ಕನ್ನಡ ಏನೇ ಕುಣಿದಾಡುವುದೆನ್ನೆದೆ ಇಂತಹ ಅಮೋಘ ಸಾಲುಗಳನ್ನು ಓದುತ್ತ ಬೆಳೆದ ನನ್ನ ಮನಸು ಸದಾ ಇಂತಹ ಕಾರ್ಯಕ್ರಮಗಳಿಗೆ ತುಡಿಯುತ್ತಿತ್ತು...
ನಾನು ಕಂಡ ಒಂದು ಅಣ್ಣಾವ್ರ ಬಹುರೂಪಿ ಮನೋಜ್ಞ ಅವರು ಮುಖ-ಪುಸ್ತಕದಲ್ಲಿ ಲಗತ್ತಿಸಿದ ಆಹ್ವಾನ ಪತ್ರಿಕೆಯಾ ಭಾವಚಿತ್ರ ನನ್ನ ಮನ ಹಾಗು ಕಣ್ಣು ಸೆಳೆಯಿತು...
ಕನ್ನಡ ಮಣ್ಣಿನ ಮಹನೀಯರು ಒಂದೇ ವೇದಿಕೆಯಲ್ಲಿ...!!!!! |
ಮನ್ಜೋಜ್ಞ ಹಾಗು ಮಿತ್ರವೃಂದ ಅವರು ಸಿದ್ದಪಡಿಸಿದ ವೇದಿಕೆಯ ಚಿತ್ರ ನಿಜಕ್ಕೂ ಅವರ್ಣನೀಯ...ಅವರಿಗೆ ಹಾಗು ನನ್ನ ನೆಚ್ಚಿನ ಸಂಭ್ರಮ ತಂಡಕ್ಕೆ ನನ್ನ ನಮನಗಳು.
ನನಗೆ ಜೀವನದ ಕೆಲವು ಅತ್ಯುತ್ತಮ ಗೆಳೆಯರನ್ನ ಕೊಟ್ಟ ಸಿಸ್ಕೋ ಕಂಪನಿಯಲ್ಲಿ ನಡೆಯುವ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಹೇಗಾದರೂ ಸರಿ ಹೋಗುವ ಬಗ್ಗೆ ಮನಸು ಸಜ್ಜಾಯಿತು.. ನನ್ನ ಆತ್ಮೀಯ ಗೆಳತಿ ಛಾಯಾ ಕಳಿಸಿದ ಕರೆಯೋಲೆಯ ಮುಖಪುಟ ನನ್ನ ಮನಸು ಸೆಳೆಯಿತು. ಗೆಳೆಯ ಸಂದೀಪನ ಪ್ರೋತ್ಸಾಹದ ಮಾತುಗಳು ಕಾರ್ಯಕ್ರಮಕ್ಕೆ ಬರಲು ಅನುಕೂಲವಾಯಿತು.
ಕಾರ್ಯಕ್ರಮ ವಿವರಣೆ. |
ನಾನು ಹೋಗುವಷ್ಟರಲ್ಲಿ ಬಹುತೇಕ ಮುಖ್ಯ ಕಾರ್ಯಕ್ರಮಗಳು ಮುಗಿಯುವ ಹಂತಕ್ಕೆ ಬಂದಿತ್ತು...ಆದ್ರೆ ನಾನು ಸಭಾಂಗಣಕ್ಕೆ ಕಾಲಿಟ್ಟಾಗ ಕನ್ನಡ ನಾಡಿನ ಚಿನ್ನದ ಮಕ್ಕಳ ಒಂದು ಉತ್ತಮ ರೂಪಕ ಬಿತ್ತರವಾಗುತಿತ್ತು.. ಆಹಾ ಎಂತಹ ಸೊಗಸಾದ ಸಂಯೋಜನೆ, ನಿರೂಪಣೆ, ವಸ್ತ್ರ ವಿನ್ಯಾಸ ಎಲ್ಲವು ಕಣ್ಮನ ಸೂರೆಗೊಂಡಿತು.
ಅಲ್ಲಿನ ಪ್ರತಿಯೊಂದು ವಸ್ತು, ಅಭಿರುಚಿ, ವಿನ್ಯಾಸ ಎಲ್ಲವು ಅಚ್ಚುಕಟ್ಟು...ಉತ್ಸವ ಎಂದರೆ ಹೀಗೆ ಇರಬೇಕು ಅನ್ನುವಷ್ಟು ಖುಶಿ ಕೊಡುತ್ತಿತ್ತು ನನ್ನ ಮನಕ್ಕೆ..
