ಗೀಜಗನ ಗೂಡಿನ ಬಗ್ಗೆ ಕೇಳಿದ್ದೆ...ಗುಬ್ಬಚ್ಚಿ ಗೂಡಿನ ಬಗ್ಗೆ ಕೇಳಿದ್ದೆ..
ಈ ಹಕ್ಕಿಗಳು ಮಾನವರ ಕಣ್ಣಿಗೆ ಕಂಡು ಕಾಣರಿಯದ ಎಷ್ಟೋ ಪದಾರ್ಥಗಳನ್ನು ತಂದು, ಚಂದದ ಗೂಡನ್ನು ಕಟ್ಟಿಕೊಳ್ಳುತ್ತವೆ..ಹಕ್ಕಿಗಳು ತಮ್ಮ ಕೊಕ್ಕಿನಲ್ಲಿ ಕಸ ಕಡ್ಡಿಗಳನ್ನು ಕಚ್ಚಿಕೊಂಡು ಹಾರಾಡುತಿದ್ದಾಗ ನಮಗೆ ವಿಸ್ಮಯ..ಏನು ಮಾಡುತ್ತವೆ ಇದನ್ನ..ಅಂತ..ಆದ್ರೆ ಗೂಡು ಕಟ್ಟಿ ಪೂರ್ಣವಾದಾಗ ತನ್ನ ಮರಿಗಳ ಒಡನೆ ಆ ಸುಂದರ ಗೂಡಿನಲ್ಲಿ ವಾಸ ಶುರುಮಾಡಿದಾಗ ಅವು ಪಡುವ ಆನಂದ ಹೇಳತೀರದು...
ಈ ಟಿಪ್ಪಣಿ ಏಕೆ ಅಂದ್ರೆ..ಇದೆ ತಿಂಗಳು ತುಂಬಾ ಪುರುಸೊತ್ತಿನಲ್ಲಿದ್ದಾಗ..ಕಾವೇರಿ ಹಾಗು ಶ್ರೀರಂಗನಾಥರ ಪುಣ್ಯ ಸ್ಥಳವಾದ ಶ್ರೀರಂಗಪಟ್ಟಣದ ಮೂಲೆ ಮೂಲೆಯನ್ನು ಚಿತ್ರಮಾಲಿಕೆ ಮೂಲಕ ಪರಿಚಯಿಸಿದ ಬಾಲು ಸರ್ ಅವರ ಬ್ಲಾಗ್ ಲೋಕದ ಒಳಗೆ ಹೋಗಿಬಂದೆ.....ಅದರ ಕೊಂಡಿ ಇಲ್ಲಿದೆ http://shwethadri.blogspot.in/
ಅದರ ಬಗ್ಗೆ ನನ್ನ ಲೇಖನ...ಇಲ್ಲಿದೆ.....http://tripping-life.blogspot.in/2012/08/blog-post.html
ಒಂದು ಅದ್ಭುತ ಕನಸಿನ ಪಯಣ ಮಾಡಿಸಿತು..ಬೆಂಗಳೂರಿನ ಒಂದು ಪುಟ್ಟ ಗೂಡಿನಲ್ಲಿ ಕೂತಿದ್ದ ನನಗೆ ಆ ಪಟ್ಟಣದ ಹಿರಿಮೆ ಗರಿಮೆ ಎಲ್ಲವನ್ನು ಪರಿಚಯಿಸಿದ್ದ ಆ ಬ್ಲಾಗ್ ತಾಣ..ಮನಸಿಗೆ ತುಂಬಾ ಖುಷಿ ತಂದಿತ್ತು...ಅರೆ ಬರಿ ಶ್ರೀ ರಂಗಪಟ್ಟಣದ ಬಗ್ಗೆಯೇ ಇಷ್ಟೊಂದು ಮಾಹಿತಿ ಕೊಟ್ಟಿರುವ ಇವರು ಗಂಧದನಾಡು ಚಿನ್ನದ ಬೀಡು ನಮ್ಮ ಕರುನಾಡಿನ ಬಗ್ಗೆ ಹಾಗು ಅವಳಮ್ಮ ಭಾರತ ಮಾತೆಯ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತೆ ಎನ್ನುವ ಆಸೆಯಿಂದ ಅವರ ನಿಮ್ಮೊಳಗೊಬ್ಬ ಬಾಲು ಎನ್ನುವ ತಾಣವನ್ನು ಓದಲು ಶುರು ಮಾಡಿದೆ...
