀಕಾಂತ್..ಇ-ಮೇಲ್ ನಲ್ಲಿ ೨.೩೦ಕ್ಕೆ ಕಲ್ಲು ಮಂಟಪ ಅಂತ ಹಾಕಿದ್ರಿ...ನೋಡಿ ಸಮಯ ಈಗ ಸರಿಯಾಗಿ ೨.೩೦ ಅಂದಾಗ...ಮನಸ್ಸು ಹಾರಾಡುತ್ತಿತ್ತು!

ಐದನೇ ಹಂತ - ಶೇಷ ಪರ್ವತ
ಗಿರೀಶ್, ದರ್ಶನ್ "ಸರ್ ಅದೇನಾ ಕುಮಾರಪರ್ವತ? "
"ಇಲ್ಲ ಗಿರಿ ಅದು ಶೇಷ ಪರ್ವತ..ಅದನ್ನು ದಾಟಿ ಹೋದರೆ ಸಿಗುತ್ತೆ ಕುಮಾರಪರ್ವತ "
"ಮತ್ತೆ ಎಲ್ಲಿ ಉಳಿಯೋದು, ಎಲ್ಲಿ ಮಲಗೋದು"
"ಏನು ಯೋಚನೆ ಬೇಡ..ಎಲ್ಲರಿಗೂ ಸುಸ್ತಾಗಿದೆ...ಶೇಷಪರ್ವತ ಸುಮಾರು ೪.೩೦ - ೫.೦೦ ಘಂಟೆಗೆ ತಲುಪುತ್ತೇವೆ. ಅಲ್ಲಿಂದ ಒಂದು ಐದು ನಿಮಿಷ ನಡೆದರೆ ಕಾಡು ಸಿಗುತ್ತೆ...ಅಲ್ಲಿಯೇ ನಮ್ಮ ಬಿಡಾರ ಹೂಡಿ ಬಿಡೋಣ..ಚೆನ್ನಾಗಿ ಊಟ ಮಾಡಿ..ರಾತ್ರಿ ಮಲಗಿ ಬೆಳಿಗ್ಗೆ ಹೊಸ ಹುರುಪಿಂದ ಕುಮಾರಪರ್ವತಕ್ಕೆ ಹೋಗುವ.."
ಸಂದೀಪ್, ಪ್ರಶಾಂತ್ ಕೂಡ ಇದು ಸರಿಯಾದ ಯೋಚನೆ ಎಂದರು.
ಮುಂದಿನ ಮಾರ್ಗ ತುಂಬಾ ಕಡಿದಾಗಿತ್ತು. ಇಲ್ಲಿಯ ತನಕ ಬಂದಾಗಿದೆ..ಇನ್ನೂ ಹಿಂದಕ್ಕೆ ಹೋಗುವ ಮಾತೆ ಇರಲಿಲ್ಲ..ನಿಧಾನವಾಗಿ ಶೇಷಪರ್ವತದ ತುದಿಯಲ್ಲಿ ನಿಂತಾಗ ಸುಮಾರು ಐದು ಘಂಟೆ. ಸೂರ್ಯ ಅಸ್ತಮಿಸಲು ಸಿದ್ದವಾಗುತಿದ್ದ!
ಆನಂದದ ಸಮಯ - ಅಲೆಮಾರಿಗಳು ಹಕ್ಕಿಗಳ ಹಾಗೆ ಹಾರಾಡುವ ಸಮಯ !