ಕೆಲವು ಉತ್ತಮ ಹಾಡುಗಳಿಗೆ ಅಷ್ಟೇ ಉತ್ತಮ ನೃತ್ಯ ಮೆಲುಕು ಹಾಕುವಂತಿತ್ತು...ಇದಕೆಲ್ಲ ಕಳಶಪ್ರಾಯವಾಗಿ ನನ್ನ ಸ್ನೇಹಿತ ರಘು ಮತ್ತು ತಂಡದಿಂದ ಹಾಡುಗಳ ತೇರು ಶುರುವಾಯಿತು...ಒಂದಾದಮೇಲೆ ಒಂದು ಕವಿಗಳ ರತ್ನಪ್ರಾಯವಾದ ಅಮೋಘ ಕವಿತೆಗಳು, ಇಂಪಾದ ಚಿತ್ರ ಗೀತೆಗಳು..ಕಡೆಗೆ ಕನ್ನಡ ನಾಡಿನ ಎರಡನೇ ನಾಡಗೀತೆಯೆಂದೆ ಚಿರಪರಿಚಿತವಾದ "ಆಕಸ್ಮಿಕ" ಚಿತ್ರದಲ್ಲಿ ಹಂಸಲೇಖ ಅವರು ಕನ್ನಡ ನಾಡಿನ ಇತಿಹಾಸದಲ್ಲಿ ಬರುವ ಮಹನೀಯರನೆಲ್ಲ ಪರಿಚಯ ಮಾಡಿಕೊಡುವ ಅಣ್ಣಾವ್ರು ಉಚ್ಚಸ್ಥಾಯಿಯಲ್ಲಿ ಹಾಡಿರುವ "ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು" ಎನ್ನುವು ಗೀತೆ ಎಲ್ಲರಲ್ಲೂ ಉತ್ಸಾಹ ತುಂಬಿತ್ತು..ಹಲವು ಗೆಳೆಯರ ಒತ್ತಾಯದ ಮೇರೆಗೆ ನನ್ನ ಕಾಲುಗಳನ್ನು ಎತ್ತೆತ್ತಲೋ ಹಾಕುತ್ತ ನೃತ್ಯ ಎನ್ನುವ ಪದದ ಅರ್ಥ ತಿಳಿಯದ ನಾನು ಕಷ್ಟ ಪಡಬೇಕಾಯಿತು...
ಈ ಸಮಾರಂಭ ನನ್ನ ಗೆಳೆಯ ಗೆಳಯತಿಯರನ್ನ ಭೇಟಿ ಮಾಡಲು ಅದ್ಭುತ ಅವಕಾಶ ಮಾಡಿಕೊಟ್ಟಿತು..ಛಾಯಾ, ಆಗ್ನೆಸ್, ಸಂದೀಪ್, ಜೀವೆಂದರ್, ಸಂತೋಷ್, ವಿನಯ್, ವಿನಯಕುಮಾರ್, ರಾಜ, ಶರಣ್, ಅರುಣ್, ಚಂದ್ರು, ಹರೀಶ್, ತಿರುಮಲ, ರಂಗ, ಸುರೇಶಬಾಬು ಕೆ.ಪಿ. , ಸುರೇಶ ಶೃಂಗೇರಿ, ಶ್ರೀದೇವಿ ಸುಬ್ರಮಣ್ಯಮ್ ಇನ್ನು ಅನೇಕರನ್ನು ಮಾತಾಡಿಸಿದಾಗ ಮನಸಿಗೆ ಏನೋ ಅಂದು ಅವರ್ಣನೀಯ ಆನಂದ...