ಅಬ್ಬ..ಇಲ್ಲಿ ಏನಿಲ್ಲ ಅನ್ನಿಸಿತು...ಮಕ್ಕಳು ತಿನ್ನುವ ಐಯ್ಸ್ ಕ್ಯಾಂಡಿ, ಚಮ್ಮಾರ ಹಾಗು ಸತ್ಯ ಸಂಧತೆ, ಪ್ರಯಾಣಿಕರ ಸಮಯ ಪ್ರಜ್ಞೆ, ಮಾಧ್ಯಮಗಳ ಅಣುಕು ನೋಟ, ಬುದ್ಧಿಜೀವಿಗಳ ಸ್ವಪ್ರತಿಷ್ಠೆ, ಸ್ನೇಹ ಮಾಡಿ ವಿಶ್ವಾಸಾಘಾತಮಾಡುವ ಮಂದಿ.. ಪ್ರಾಮಾಣಿಕ ಉಪಾಧ್ಯಾಯರ ಉತ್ತಮ ಸೇವೆ, ಪ್ರಾಮಾಣಿಕ ಪ್ರಯತ್ನ ಹಾಗು ಯಶಸ್ವಿಯಾದ ಬಿಳಿ ಗಿರಿಯ ಬನದ ವೈದ್ಯರು...ಸಿನೆಮಾಂತರಂಗ ಎಲ್ಲವುಗಳ ಬಗ್ಗೆ ಲೇಖನಗಳು ತುಂಬಿ ತುಳುಕಾಡುತಿತ್ತು...
ಇಷ್ಟೆಯ ಅಂದುಕೊಂಡಿರ...ಇಲ್ಲ ಇಲ್ಲ..ನನ್ನ ಮೆಚ್ಚಿನ ಹವ್ಯಾಸ ಚಾರಣ... ಇದರ ಬಗ್ಗೆ ಬಾಲು ಸರ್ ಬರೆದಿರುವ ಮಾಹಿತಿಗಳನ್ನ ಬರೆಯಲು ಒಂದು ಬ್ಲಾಗನ್ನೇ ತೆರೆಯಬೇಕೆನೋ....
ಕತ್ತಲೆ ಬೀಡಾದ ಕಗ್ಗತ್ತಲೇ ಕಾಡು ನಾಗರಹೊಳೆ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿ ಗಿರಿ ರಂಗನ ಬೆಟ್ಟ ಹಾಗು ಕಾಡುಗಳು, ಕನಕಪುರದ ಬಳಿ ಇರುವ ಭೀಮನ ಕಿಂಡಿ...ದಿಲ್ಲಿಯ ಪಯಣ, ಮೈಸೂರಿನ ಸುತ್ತ ಮುತ್ತ ಇರುವ ಅನೇಕ ಪ್ರೇಕ್ಷಣೀಯ ತಾಣಗಳು...ಇವನ್ನೆಲ್ಲ ಸೇರಿಸಿ ಒಂದು ಪಟ್ಟಿಯನ್ನೇ ಸಿದ್ಧ ಮಾಡಿಕೊಂಡಿದ್ದೇನೆ...ಅವಕಾಶವಾದಗೆಲ್ಲ..ದೇಹದಲ್ಲಿ ಹುಮ್ಮಸ್ಸಿರುವ ತನಕ ಈ ಜಾಗಗಳನ್ನೆಲ್ಲ ನೋಡಿ, ಛಾಯ ಪೆಟ್ಟಿಗೆಯಲ್ಲಿ ಸೆರೆ ಹಿಡಿದು...ಬ್ಲಾಗ್ ಲೋಕಕ್ಕೆ ತುಂಬಾ ಬೇಕು ಅಂತ...
ಅವರ ಬ್ಲಾಗ್ ಲೋಕದ ಕೊಂಡಿ ಇಲ್ಲಿದೆ..http://nimmolagobba.blogspot.in/
ಅದ್ಭುತ ಮಾಹಿತಿಯ ಕೇಂದ್ರ ನಮ್ಮ ಬಾಲು ಸರ್...ಅವರ ವಿಸ್ಮಯ ಲೋಕದಲ್ಲಿ ಒಮ್ಮೆ ಓಡಾಡಿಬನ್ನಿ..ನಾವು ದಿನ ನೋಡುವ..ಹಾಗು ಗಮನ ಕೊಡದ ಎಷ್ಟೋ ವಿಷಯಗಳು ನಮ್ಮ ಗಮನ ಸೆಳೆಯುವುದಂತು ಖಚಿತ...