ಆರನೇ ಹಂತ - ಬಿಡಾರ - ಊಟ - ನಿದ್ದೆ 
ಪ್ರಶಾಂತ್ ಮತ್ತು ನಾನು ತಂದಿದ್ದ ಬಿಡಾರಗಳನ್ನು ಬಿಚ್ಚಿ ಸಿದ್ದ ಮಾಡುತಿದ್ದೆವು, ಗಿರೀಶ್, ದರ್ಶನ್ ಸಂದೀಪ್ ಸಹಾಯಕ್ಕೆ ಬಂದರು. ರವಿ ಅದಕ್ಕೆ ಬೇಕಾದ ಅನುಕೂಲ ಮಾಡುತ್ತಾ, ರಾತ್ರಿ ಒಲೆಗೆ ಬೇಕಾದ ಸೌದೆಗಳನ್ನು ಒಟ್ಟು ಗೂಡಿಸುತ್ತಿದ್ದರು. ಮೊದಲಿಗೆ ನಮ್ಮ ಗುಡಾರ ಸಿದ್ಧವಾಯಿತು. ಕಟ್ಟಿಗೆ, ಒಣಗಿದ ಎಲೆ, ಒಲೆ ಕೂಡ ಸಿದ್ಧವಾಯಿತು. ಇನ್ನು ಬೇಕಾಗಿದ್ದು ನೀರು.
ಪ್ರಶಾಂತ್ ಗುಡಾರವನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಂಡ...ಸಂದೀಪ್ ಸೂರ್ಯಾಸ್ತದ ಚಿತ್ರ ತೆಗೆದುಕೊಂಡು ಬರ್ತೀನಿ ಅಂತ ಹೋದರು..ಮಿಕ್ಕ ನಾಲ್ವರು ನೀರು ತರಲೆಂದು ಹೊರಟೆವು. ಸಂಜೆಯ ಸಮಯ..ದಿನವಿಡೀ ಬಿರು ಬಿಸಿಲಿನಲ್ಲಿ ನೆಡೆದು ಹಣ್ಣಾಗಿದ್ದ ದೇಹಕ್ಕೆ ಮುಸ್ಸಂಜೆಯ ತಂಗಾಳಿ ಮುದ ತರುತ್ತಿತ್ತು. ಇದ್ದ ಬಾಟಲಿಗಳು ನೀರಿನಿಂದ ತುಂಬಿ ತುಳುಕುತ್ತಿತ್ತು.

ಓಲೆ ಹಚ್ಚಿ ಪಾತ್ರೆ ಇಟ್ಟಿದ್ದೆ ತಡ...ಎಂ.ಟಿ.ಆರ್ ನ ಸಿದ್ಧಪಡಿಸಿದ ಊಟಕ್ಕೆ ನಾಲಿಗೆ ಕಾತರಿಸುತಿತ್ತು.  ಒಂದೊಂದೇ ಪ್ಯಾಕೆಟ್ ಅಂತ ಸುಮಾರು ೧೨ ಪ್ಯಾಕ್ಕೆಟ್ಗಳು ಎಲ್ಲರ ಹೊಟ್ಟೆಯೊಳಗೆ ಶಿವೈಕ್ಯ ಹೊಂದಿತು. ಸ್ವಲ್ಪ ಚೇತನ ಬಂದ ಮೇಲೆ ಮತ್ತೆ ಹರಟಲು ಶುರು ಮಾಡಿದೆವು.
ಊಟದ ಸಮಯ...ಬಿಸಿ ಬಿಸಿ ಊಟ...ಆಹಾ...!

ಇಲ್ಲಿಯ ತನಕ ಬ್ಯಾಗಿನಲ್ಲಿ ಸುಮ್ಮನೆ ಕೂತಿದ್ದ ಕ್ಯಾಮೆರ ನಿಧಾನವಾಗಿ ಹೊರಬಂದು ಸದ್ದು ಮಾಡಲು ಶುರುಮಾಡಿತು. ನಮ್ಮ ಹೊಟ್ಟೆ ತುಂಬಿತ್ತು..ಕ್ಯಾಮೆರಗೂ ಹೊಟ್ಟೆ ತುಂಬಿಸಿ ಸಂತಸ ನಿದ್ರೆಗೆ ನಮ್ಮನ್ನು ಅರ್ಪಿಸಿಕೊಂಡೆವು.
ಬೆಳಗಿನ ಚಳಿಗೆ ಬಿಸಿ ಬಿಸಿ ಬಿಸಿಸೂಪ್  ಕುಡಿದ ಆ ಕ್ಷಣ !!!