ಇನ್ನೂ ಅನೇಕ ಗೆಳೆಯರಾದ ವಿಕ್ರಂ, ಗಿರೀಶ್, ಪೂರ್ಣ, ಇನ್ನೂ ಅನೇಕ ನೆನಪಿನಲ್ಲಿರುವ ಆದ್ರೆ ಬೇಟಿಮಾಡಲು ಆಗದಕ್ಕೆ ಮನಸು ನೊಂದಿತ್ತು..ಆದ್ರೆ ಇರುವುದೆಲ್ಲವ ಬಿಟ್ಟು ಇರದುದೆಡೆ ತುಡಿಯುವುದೇ ಜೀವನ ಎನ್ನುವ ಮಾತನ್ನು ಸ್ವಲ್ಪ ಮಟ್ಟಿಗೆ ಸುಳ್ಳು ಮಾಡಲು ಸಿಕ್ಕವರನ್ನೆಲ ಮನದಣಿಯೆ ಮಾತನಾಡಿಸಿ ಬಂದದಕ್ಕೆ ಮನಸು ಉಲ್ಲಾಸದಿಂದ ಕುಣಿಯುತಿತ್ತು...
ಇನ್ನೂ ಅನೇಕ ಗೆಳೆಯರಾದ ವಿಕ್ರಂ, ಗಿರೀಶ್, ಪೂರ್ಣ, ಇನ್ನೂ ಅನೇಕ ನೆನಪಿನಲ್ಲಿರುವ ಆದ್ರೆ ಬೇಟಿಮಾಡಲು ಆಗದಕ್ಕೆ ಮನಸು ನೊಂದಿತ್ತು..ಆದ್ರೆ ಇರುವುದೆಲ್ಲವ ಬಿಟ್ಟು ಇರದುದೆಡೆ ತುಡಿಯುವುದೇ ಜೀವನ ಎನ್ನುವ ಮಾತನ್ನು ಸ್ವಲ್ಪ ಮಟ್ಟಿಗೆ ಸುಳ್ಳು ಮಾಡಲು ಸಿಕ್ಕವರನ್ನೆಲ ಮನದಣಿಯೆ ಮಾತನಾಡಿಸಿ ಬಂದದಕ್ಕೆ ಮನಸು ಉಲ್ಲಾಸದಿಂದ ಕುಣಿಯುತಿತ್ತು...
ಸಂಭ್ರಮ ತಂಡದ ಯೋಗೇಶ್, ವಸಂತ್, ಅನುಪ್, ಭಾಸ್ಕರ್, ಮಂಜು ಶಂಕರ್, ನಾಗರಾಜ್, ಹರಿಪ್ರಸಾದ್, ವಿಶ್ವನಾಥ್, ಜೂನಿಯರ್ ಅಣ್ಣಾವ್ರು (ಮನೋಜ್ಞ) ಮತ್ತು ಇನ್ನು ಬರಿ ಕಣ್ಣು ಭಾಷೆಯಲ್ಲೇ ಪರಿಚಯ ಇರುವ ಅನೇಕ ಸ್ನೇಹಿತರ ಜೊತೆಗೂಡಿ ಕಳೆದ ಘಳಿಗೆಗಳು ನನ್ನ ಬಾಳಿನ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದ ಅಧ್ಯಾಯಗಳು...
ಇಂತಹ ಒಂದು ಘಳಿಗೆಗಳಿಗೆ ಅನು ಮಾಡಿಕೊಟ್ಟ ಸಿಸ್ಕೋ ಸಂಸ್ಥೆಗೆ ಹಾಗು ಸಂಭ್ರಮ ತಂಡಕ್ಕೆ ನನ್ನ ಅಭಿನಂದನೆಗಳು ಹಾಗು ಮನಸಿನ ಪ್ರಣಾಮಗಳು...
ಎಲ್ಲರ ಬಳಿಯೂ ಕೆಲವು ನಿಮಿಷಗಳಷ್ಟೇ ಮಾತನಾಡಲು ಸಾಧ್ಯವಾಗಿದ್ದು ಆದ್ರೆ ಅದು ಕೊಟ್ಟ ಸಂತಸ ಅಜರಾಮರ..ಸದಾಕಾಲ ಮೆಲುಕು ಹಾಕೋಣ ಮತ್ತು ಹಂಚಿಕೊಳ್ಳೋಣ ಎನ್ನುವ ಆಶಯದಲ್ಲಿ ಈ ನನ್ನ ಕಿರು ಲೇಖನವನ್ನು ದಾಖಲಿಸಿದ್ದೇನೆ..ನಿಮಗೆ ಖುಶಿ ತಂದರೆ ನನ್ನ ಕಣ್ಣಿನಲ್ಲಿ ಸಣ್ಣ ಆನಂದ ಭಾಷ್ಪಗಳು ಉರುಳುತ್ತವೆ...