ಏಳನೇ ಹಂತ - ಕುಮಾರ ಪರ್ವತ
ಬೆಳಿಗ್ಗೆ ಬೇಗನೆ ಎದ್ದು ಪ್ರಶಾಂತ್ ತಯಾರಿಸಿದ ಸೂಪ್ ಕುಡಿದು ಚಳಿಗೆ ಮರಗಟ್ಟಿದ್ದ ದೇಹವನ್ನು ಅರಳಿಸಿಕೊಂಡು ಕುಮಾರಪರ್ವತ ಶಿಖರಾಗ್ರಕ್ಕೆ ಬಂದು ನಿಂತಾಗ ಕಂಡ ದೃಶ್ಯ ನೋಡುತ್ತಾ ಮನದಾಳದಲ್ಲಿ ಪದಗಳು ಹುಟ್ಟಿ ಕೊಂಡವು

ಉದಯಿಸಲು ಬಂದ ಉದಯರವಿ!

"ಮೂಡುತ ಬರುವ ಸೂರ್ಯ
ತನ್ನ ಹಿಂದೆ ಇದ್ದ ಕತ್ತಲನ್ನು ಬಡಿದೋಡಿಸಿ
ಹೊಸ ಬೆಳಗಿಗೆ ನಾಂದಿ ಹಾಡುವನು"
ಸುತ್ತ ಮುತ್ತಲಿನ ದೃಶ್ಯ...ನಯನ ಮನೋಹರ!

ಶಿಖರಾಗ್ರ ತಲುಪಿ..ಇಲ್ಲಿಯ ತನಕ ನಮ್ಮನ್ನು ಸುರಕ್ಷಿತವಾಗಿ ಕರೆದು ತಂದ ಆ ದೇವನಿಗೆ ಮನಸಾರೆ ವಂದಿಸಿ, ಕೆಲ ಸುಂದರ ಕ್ಷಣಗಳನ್ನು ಕಳೆದು ಮತ್ತೆ ನಮ್ಮ ಗೂಡಿಗೆ ಹೊರಟೆವು.
ಸುರಕ್ಷಿತವಾಗಿ ತಲುಪಿಸಿದ ದೇವರಿಗೆ ಒಂದು ನಮನ 
ಸುತ್ತಮುತ್ತಲು ಕಾಣುವ ನಯನ ಮನೋಹರ ದೃಶ್ಯಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾದುತಿದ್ದವು!

ದೂರದಲ್ಲಿ ಶೇಷ ಪರ್ವತ!
ಒಬ್ಬೊಬ್ಬರಿಗೆ ಒಂದೊಂದು ರೀತಿ ನೆನಪಲ್ಲಿ ಉಳಿಯುವ ಈ ಕುಮಾರಪರ್ವತ ನಮ್ಮ ಪ್ರಶಾಂತ್ ಜ್ಞಾನ ಪ್ರಭಾವಳಿಯಲ್ಲಿ ಮಿಂದ ಬಗೆ ಹೀಗಿತ್ತು!

ಜ್ಞಾನ ಪ್ರಭಾವಳಿಯಲ್ಲಿ ಅಲೆಮಾರಿಗ ಪ್ರಶಾಂತ್ !

ನೆನಪಿನ ಪುಟದಲ್ಲಿ ದಾಖಲಾಗುವಂತೆ ಅಲೆಮಾರಿಗಳ ತಂಡದ ಒಂದು ಚಿತ್ರ ಶಿಖರಾಗ್ರದಲ್ಲಿ.


ಕುಮಾರ ಪರ್ವತಕ್ಕೆ ಸಾಗುವ ಕಡಿದಾದ ಹಾದಿ. ಮಳೆಗಾಲದಲ್ಲಿ ಇದು ಸದಾ ಹರಿಯುವ ಜಲಪಾತ!...

ಮಳೆಗಾಲದಲ್ಲಿ ಇದು ಜಲಪಾತದ ಹಾದಿ..!

ಸಂದೀಪ್ ನಾವೆಲ್ಲಾ ಬರುವಷ್ಟರಲ್ಲಿ  "ಅಲೆಮಾರಿಗಳು" ತಂಡದ ಹೆಸರನ್ನು ಪರ್ವತದ ಹೃದಯ ಭಾಗದಲ್ಲಿ ಅರಳಿಸಿದ್ದರು.

ಅ;ಅಲೆಮಾರಿಗಳು ತಂಡದ ಹೆಸರು ಭೂತಾಯಿಯ ಹಣೆಯ ಮೇಲೆ!

ನಮ್ಮ ಬ್ಯಾಗ್ಗಳನ್ನ ತೆಗೆದುಕೊಂಡು..ಒಂದು ಸುಂದರ ಚಿತ್ರವನ್ನು ಚಿತ್ರೀಕರಿಸಿ ಕುಮಾರಪರ್ವತಕ್ಕೆ ಶುಭ ವಿದಾಯ ಹೇಳಿದೆವು. 

ನಮ್ಮ ಗುಡಾರದ ಜೊತೆ ನಾವು...!
ಮುಂದಿನ ಪಯಣ ಎಡಬಿಡದೆ ಭಟ್ಟರ ಮನೆ ತಲುಪುವುದಾಗಿತ್ತು. ಗಡಿಯಾರ ಬೆಳಗಿನ ಹತ್ತು ಘಂಟೆ ಎಂದು ಉಲಿಯುತ್ತಿತ್ತು!

ಎಂಟನೆ ಹಂತ - ಭಟ್ಟರ ಮನೆ ಹಾಗೂ ರುಚಿಕರ ಭೋಜನ!
ಸರಿ ಸುಮಾರು ೧೩.೦೦ ಘಂಟೆಗೆ ಭಟ್ಟರ ಮನೆಗೆ ಬಂದೆವು..ಪುಷ್ಕಳ ಭೋಜನ ಸಿದ್ಧವಾಗಿತ್ತು. ನಗುಮೊಗದಲ್ಲಿ ಭಟ್ಟರ ಮನೆಯ ಸಿಬ್ಬಂಧಿಗಳು ಮಾತಾಡಿಸಿದರು. ಶುಚಿರ್ಭೂತರಾಗಿ ಹೊಟ್ಟೆಗೆ ಸಮಾರಾಧನೆಯ ಯೋಗ ಮಾಡಿಕೊಟ್ಟೆವು. ಭಟ್ಟರ ಮನೆಯವರ ಜೊತೆ ಒಂದು ಚಿತ್ರ ನಮ್ಮ ನೆನಪಿಗೆ ಸಿಕ್ಕಿತು. ಕಾಫಿ ಕೇಳಿದೆವು ಅದು ಸಿಕ್ಕಿತು.  ಇನ್ನೇನು ಬೇಕು ಆ ಬೆಟ್ಟದಲ್ಲಿ ಓ ಎಂದರೆ ಯಾರು ಸಿಗುತ್ತಾರೆ?..ಅಂತಹ ರುದ್ರ ರಮಣೀಯ ತಾಣದಲ್ಲಿ ನೆರಳು, ನೀರು, ಆಹಾರ ಯಾರೇ ಕೊಟ್ಟರೂ ಆ ದೇವರ ಸಾಕ್ಷಾತ್ಕಾರವಾದಷ್ಟು ಖುಷಿಯಾಗುತ್ತದೆ ಅಲ್ಲವೇ...ಅಂತಹ ಒಂದು ಸುಂದರ ಜಾಗ ಭಟ್ಟರ ಮನೆ!

ದೇವರ ಮನೆ...ಭಟ್ಟರ ಮನೆಯ ಸಿಬ್ಬಂಧಿ ವರ್ಗದ ಜೊತೆಯಲ್ಲಿ ಅಲೆಮಾರಿಗಳು !

ಒಂಭತ್ತನೇ ಹಂತ - ಕುಕ್ಕೆ ಸುಬ್ರಮಣ್ಯ ಹಾಗು ದೇವರ ದರ್ಶನ!
ಕುಮಾರ ಪರ್ವತದಿಂದ ಹೊರಡಬೇಕಲ್ಲ ಎನ್ನುವ ಭಾರವಾದ ಮನಸು, ಏನೋ ಸಾಧಿಸಿದ ಹುಮ್ಮಸ್ಸಿನಿಂದ ಹಗುರಾದ ದೇಹ ಇವರೆಡನ್ನು ಹೊತ್ತು ಸುಮಾರು ೧೭.೦೦ ಘಂಟೆಗೆ ಬೆಟ್ಟದ ತಪ್ಪಲಿಗೆ ಬಂದೆವು. ಕೊಂಚ ಕಾಲ ವಿರಮಿಸಿಕೊಂಡು..ಸ್ನಾನಕ್ಕೆ ಕುಮಾರಧಾರ ನದಿಗೆ ಹೊರಟೆವು. ನದಿ ಸ್ನಾನ ಮುಗಿಸಿ ಹೊರಬಂದಾಗ.ಒಂದು ಆಘಾತ ಕಾಡಿತ್ತು..ಬಂದ ಆಟೋ ರಿಕ್ಷಾದಲ್ಲಿ ಸಂದೀಪ್ ಅವರ ಕ್ಯಾಮೆರಾದ ಟ್ರೈ-ಪಾಡ್ ಬಿಟ್ಟಿದ್ದೆವು. ನಮ್ಮೆಲ್ಲರ ಪ್ರಾರ್ಥನೆ ಒಂದೇ ಆಗಿತ್ತು..ಹೇಗಾದರೂ ಆ ಕಳೆದ ಹೋದ ವಸ್ತು ನಮ್ಮ ಕೈಸೇರಲಿ ಎಂದು.  ಅಲ್ಲಿಯೇ ಇದ್ದ ಕೆಲ ಆಟೋ ರಿಕ್ಷ ಚಾಲಕರಿಗೆ ನಾವು ಬಂದ ಆಟೋ ಚಾಲಕನ ಗುರುತು ಎಲ್ಲ ಹೇಳಿದೆವು...ಹತ್ತೇ ನಿಮಿಷ ಟ್ರೈ-ಪಾಡ್ ನಮ್ಮ ಕೈಯಲ್ಲಿ ಇತ್ತು. ಎಲ್ಲ ಒಳ್ಳೆಯ ಮನಸಿನ ಮಹಿಮೆ...ದೇವರ ಮಹಿಮೆ...!
ದೇವರ ದರ್ಶನವಾಯಿತು..ಮನಸಿಗೆ ಸಂತಸವಾಯಿತು. ದೇವಸ್ಥಾನದಲ್ಲಿ ಊಟ ಮಾಡುವಷ್ಟು ಸಮಯವಿಲ್ಲದ ಕಾರಣ, ಅಲ್ಲಿಯೇ ಒಂದು ಹೋಟೆಲ್ನಲ್ಲಿ ಸಿಕ್ಕ ಮಸಾಲೆ ದೋಸೆ, ಕಾಫಿಯನ್ನು ಹೀರಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು.

ಹತ್ತನೇ ಹಂತ - ವಾಪಸ್ ಬೆಂಗಳೂರಿಗೆ
ನಿಲ್ದಾಣಕ್ಕೆ ಬಂದಾಗ ವೈಭವ ಬಸ್ ನಮಗಾಗಿ ಕಾದಿತ್ತು. ನಮ್ಮ ಲಗೇಜ್ಗಳನ್ನೂ ಅದರ ಸ್ಥಾನಕ್ಕೆ ಸೇರಿಸಿ ಸೀಟಿಗೆ ಒರಗಿ ಕಣ್ಣು ಮುಚ್ಚಿದೆವು...ಕಣ್ಣು ಬಿಟ್ಟಾಗ ಯಾರಿ ನವರಂಗ ಸರ್ಕಲ್ ಅಂತ ಹೇಳುತ್ತಿದ್ದ ಧ್ವನಿ ಎಚ್ಚರಿಸಿತು.  ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದು..
ಆ ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದು ಎಲ್ಲ ಸ್ನೇಹಿತರಿಗೆ ವಿದಾಯ ಹೇಳಿದಾಗ ಕಾಫಿ ಅಂಗಡಿಯಲ್ಲಿದ್ದ ಕುಕ್ಕೆ ಸುಬ್ರಮಣ್ಯ ದೇವರ ಚಿತ್ರ ಒಮ್ಮೆ ಕಣ್ಣು ಮಿಟುಕಿಸಿದ ಅನುಭವವಾಯಿತು. ಅಲ್ಲಿಯೇ ದೇವರಿಗೆ ನಮ್ಮ ನಮನಗಳನ್ನು ಸಲ್ಲಿಸಿ ನಮ್ಮ ನಮ್ಮ ಗೂಡಿಗೆ ಸೇರಿಕೊಂಡೆವು.